Darshan Thoogudeepa: ಜೈಲಿಂದ ಬಂದ್ಮೇಲೆ ದರ್ಶನ್ ಮೊದಲ ಬಾರಿ ಸಿನಿಮಾ ವೀಕ್ಷಣೆ, ಯಾವುದು ಗೊತ್ತಾ?
ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ ಕಾರಣ ಅವರು ಸಿನಿಮಾಗಳಿಂದ ದೂರ ಉಳಿಯಬೇಕಾಯಿತು. ಸರಿ ಸುಮಾರು ಮುಕ್ಕಾಲು ವರ್ಷದಿಂದ ಅವರು ಈ ಆರೋಪ ಹೊತ್ತಿದ್ದರಿಂದ ಜೈಲಿನಲ್ಲೇ ತಿಂಗಳುಗಳನ್ನು ಕಳೆದಿದ್ದರು. ಇದರಿಂದ ಅವರು ಸಿನಿಮಾಗಳಿಂದ ದೂರ ಸರಿದಿದ್ದರು. ಸದ್ಯ ಅವರು ಜಾಮೀನು ಪಡೆದು ಹೊರಬಂದಿರುವುದರಿಂದ ಚಿತ್ರರಂಗದ ಕಡೆ ದರ್ಶನ್ ಮತ್ತೆ ಮುಖ ಮಾಡಿದ್ದಾರೆ.
ಡಿಸೆಂಬರ್‌ನಲ್ಲಿ ಅವರಿಗೆ ಜಾಮೀನು ಸಿಕ್ಕ ಕಾರಣ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆದಿದ್ದರು. ಸದ್ಯ ಅವರು ಚಿತ್ರರಂಗದತ್ತ ಗಮನ ಹರಿಸಿದ್ದು, ಬೇರೆ ನಟರ ಸಿನಿಮಾಗಳಿಗೆ ಎಂದಿನಂತೆ ಸಾಥ್ ಕೊಡುವ ಕೆಲಸ ಮಾಡಿದ್ದಾರೆ. ದರ್ಶನ್ ಅವರು ಜೈಲಿನಿಂದ ಹೊರ ಬಂದ ಮೇಲೆ ಮೊದಲ ಬಾರಿಗೆ ಸಿನಿಮಾ ವೀಕ್ಷಿಸಿ ಗಮನ ಸೆಳೆದಿದ್ದಾರೆ.

ದರ್ಶನ್ ಸಹೋದರ ದಿನಕರ್ ತೂಗುದೀಪ ಅವರು ನಿರ್ದೇಶಿಸಿರುವ ರಾಯಲ್ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ. ನಿನ್ನೆ ತಮ್ಮ ಕುಟುಂಬದೊಂದಿಗೆ ಸೇರಿ ಈ ಸಿನಿಮಾ ವೀಕ್ಷಿಸುವ ಮೂಲಕ ಆಲ್ ದಿ ಬೆಸ್ಟ್ ಹೇಳಿದ್ದಾರೆ. ನಿನ್ನೆ ಇಡೀ ಚಿತ್ರತಂಡದೊಂದಿಗೆ ದರ್ಶನ್ ಅವರು ರಾಯಲ್ ಸಿನಿಮಾ ವೀಕ್ಷಿಸಿದ್ದಾರೆ. ದರ್ಶನ್ ಅವರ ಜೊತೆ ಸಹೋದರ ದಿನಕರ್ ತೂಗುದೀಪ, ತಾಯಿ ಮೀನಾ ತೂಗುದೀಪ ಕೂಡ ಇದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋಗಳನ್ನು ಹಂಚಿಕೊಂಡಿರು ದರ್ಶನ್ ಅವರ ಡಿ ಕಂಪನಿ ಅಫೀಶಿಯಲ್, ರಾಯಲ್‌ಗೆ ಗಜ ಬಲ ಎಂದು ಹೇಳಿದೆ. ನಮ್ಮ ಪ್ರೀತಿಯ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ ರಾಯಲ್ ಚಿತ್ರ ಇದೇ ಜನವರಿ 24ರಂದು ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಪೋಸ್ಟ್ ಮಾಡಿದೆ. ನಾಯಕನಾಗಿ ವಿರಾಟ್, ನಾಯಕಿಯಾಗಿ ಸಂಜನಾ ಆನಂದ್ ಜೊತೆ ದೊಡ್ಡ ತಾರ ಬಳಗವಿರುವ ರಾಯಲ್ ಸಿನಿಮಾವನ್ನು ದಿನಕರ್ ತೂಗುದೀಪ ಅವರು ನಿರ್ದೇಶಿಸುತ್ತಿದ್ದಾರೆ.

ದರ್ಶನ್ ಅವರು ಸಾಮಾನ್ಯವಾಗಿ ಉದಯೋನ್ಮುಖ ನಟರ ಸಿನಿಮಾಗಳಿಗೆ ಸಾಥ್ ನೀಡುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸಪೋರ್ಟಿಂಗ್ ಸ್ಟಾರ್ ಎಂದೂ ಕರೆಸಿಕೊಂಡವರು. ಹಲವರ ಸಿನಿಮಾಗಳಿಗೆ ದರ್ಶನ್ ಅವರು ಸಾಥ್ ನೀಡುವ ಮೂಲಕ ಚಿತ್ರರಂಗದಲ್ಲಿ ಬೆಳೆಯಲು ಬೆಂಬಲ ಕೊಟ್ಟಿದ್ದರು. ಈ ಸಾಲಿನಲ್ಲಿ ಈಗಾಗಲೇ ಹಲವು ನಟರಿದ್ದು, ಈ ಸಾಲಿಗೆ ಈಗ ನಟ ವಿರಾಟ್ ಕೂಡ ಸೇರಿಕೊಂಡಿದ್ದಾರೆ.
ದರ್ಶನ್ ಅವರು ಜೈಲಿನಿಂದ ಹೊರಬಂದ ನಂತರ ಸಿನಿಮಾಗಳಿಂದ ದೂರ ಉಳಿದಿದ್ದರು. ಆದರೆ ಇತ್ತೀಚೆಗೆ ಅವರು ತಮ್ಮ ಖಾತೆಯಿಂದಲೇ ಪೋಸ್ಟ್ ಮಾಡುವ ಮೂಲಕ ರಾಯಲ್ ಸಿನಿಮಾಗೆ ಶುಭಕೋರಿದ್ದರು. ನಮ್ಮ ದಿನಕರ್ ನಿರ್ದೇಶನದ ರಾಯಲ್ ಚಿತ್ರದ ಟ್ರೈಲರ್ ಈಗಷ್ಟೇ ಬಿಡುಗಡೆಯಾಗಿದೆ. ಒಳ್ಳೆ ತಾರಾಗಣ ಹಾಗೂ ಕಥೆ ಹೊಂದಿರುವ ಈ ಚಿತ್ರವು ಯಶಸ್ವಿಯಾಗಲಿ ಎಂದು ಆಶಿಸುತ್ತಾ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರುತ್ತದೆ ಎಂದು ನಂಬಿದ್ದೇನೆ. ಇದೇ ಜನವರಿ 24ರಂದು ಚಿತ್ರವು ನಿಮ್ಮ ಮುಂದೆ ಬರಲಿದೆ ಎಂದು ದರ್ಶನ್ ಟ್ವೀಟ್ ಮಾಡಿದ್ದರು. ಇದೀಗ ಸಿನಿಮಾ ವೀಕ್ಷಿಸಲು ಮೂಲಕ ಚಿತ್ರತಂಡಕ್ಕೆ ಆನೆಬಲ ನೀಡಿದ್ದಾರೆ.












Click it and Unblock the Notifications