ವೇಶ್ಯೆ ಪಾತ್ರ ಒಪ್ಪಿಕೊಂಡ ಕನ್ನಡ ನಟಿ: ಟಾಪ್ ನಟಿಯಾದ್ರೂ ಈ ನಿರ್ಧಾರ ಏಕೆ ಎಂದ ಫ್ಯಾನ್ಸ್
ಕನ್ನಡದ ಮುಗಿಲ್‌ಪೇಟ್ ಸಿನಿಮಾ ಮೂಲಕ ಮೋಡಿ ಮಾಡಿದ್ದ ಖ್ಯಾತ ನಟಿ ಕಯಾದು ಲೋಹರ್ (Kayadu Lohar) ತಮಿಳಿನ ಡ್ರ್ಯಾಗನ್ ಸಿನಿಮಾ ಮೂಲಕ ಫುಲ್ ಫೇಮಸ್ ಆಗಿದ್ದಾರೆ. ಕ್ರಶ್ ಆಗಿ ಕೂಡ ಹಲವರ ಹೃದಯದಲ್ಲಿದ್ದಾರೆ. ಸದ್ಯಕ್ಕೆ ಕಯಾದು ಅವರಿಗೆ ಬೇರೆ ಭಾಷೆಯ ಚಿತ್ರಗಳಿಂದ ಅವಕಾಶಗಳು ಅರಸಿ ಬರುತ್ತಿವೆ. ಇನ್ನೂ ಬೆರಳೆಣಿಕೆ ಸಿನಿಮಾ ಮಾಡಿರುವಾಗಲೇ ಅವರು ದಿಟ್ಟ ನಿರ್ಧಾರ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಹೀರೋಯಿನ್ ಆಗಿ ಮಿಂಚುತ್ತಿರುವಾಗಲೇ ಅವರು ವೇಶ್ಯೆಯ ಪಾತ್ರ ಮಾಡಲು ಒಪ್ಪಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ಟಾಲಿವುಡ್‌ನ ಹೊಸ ಸಿನಿಮಾದಲ್ಲಿ ನಟಿ ಕಯಾದು ವೇಶ್ಯೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರ ಅಭಿಮಾನಿಗಳು ಬಹುತೇಕರು ಇಂತಹ ನಿರ್ಧಾರ ಏಕೆ ಎಂದು ತುಸು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಟಿಯ ವೃತ್ತಿಜೀವನಕ್ಕೆ ಇದು ತುಂಬಾ ದಿಟ್ಟ ನಿರ್ಧಾರ ಎಂದೂ ಹೊಗಳುತ್ತಿದ್ದಾರೆ. ಟಾಲಿವುಡ್‌ನ ನಟ ನ್ಯಾಚುರಲ್ ಸ್ಟಾರ್ ನಾನಿ ಅವರ ಮುಂದಿನ ಸಿನಿಮಾ "ದಿ ಪ್ಯಾರಡೈಸ್"ನಲ್ಲಿ ಕಯಾದು ಲೋಹರ್ ವೇಶ್ಯೆಯಾಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಚಿತ್ರರಂಗದ ಅದೃಷ್ಟ ಬದಲಾಯಿಸಲು ಒಂದೇ ಒಂದು ಹಿಟ್ ಸಾಕು ಎನ್ನುತ್ತಾರೆ. ಅದರಂತೆ ಕಯಾದು ಅವರು 2021ರಲ್ಲಿ ಕನ್ನಡ ಚಿತ್ರ ಮುಗಿಲ್‌ಪೇಟ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಮೊದಲ ಸಿನಿಮಾ ಆಗಿದ್ದರಿಂದ ಅಷ್ಟೊಂದು ಜನಪ್ರಿಯತೆ ಸಿಗಲಿಲ್ಲ. ಬಳಿಕ 2022ರಲ್ಲಿ ಶ್ರೀವಿಷ್ಣು ನಾಯಕನಾಗಿ ನಟಿಸಿದ "ಅಲ್ಲೂರಿ" ಸಿನಿಮಾ ಮೂಲಕ ಟಾಲಿವುಡ್‌ಗೂ ಹೆಜ್ಜೆ ಇಟ್ಟರು. ಆ ಚಿತ್ರ ಸದ್ದು ಮಾಡದಿದ್ದರೂ ಕಯಾದು ಅವರ ಬ್ಯೂಟಿ ಎಲ್ಲರ ಗಮನ ಸೆಳೆದಿತ್ತು.

ಬಳಿಕ ಡ್ರ್ಯಾಗನ್ ಸಿನಿಮಾದಲ್ಲಿ ಎರಡನೇ ಹೀರೋಯಿನ್ ಆದರೂ ಅಂದಕ್ಕೆ ಮನಸೋತವರೇ ಹೆಚ್ಚು. ಆಗಿನಿಂದಲೂ ಅವರು ಡ್ರ್ಯಾಗನ್ ಬ್ಯೂಟಿ ಎಂದೇ ಕರೆಸಿಕೊಳ್ಳುತ್ತಿದ್ದಾರೆ. ತಮಿಳಿನಲ್ಲಿ ಪ್ರದೀಪ್ ರಂಗನಾಥ್ ಅವರೊಂದಿಗೆ ನಟಿಸಿದ್ದು ಕಯಾದು ಅವರ ಅದೃಷ್ಟವನ್ನೇ ಬದಲಾಯಿಸಿತು. ಗ್ಲಾಮರ್ ಜೊತೆಗೆ ನಟನೆಗೆ ಅವಕಾಶಗಳನ್ನು ನೀಡುವ ಪಾತ್ರವಾಗಿದ್ದರಿಂದ ಅವರು ತಮ್ಮ ಎಲ್ಲಾ ಪ್ರತಿಭೆಯನ್ನು ಅಲ್ಲಿ ತೋರಿಸಿದರು. ಈ ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಹಿಟ್ ಆಗಿದ್ದರಿಂದ, ಟಾಲಿವುಡ್ ನಿರ್ಮಾಪಕರು ಈಗ ಮತ್ತೆ ನಟಿಯ ಹಿಂದೆ ಬಿದ್ದಿದ್ದಾರೆ.
ಕಯಾದು ಸಂಭಾವನೆ ಇಷ್ಟಾ?
ಸದ್ಯ ಮುಗಿಲ್‌ಪೇಟೆ ಬಳಿಕ ಕಯಾದು ಬೇರೆ ಭಾಷೆಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲೂ ಸಾಲು ಸಾಲು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಮತ್ತೊಂದೆಡೆ ತೆಲುಗು ಸಿನಿಮಾದಲ್ಲಿ ಮಿಂಚುತ್ತಿದ್ದ ಶ್ರೀಲೀಲಾ ಈಗ ಬಾಲಿವುಡ್‌ಗೆ ಹೋಗಿರುವುದರಿಂದ ನಿರ್ದೇಶಕರ ಕಣ್ಣು ಕಯಾದು ಕಡೆಗೆ ವಾಲಿದೆ. ಕಾಲಿವುಡ್‌ನಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿರುವ ಈ ಸುಂದರಿ, ಪ್ರತಿ ಸಿನಿಮಾಗೆ ಬರೋಬ್ಬರಿ 2 ಕೋಟಿ ಸಂಭಾವನೆ ಕೇಳುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರ ಕ್ರೇಜ್ ನೋಡಿ ನಿರ್ಮಾಪಕರು ಸಂಭಾವನೆಗೆ ಓಕೆ ಎನ್ನುತ್ತಿದ್ದಾರೆ. ತಮಿಳಿನಲ್ಲಿ ನಟ ಸಿಂಬು ಸಿನಿಮಾಗೆ ಅವರು ಆಯ್ಕೆಯಾಗಿದ್ದಾರೆ. ಜಿವಿ ಪ್ರಕಾಶ್ ಅವರ ಮುಂದಿನ ಸಿನಿಮಾಗೂ ಅವರೇ ನಾಯಕಿ ಎನ್ನಲಾಗಿದೆ.












Click it and Unblock the Notifications