Darshan thoogudeepa: ನಟ ದರ್ಶನ್‌ಗೆ ಇಂದು ಮಹತ್ವದ ದಿನ!
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮಧ್ಯಂತರ ಜಾಮೀನು ಪಡೆದಿರುವ ನಟ ದರ್ಶನ್ ತೂಗುದೀಪ ಅವರಿಗೆ ಇಂದು ಮಹತ್ವದ ದಿನವಾಗಿದೆ. ಬೆನ್ನುನೋವಿನಿಂದ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಅವರಿಗೆ ಈಗಾಗಲೇ ಕೆಲವು ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಇಂದು ರಿಪೋರ್ಟ್ ಬರಲಿದೆ. ಇದರ ಅನ್ವಯ ದರ್ಶನ್ ಅವರಿಗೆ ಆಪರೇಷನ್ ಮಾಡುವ ಅಗತ್ಯವಿದೆಯೇ ಅಥವಾ ಬೇಡವೇ? ಎಂಬುದು ನಿರ್ಧಾರವಾಗಲಿದೆ.
ಸದ್ಯ ಬೆನ್ನುನೋವಿನ ಸಮಸ್ಯೆಯಿಂದ ನಟ ದರ್ಶನ್ ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಜೈಲಿನಿಂದ ಹೊರಬಂದ ನಂತರ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅವರಿಗೆ ಎಂಆರ್‌ಐ, ಎಕ್ಸ್‌ರೇ ಹಾಗೂ ರಕ್ತದ ಪರೀಕ್ಷೆ ಸಹ ಮಾಡಲಾಗಿದೆ. ಇಂದು ಬಹುತೇಕ ಮೆಡಿಕಲ್ ರಿಪೋರ್ಟ್ ಹೊರಬರಲಿದ್ದು, ಅವರ ಆಪರೇಷನ್ ನಿರ್ಧರಿಸಲಿದೆ.

ಆಸ್ಪತ್ರೆಯ ನರರೋಗ ತಜ್ಞ ಡಾ.ನವೀನ್ ಅಪ್ಪಾಜಿಗೌಡ ನೇತೃತ್ವದ ತಂಡ ಕಳೆದ ಶುಕ್ರವಾರ ದರ್ಶನ್ ಆರೋಗ್ಯ ತಪಾಸಣೆ ನಡೆಸಿತ್ತು. ಈ ವೇಳೆ ದರ್ಶನ್ ಎಡಗಾಲಿನ ಸ್ಪರ್ಶ ಸಂವೇದನೆ ಕಡಿಮೆ ಇತ್ತು ಎನ್ನಲಾಗಿದೆ. ಈ ಹಿನ್ನೆಲೆ ದರ್ಶನ್ ಅವರಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಿ, ಪೇನ್ ಕಿಲ್ಲರ್ ಕೊಡಲಾಗಿತ್ತು.
ಇಂದು ಬರಲಿರುವ ರಿಪೋರ್ಟ್ ಆಧರಿಸಿ, ದರ್ಶನ್ ಅವರಿಗೆ ಆಪರೇಷನ್ ಮಾಡಲೇಬೇಕಾ? ಅಥವಾ ಫಿಸಿಯೋಥೆರಪಿ ಚಿಕಿತ್ಸೆಯಿಂದಲೇ ಸರಿಪಡಿಸಬಹುದೇ ಎಂದು ವೈದ್ಯರು ನಿರ್ಧರಿಸಲಿದ್ದಾರೆ. ಇದನ್ನು ದರ್ಶನ್ ಕುಟುಂಬಸ್ಥರ ನಿರ್ಣಯದ ಮೇರೆಗೆ ವೈದ್ಯರು ಮುಂದಿನ ಹೆಜ್ಜೆ ಇಡಲಿದ್ದಾರೆ.
ಬಿಜಿಎಸ್ ಆಸ್ಪತ್ರೆಯ ವೈದ್ಯರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಅವರಿಗೆ ಒಂದು ರೀತಿ ಸರ್ಪಗಾವಲು ಹಾಕಿದ್ದಾರೆ. ಮಾಧ್ಯಮಗಳು ಹಾಗೂ ಇತರೆ ಮಂದಿಗೆ ದರ್ಶನ್ ಅವರ ಯಾವುದೇ ಮಾಹಿತಿ ಕೊಡಬಾರದು ಎಂದು ವಿಜಯಲಕ್ಷ್ಮಿ ಸೂಚನೆ ನೀಡಿದ್ದಾರಂತೆ.

ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ 4ನೇ ಮಹಡಿಯಲ್ಲಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದು, ನೆಚ್ಚಿನ ನಟನನ್ನು ನೋಡಬೇಕು ಎಂದು ಹಲವರು ಆಸ್ಪತ್ರೆಯ ಬಳಿ ಸೇರುತ್ತಿದ್ದಾರೆ. ಅಲ್ಲದೆ ದರ್ಶನ್ ಅವರ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ಸುದ್ದಿ ಪ್ರಸಾರ ಆಗುತ್ತಿರುವ ಹಿನ್ನೆಲೆ ಅವರ ಜಾಮೀನಿಗೆ ಯಾವುದೇ ಸಮಸ್ಯೆ ಆಗಬಾರದೆಂದು ವಿಜಯಲಕ್ಷ್ಮಿ ಅವರು ಮುಂಜಾಗ್ರತೆ ವಹಿಸಿದ್ದಾರೆ ಎನ್ನಲಾಗಿದೆ.
ಇನ್ನು ಆಸ್ಪತ್ರೆಯಲ್ಲಿ ದರ್ಶನ್ ಅವರನ್ನು ಭೇಟಿಯಾಗಲು ಕೇವಲ ಏಳು ಜನರಿಗಷ್ಟೇ ಅವಕಾಶ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರಂತೆ. ದರ್ಶನ್ ಇರುವ ವಿಶೇಷ ವಾರ್ಡ್‌ಗೆ ಕೇವಲ ಕೆಲವರ ಹೆಸರು ಎಂಟ್ರಿ ಮಾಡಿದರೆ ಮಾತ್ರವೇ ಒಳಗೆ ಬಿಡುವಂತೆ ರೂಲ್ಸ್ ಕೂಡ ಮಾಡಲಾಗಿದೆ.
ವಿಜಯಲಕ್ಷ್ಮಿ ಸೇರಿದಂತೆ ಏಳು ಮಂದಿಗೆ ಮಾತ್ರವೇ ದರ್ಶನ್ ಅವರನ್ನು ಭೇಟಿಯಾಗುವ ಅವಕಾಶ ಕೊಡಲಾಗಿದೆ. ದರ್ಶನ್ ಪುತ್ರ ವಿನೀಶ್, ತಾಯಿ ಮೀನಾ ತೂಗುದೀಪ, ಸಹೋದರಿಯ ಪುತ್ರ ಚಂದ್ರು, ಸಹೋದರ ದಿನಕರ್ ತೂಗುದೀಪ, ನಟ ಧನ್ವೀರ್ ಹಾಗೂ ಸುಶಾಂತ್ ಎಂಬುವವರಿಗೆ ಮಾತ್ರವೇ ದರ್ಶನ್ ಅವರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಹೇಳಲಾಗಿದೆ.
ಇವರನ್ನು ಹೊರತುಪಡಿಸಿ ಇನ್ಯಾರೇ ಬಂದರೂ ದರ್ಶನ್ ಅವರು ಭೇಟಿಗೆ ಅವಕಾಶ ಕೊಡಂಗಿಲ್ಲ, ದರ್ಶನ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಯಾವ ಕಾರಣಕ್ಕೂ ಮಾಹಿತಿ ಹೊರಗೆ ಹೋಗಬಾರದು ಎಂದು ವಿಜಯಲಕ್ಷ್ಮಿ ಅವರು ಖಡಕ್ ಆಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಕೇಸ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ ತೂಗುದೀಪ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಕರ್ನಾಟಕ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ. ಬಳಿಕ ಅವರು ಬಳ್ಳಾರಿ ಜೈಲಿನಿಂದ ಬೆಂಗಳೂರಿಗೆ ಬಂದರು.












Click it and Unblock the Notifications