Shubha Poonja: ಕನ್ನಡ ಚಿತ್ರರಂಗದ ನಟಿ ಶುಭ ಪೂಂಜಾ ತಾಯಿ ಇನ್ನಿಲ್ಲ

ಕನ್ನಡ ಚಿತ್ರರಂಗದ ಖ್ಯಾತ ನಟಿ ಶುಭ ಪೂಂಜಾ ತಾಯಿ ವಿಧಿವಶರಾಗಿದ್ದಾರೆ. ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಪೂಂಜಾ ತಾಯಿ ಅವರ ಶ್ವಾಸಕೋಶದಲ್ಲಿ ನೀರು ತುಂಬಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿತ್ತು ಎನ್ನಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶುಭ ಪೂಂಜಾ ತಾಯಿ, ಮಾರ್ಚ್ 6ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ತಾಯಿ ವಿಧಿವಶರಾಗಿರುವ ನೋವಿನಲ್ಲಿರುವ ನಟಿ ಶುಭ ಪೂಂಜಾ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. 'ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ. ನೀನು ಇಲ್ಲದೆ ನನಗೆ ಜೀವನವಿಲ್ಲ. ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ. 24 ಗಂಟೆ ನಿನ್ನ ಜೊತೇನೆ ಇರುತ್ತಿದ್ದೆ.

Kannada Actress Shubha Punja s Mother Passes Away

ಈಗ ನಾನು ಏನು ಮಾಡಲಿ ಎಲ್ಲಿ ಹೋಗಲಿ ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ. ನೀನು ನನ್ನ ಯಾಕೆ ಬಿಟ್ಟು ಹೋದೆ ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ' ಎಂದು ನೋವನ್ನು ಹೊರಹಾಕಿದ್ದಾರೆ.

ಮಾರ್ಚ್ 6ರಂದು ಅಂದರೆ ಒಂದು ದಿನ ಹಿಂದೆ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ನನ್ನ ಜೀವನ ಅವಳ ಸುತ್ತ ಮಾತ್ರ ಸುತ್ತುತ್ತಿತ್ತು. ಅವಳೇ ನನ್ನ ಜೀವನ ಆಗಿದ್ದಳು. ನಾನು ಏನೇ ಮಾಡಿದರೂ ಅದು ಅವಳ ಸುತ್ತ ಮಾತ್ರ ಮಾಡುತ್ತಿದ್ದೆ. ಇಂದು ನನ್ನ ಜೀವನ ದುರಸ್ತಿ ಮಾಡಲಾಗದಷ್ಟು ಕುಸಿದು ಹೋಗಿದೆ. ಅವಳಿಲ್ಲದ ಜೀವನವನ್ನು ನಾನು ಊಹಿಸಲೂ ಸಾಧ್ಯವಿಲ್ಲ. ಅವಳಿಲ್ಲದ ನನ್ನ ಜೀವನಕ್ಕೆ ಅರ್ಥವೂ ಇಲ್ಲ. ನನ್ನ ಹೃದಯ ತುಂಡು ತುಂಡುಗಳಾಗಿ ಛಿದ್ರವಾಗಿದೆ. ಏಕೆಂದರೆ ನನ್ನ ತಾಯಿಯೇ ನನಗೆ ಎಲ್ಲವೂ. ನನ್ನ ತಾಯಿ ಜೊತೆ ನನ್ನ ನಗುವೂ ಕಳೆದು ಹೋಗಿದೆ ಎಂದು ನಟಿ ಶುಭ ಪೂಂಜಾ ನೋವಿನ ಪೋಸ್ಟ್‌ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+