ತುಳುನಾಡಿನ ಸಿನಿಮಾಗೆ ‘ಎಕ್ಸ್‌ಕ್ಯೂಸ್‌ ಮಿ’ ಸ್ಟಾರ್ ಸಾಥ್!

ತುಳುನಾಡಿನವರೇ ಸೇರಿ ನಿರ್ಮಾಣ ಮಾಡಿರುವ ಸಿನಿಮಾಗೆ, 'ಎಕ್ಸ್‌ಕ್ಯೂಸ್‌ ಮಿ' ಸ್ಟಾರ್ ಸಾಥ್ ನೀಡಿದ್ದಾರೆ. ತನ್ನ ವಿಭಿನ್ನ ಟೈಟಲ್ ಮೂಲಕವೇ ಗಮನ ಸೆಳೆದ ಸಿನಿಮಾಗೀಗ ನಟ ಅಜಯ್ ರಾವ್ ಜೊತೆಯಾಗಿದ್ದಾರೆ. ಹಾಗಾದರೆ ಯಾವುದು ಆ ಸಿನಿಮಾ? ಚಿತ್ರವು ಯಾವಾಗ ರಿಲೀಸ್ ಆಗಲಿದೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ!

ಹೌದು, ತುಳುನಾಡಿನವರೇ ನಿರ್ಮಿಸಿರುವ 'ಕ್ಲಾಂತ' ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಡೇಟ್ ಫಿಕ್ಸ್ ಆಗಿದೆ. ಜನವರಿ 19ಕ್ಕೆ ರಾಜ್ಯಾದ್ಯಂತ ಈ ಸಿನಿಮಾ ತೆರೆ ಕಾಣಲಿದೆ ಟೀಸರ್ & ಹಾಡಿನ ಮೂಲಕ ಸೌಂಡ್ ಮಾಡಿದ್ದ, ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಟ ಅಜಯ್ ರಾವ್ ಟ್ರೇಲರ್ ರಿಲೀಸ್ ಮಾಡಿದರು. ಹಾಗೇ ಸಿನಿಮಾ ತಂಡಕ್ಕೆ ಇದೇ ವೇಳೆ ಅಜಯ್ ರಾವ್ ಶುಭ ಕೋರಿದ್ದಾರೆ.

Kannada Actress Sangeetha Bhats New Movie Is Prepared For The Release

ಸ್ಯಾಂಡಲ್‌ವುಡ್ ಕೃಷ್ಣ ಹೇಳಿದ್ದೇನು?

ಈ ವೇಳೆ ಮಾತನಾಡಿದ ನಟ & ಸ್ಯಾಂಡಲ್‌ವುಡ್ ಕೃಷ್ಣ ಅಜಯ್ ರಾವ್, ಈ ಟ್ರೇಲರ್ ಆಕ್ಷನ್ ನಿಂದ ಕೂಡಿದೆ. ಹೀರೋ & ಹೀರೋಯಿನ್ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ, ಒಳ್ಳೆ ಪ್ರಯತ್ನ. ಯಾವುದೇ ಆಗಲಿ ಎಲ್ಲದಕ್ಕೂ ಒಂದು ಪ್ರಾರಂಭ ಅಂತ ಇರುತ್ತೆ ಪ್ರಯತ್ನ ಇರುತ್ತದೆ. ಪ್ರಯತ್ನಕ್ಕೂ, ಪ್ರಾರಂಭಕ್ಕೂ ಒಳ್ಳೆ ಉದ್ದೇಶ ಇದ್ದಾಗ ಜಯ ಸಿಗಬೇಕು ಎಂದು ಆಶಿಸಬೇಕು. ನಿರ್ದೇಶಕರು & ಅವರ ಸಹೋದರರು ನನ್ನ ಸ್ನೇಹಿತರು ಇನ್ನ ಹೊಸಬರಿಗೆ ಆದಷ್ಟು ಪ್ರೋತ್ಸಾಹಿಸಿ ಅಂತಾ ಹೇಳಿದ್ರು ಸ್ಯಾಂಡಲ್‌ವುಡ್ ಕೃಷ್ಣ ಅಜಯ್ ರಾವ್.

'ಕ್ಲಾಂತ' ಅರ್ಥ ಏನು ಗೊತ್ತೆ?

ಹಾಗೇ ನಿರ್ದೇಶಕ ವೈಭವ ಪ್ರಶಾಂತ್ ಮಾತನಾಡಿ, ಕ್ಲಾಂತ ಒಂದೂವರೆ ವರ್ಷದ ಜರ್ನಿ ಅಂದ್ರು. ಟ್ರೇಲರ್ ರಿಲೀಸ್ ಮಾಡಿದ್ದೇವೆ. ಶೂಟಿಂಗ್ ಗಾಗಿ 34 ರಿಂದ 40 ದಿನ ಕಾಡಲ್ಲೇ ಇದ್ದೆವು. ಸುಬ್ರಹ್ಮಣ್ಯ, ಕುದುರೆಮುಖ ಕಾಡಲ್ಲಿ ಚಿತ್ರೀಕರಣ ಮಾಡಿದ್ದೇವೆ. ಲಾಕ್ ಡೌನ್ ಟೈಮ್ ನಲ್ಲಿಯೇ ಸ್ಕ್ರಿಪ್ಟ್ ರೆಡಿ ಮಾಡಿದ್ದೆವು. ಕ್ಲಾಂತ ಅರ್ಥ ಏನಂದ್ರೆ ದಣಿವು, ಆಯಾಸ ಎಂದರ್ಥ. ಇದು ಸಂಸ್ಕೃತ ಶಬ್ಧ. ಸಿನಿಮಾದಲ್ಲಿ ಒಟ್ಟು ಮೂರು ಹಾಡುಗಳು ಇವೆ. ಈ ಹಿನ್ನೆಲೆಯಲ್ಲಿ ಸಿನಿಮಾ ತೆರೆಗೆ ತರಲು ಸಿದ್ಧವಾಗಿದ್ದು, ಇದೇ 19ಕ್ಕೆ ಚಿತ್ರ ತೆರೆಗೆ ಬರಲಿದೆ ಎಂದರು.

ನಟ ವಿಘ್ನೇಶ್‌ ಮಾತನಾಡಿ, ಕನ್ನಡದಲ್ಲಿ ನನ್ನದು ಮೊದಲ ಸಿನಿಮಾ. ಜನವರಿ 19 ಕ್ಕೆ ರಾಜ್ಯಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದೆ. ಪ್ರಶಾಂತ್ ಸರ್ & ನನ್ನದು ಇದು 2ನೆಯ ಕಾಂಬಿನೇಷನ್. 'ದಗಲ್ ಬಾಜಿಲು' ಎಂಬ ತುಳು ಚಿತ್ರ ಮಾಡಿದ್ದೆವು. ಅದಕ್ಕೂ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಕ್ಲಾಂತ ಸಿನಿಮಾಗೆ ಒಳ್ಳೆ ಸಕ್ಸಸ್ ಸಿಗುತ್ತೆ ಎಂಬ ಹೋಪ್ ಇದೆ ಅಂದ್ರು.

ನಿರ್ಮಾಣ ಮಾಡಿರುವುದು ಯಾರು?

'ಅನುಗ್ರಹ ಪವರ್‌ ಮೀಡಿಯಾ' ಬ್ಯಾನರಲ್ಲಿ ಉದಯ್‌ ಅಮ್ಮಣ್ಣಾಯ ಕೆ. ನಿರ್ಮಿಸಿರುವ ಕ್ಲಾಂತ ಸಿನಿಮಾಗೆ, ವೈಭವ ಪ್ರಶಾಂತ್‌ ಕಥೆ ಮತ್ತು ಚಿತ್ರಕಥೆ ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ತುಳು & ಕೊಂಕಣಿ ಸಿನಿಮಾಗಳಲ್ಲಿ, ನಾಯಕನಾಗಿ ಅಭಿನಯಿಸಿರುವ ನಟ ವಿಘ್ನೇಶ್‌ ಇದೀಗ ಕ್ಲಾಂತ ಸಿನಿಮಾ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಹೀಗೆ ಪರಿಚಯ ಆಗುತ್ತಿದ್ದಾರೆ.

ಸಂಗೀತಾ ಭಟ್‌ ಅವರ ಜೊತೆಗೆ ಶೋಭರಾಜ್‌, ವೀಣಾ ಸುಂದರ್‌, ಸಂಗೀತಾ, ದೀಪಿಕಾ, ಪ್ರವೀಣ್‌ ಜೈನ್‌, ಸ್ವಪ್ನಾ ಶೆಟ್ಟಿಗಾರ್‌ ಮೊದಲಾದವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದ ಮೂರು ಹಾಡುಗಳಿಗೆ ಎಸ್‌. ಪಿ ಚಂದ್ರಕಾಂತ್‌ ಸಂಗೀತ ಸಂಯೋಜಿಸಿದ್ದಾರೆ. ವಿಜಯ ಪ್ರಕಾಶ್‌, ನಯನಾ ನಾಗರಾಜ್‌, ರಾಜೇಶ್‌ ಕೃಷ್ಣನ್‌, ಚೇತನ್‌ ಸೇರಿದಂತೆ ಐರಾ ಆಚಾರ್ಯ ಮೊದಲಾದವರು ಈ ಸಿನಿಮಾದ ಗೀತೆಗಳಿಗೆ ಧ್ವನಿ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+