Actor Darshan: ನಟ ದರ್ಶನ್‌ ಟೀ ಶರ್ಟ್‌ ಹಿಂದೆ ಬಿದ್ದ ಫ್ಯಾನ್ಸ್‌, ಬೆಲೆ ಎಷ್ಟು ಗೊತ್ತಾ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ, ಜಾಮೀನು ಪಡೆದು ಹೊರಬಂದು ರಿಲೀಫ್‌ ಆಗಿದ್ದ ನಟ ದರ್ಶನ್ ತೂಗುದೀಪ ಅವರು ಹಲವು ತಿಂಗಳಿನಿಂದ ಅಭಿಮಾನಿಗಳೊಂದಿಗೆ ಮಾತೇ ಆಡಿರಲಿಲ್ಲ. ಜಾಮೀನು ಸಿಕ್ಕಿ ಹೊರಬಂದ ನಂತರವೂ ಅವರು ಸೈಲೆಂಟ್‌ ಆಗಿದ್ದರು. ಅಭಿಮಾನಿಗಳೆಲ್ಲ ಅವರ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳನ್ನ ದಿನಕ್ಕೊಮ್ಮೆ ನೋಡಿ ಯಾವುದೇ ಅಪ್‌ಡೇಟ್‌ ಸಿಗದೆ ಬೇಸರಗೊಳ್ಳುತ್ತಿದ್ದರು. ಆದರೆ ಇಂದು ದಿಢೀರನೆ ದರ್ಶನ್‌ ಅವರು ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ.

ತಾವು ಜೈಲು ಸೇರಿ ಬಂದಾಗಿನಿಂದ ಮೊದಲ ಬಾರಿಗೆ ದರ್ಶನ್‌ ಅವರು ಅಭಿಮಾನಿಗಳೊಂದಿಗೆ ನೇರವಾಗಿ ಮಾತನಾಡಿದ್ದಾರೆ. ವಿಡಿಯೋದಲ್ಲಿ ಅವರು ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಜೈಲು ಸೇರಿ ಡಲ್‌ ಆಗಿದ್ದ ದರ್ಶನ್‌ ಇಂದು ಹೊಸ ಲುಕ್‌ನಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಮಂಕಾಗಿದ್ದ ದರ್ಶನ್‌ ಅವರು ಹಳೆಯ ಶೈಲಿಗೆ ವಾಪಸ್‌ ಆಗಿದ್ದನ್ನು ಕಂಡು ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ.

Kannada actor Darshan Thoogudeepa s T-shirt has gone viral on social media creating a buzz among fans

ದರ್ಶನ್‌ ಅವರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಎಕ್ಸ್‌ನಲ್ಲಿ ದರ್ಶನ್‌ ಅವರು ಟ್ರೆಂಡಿಂಗ್‌ನಲ್ಲಿದ್ದು, ಇದೇ ವೇಳೆ ಅವರ ಅಭಿಮಾನಿಗಳ ಕಣ್ಣು ದರ್ಶನ್‌ ಧರಿಸಿದ್ದ ಶರ್ಟ್‌ ಮೇಲೆ ಬಿದ್ದಿದೆ. ಇಂದು ಹಂಚಿಕೊಂಡಿರುವ ವಿಡಿಯೋದಲ್ಲಿ ದರ್ಶನ್‌ ಅವರು ಧರಿಸಿದ್ದ ಟೀ ಶರ್ಟ್‌ ಬಗ್ಗೆ ಅವರ ಅಭಿಮಾನಿಗಳೇ ರೀಸರ್ಚ್‌ ಮಾಡಿ ಅದರ ಬೆಲೆ ಏನು? ಎಂದೆಲ್ಲ ಮಾಹಿತಿ ಕಲೆಹಾಕಿದ್ದಾರೆ.

ವಿಡಿಯೋದಲ್ಲಿ ದರ್ಶನ್‌ ಅವರು ಬಿಳಿ ಬಣ್ಣದ ಟೀಶರ್ಟ್‌ ಧರಿಸಿದ್ದು, ಈ ಬಗ್ಗೆ ಫ್ಯಾನ್ಸ್‌ ಕುತೂಹಲದಿಂದ ಗೂಗಲ್‌ನಲ್ಲಿ ಜಾಲಾಡಿ ಶರ್ಟಿನ ಬೆಲೆ ಕೂಡ ಇರುವ ಸ್ಕ್ರೀನ್‌ಶಾಟ್‌ಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ದರ್ಶನ್‌ ಅವರ ಅಭಿಮಾನಿಯೊಬ್ಬರು ದರ್ಶನ್‌ ಧರಿಸಿರುವ ಶರ್ಟ್‌ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಬಾಸ್ ಧರಿಸಿರುವುದು ಏಪ್‌ (Aape) ಪ್ರಿಂಟ್‌ ಕಾಟನ್‌ ಶರ್ಟ್‌, ಇದರ ಬೆಲೆ ಸುಮಾರು 9,500 ರೂಪಾಯಿ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Kannada actor Darshan Thoogudeepa s T-shirt has gone viral on social media creating a buzz among fans

ದರ್ಶನ್‌ ಧರಿಸಿರುವ ಟೀ ಶರ್ಟ್‌ ಕೂಡ ಸದ್ಯ ಟ್ರೆಂಡಿಂಗ್‌ನಲ್ಲಿದೆ. ಅವರ ಅಭಿಮಾನಿಗಳು ಕೂಡ ಡಿಬಾಸ್‌ ಧರಿಸಿರೋ ಟೀಶರ್ಟ್‌ ಖರೀದಿಸಲು ಮುಗಿಬಿದ್ದಿದ್ದಾರೆ. ಕೆಲ ಅಭಿಮಾನಿಗಳು ಈ ಟೀ ಶರ್ಟ್‌ ಸಿಗುವ ವೆಬ್‌ಸೈಟ್‌ನ ಲಿಂಕ್‌ ಸಮೇತ ವಿವರ ಹಂಚಿಕೊಂಡು, "ಬೇಕಾದವ್ರು ಇಲ್ಲಿ ಬುಕ್‌ ಮಾಡಿ ತರಿಸಿಕೊಳ್ರೋ" ಎಂದು ಹೇಳಿದ್ದಾರೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್‌ ಆಗಿವೆ.

ಫ್ಯಾನ್ಸ್‌ಗೆ ಶಾಕ್‌ ಕೊಟ್ಟ ದರ್ಶನ್‌: ವಿಡಿಯೋದಲ್ಲಿ ದರ್ಶನ್‌ ಮೊದಲಿಗೆ ತಮ್ಮ ಹುಟ್ಟುಹಬ್ಬದ ಬಗ್ಗೆ ಮಾತನಾಡಿದ್ದಾರೆ. ಹುಟ್ಟುಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ದರ್ಶನ್‌ ಅವರು ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಈ ಬಾರಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಇದಕ್ಕೆ ದೊಡ್ಡ ಕಾರಣವೇನಿಲ್ಲ, ನನಗೆ ಏನಾಗಿದೆ ಎಂದು ನಿಮಗೂ ಗೊತ್ತು, ನನಗೆ ಬೆನ್ನು ನೋವಿದೆ, ಹಾಗಾಗಿ ತುಂಬಾ ಸಮಯ ನಿಲ್ಲಲು ಆಗಲ್ಲ. ಹಾಗಾಗಿ ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಇದೊಂದು ವರ್ಷ ನನ್ನನ್ನ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. ಇದು ದರ್ಶನ್‌ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+