ನನ್ನೊಂದಿಗೆ ಮಲಗು ಎಂದು ಕನ್ನಡದ ಖ್ಯಾತ ನಟಿಗೆ ಟಾರ್ಚರ್‌, ನಿರ್ಮಾಪಕ ಅರೆಸ್ಟ್‌

ಚಿತ್ರರಂಗದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಈಗಂತೂ ಸಿನಿಮಾ ಅವಕಾಶ ನೀಡುವ ನೆಪದಲ್ಲಿ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ನೋಡುವುದು, ಆಮಿಷವೊಡ್ಡುವುದು, ನೇರವಾಗಿ ತನ್ನೊಂದಿಗೆ ದೈಹಿಕವಾಗಿ ಸಹಕರಿಸು ಎಂದು ಕೇಳುವ ಕಾಸ್ಟಿಂಗ್‌ ಕೌಚ್‌ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇಂತಹ ಬೀದಿ ಕಾಮುಕರ ಮುಖವಾಡಗಳು ಸಹ ಕಳಚುತ್ತಲೇ ಇವೆ. ಇದೀಗ ಕನ್ನಡದ ಖ್ಯಾತ ನಟಿಯೊಬ್ಬರಿಗೆ ನಿರ್ಮಾಪಕ ನಿರಂತರವಾಗಿ ಟಾರ್ಚರ್‌ ಕೊಟ್ಟಿದ್ದಾನೆ. ನನ್ನೊಂದಿಗೆ ದೈಹಿಕವಾಗಿ ಸಹಕರಿಸು ಎಂದು ಪೀಡಿಸಿದ್ದಾನೆ.

ನಿರ್ಮಾಪಕನ ಕಾಟಕ್ಕೆ ಬೇಸತ್ತು ನಟಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಆತನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ನಿರ್ಮಾಪಕ ಅರವಿಂದ್‌ ವೆಂಕಟೇಶ್‌ ರೆಡ್ಡಿ ಎಂಬುವವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಈತ ರಿಯಲ್ ಎಸ್ಟೇಟ್ ಉದ್ಯಮಿ, ಎವಿಆರ್ ಗ್ರೂಪ್ ಸಂಸ್ಥಾಪಕ, ಅಲ್ಲದೆ ಮಹಾರಾಜ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ಮಾಲೀಕ ಕೂಡ ಎಂದು ತಿಳಿದುಬಂದಿದೆ.

Kannada Actress Harassed Producer Arrested For Torture And Threats

ನಟಿ ಕೊಟ್ಟ ದೂರಿನ ಮೇಲೆ ನಿರ್ಮಾಪಕ ಕಂ ಉದ್ಯಮಿ ಅರವಿಂದ ವೆಂಕಟೇಶ ರೆಡ್ಡಿ ಅರೆಸ್ಟ್ ಆಗಿದ್ದಾರೆ. ನಟಿ ಕೊಟ್ಟ ದೂರಿನಲ್ಲಿ ತಿಳಿಸಿರುವಂತೆ 2021ರಲ್ಲಿ ಅರವಿಂದ್ ವೆಂಕಟೇಶರೆಡ್ಡಿ ಪರಿಚಯವಾಗಿತ್ತು. ಶ್ರೀಲಂಕಾದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಕಪ್ ಮ್ಯಾಚ್ ಉದ್ಘಾಟನಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪಾಲ್ಗೊಳ್ಳುವಂತೆ ಕೇಳಿದ್ದರು. ನಂತರ ವೆಂಕಟೇಶ್ ರೆಡ್ಡಿ ನನ್ನೊಂದಿಗೆ ಆತ್ಮೀಯವಾಗಿ ವರ್ತಿಸಲು ಶುರು ಮಾಡಿದ. ಬಳಿಕ ಕೆಲಕಾಲ ನನ್ನಿಂದ ಅಂತರ ಕಾಯ್ದುಕೊಂಡು ಮತ್ತೆ ಸಂಪರ್ಕಕ್ಕೆ ಬಂದಿದ್ದ. ಅಷ್ಟೊತ್ತಿಗೆ ಆತನ ಕುಡಿತದ ವರ್ತನೆ ಗೊತ್ತಾಗಿ ದೂರವಿದ್ದೆ ಎಂದು ವಿವರಿಸಿದ್ದಾರೆ.

ಫೋಟೋ ಮಾರ್ಫ್‌ ಮಾಡಿ ಕಿರುಕುಳ

ಆತನಿಂದ ಎಷ್ಟು ಅಂತರ ಕಾಯ್ದು ಕೊಳ್ಳಲು ಪ್ರಯತ್ನ ಪಟ್ಟರು ಬಲವಂತವಾಗಿ ನನ್ನ ಹಿಂದೆ ಓಡಾಡುವುದು, ಲೋಕೇಷನ್ ಟ್ರ್ಯಾಕ್‌ ಮಾಡುವುದು, ಇನ್‌ಸ್ಟಾಗ್ರಾಂನಲ್ಲಿ ನನ್ನ ಫೋಟೋ ಮಾರ್ಫ್‌ ಮಾಡಿ ಪೋಸ್ಟ್‌ ಮಾಡಿ ಅವಮಾನ ಮಾಡುವುದು, ಮನೆಗೆ ಹುಡುಗರನ್ನು ಕಳುಹಿಸಿ ಗಲಾಟೆ ಮಾಡಿಸುವುದು, ನನ್ನ ತಮ್ಮ ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನನ್ನೊಂದಿಗೆ ಬಲವಂತದಿಂದ ಸಂಬಂಧ ಇಟ್ಟುಕೊಳ್ಳುವಂತೆ ಕಿರುಕುಳ ನೀಡುತ್ತಿದ್ದ. ಕಳೆದ ವರ್ಷ ಆತನ ಮಾನಸಿಕ, ದೈಹಿಕ ಕಿರುಕುಳ ತಾಳಲಾರದೆ ಮಾನಸಿಕ ಒತ್ತಡ ಹೆಚ್ಚಾಗಿತ್ತು. ನಾಳೆ ನಿಮ್ಮ ನಿವಾಸಕ್ಕೆ ಬರುತ್ತಿದ್ದೇನೆ, ನಿನ್ನ ಜೊತೆಗೆ ಮದುವೆಯಾಗುತ್ತೇನೆ ಎಂದು ಹೆದರಿಸಿದ್ದ. ಆಗ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದಿದ್ದಾರೆ.

ಅದಾದ ನಂತರವೂ ಆತನ ಕಿರುಕುಳ ನಿಲ್ಲಲಿಲ್ಲ. ನಟಿ ವಾಸ ಮಾಡ್ತಿದ್ದ ಮನೆಯ ಅಕ್ಕ ಪಕ್ಕದವರಿಗೆ, ಮನೆಯ ಮಾಲೀಕರಿಗೆ, ನಟಿ ವೇಶ್ಯಾವಾಟಿಕೆ ನಡೆಸ್ತಿದ್ದಾಳೆ ಎಂದು ಸುದ್ದಿ ಹಬ್ಬಿಸಿದ್ದ. ನಂತರ ನಟಿ ಮಹಿಳಾ ಆಯೋಗಕ್ಕೆ ಪತ್ರ ಬರೆದು ದೂರು ನೀಡಿದ್ದರು. ಆಗ ಇನ್ಮುಂದೆ ನಟಿಯ ತಂಟೆಗೆ ಬರಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದ. ಆದರೂ ಮತ್ತೆ ಆತನ ಕಿರುಳುಳ ಮುಂದುವರಿದಿದ್ದರಿಂದ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಈ ಆರೋಪದ ಮೇರೆಗೆ ಆ ನಿರ್ಮಾಪಕನನ್ನ ಪೊಲೀಸರು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+