ದರ್ಶನ್ ಬೆನ್ನಿಗೆ ಬಿದ್ದ ರೌಡಿಗಳು: ಏನ್ ಇದು ಹೊಸ ಕಥೆ?

ದರ್ಶನ್ ತೂಗುದೀಪ್ & ಗ್ಯಾಂಗ್ ಕೊಲೆ ಆರೋಪದ ಹಿನ್ನೆಲೆ ಇದೀಗ ಪರಪ್ಪನ ಅಗ್ರಹಾರ ಜೈಲಲ್ಲಿ ಮುದ್ದೆ ಮುರಿದು ನುಂಗುತ್ತಿದೆ. ಹೀಗಿದ್ದಾಗ ಜೈಲಿನ ಒಳಗೆ ಸಾಕಷ್ಟು ಬೆಳವಣಿಗೆ ಆಗುತ್ತಿದ್ದು, ಜೈಲಿನ ಹೊರಗೂ ಇದೇ ರೀತಿ ಬೆಳವಣಿಗೆಗಳು ನಡೆಯುತ್ತಿವೆ. ಹೀಗಿದ್ದಾಗ ಜೈಲಲ್ಲಿ ಕಂಬಿ ಎಣಿಸುತ್ತಿರುವ, ನಟ ದರ್ಶನ್ ಹಿಂದೆ ರೌಡಿ ಪಡೆಯೇ ಬಿದ್ದಿದೆಯಂತೆ. ಆ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ತಿಳಿಯೋಣ ಮುಂದೆ ಓದಿ.

ದರ್ಶನ್ ಹಲವು ರೌಡಿಗಳ ಜೊತೆ ಸಂಪರ್ಕದಲ್ಲಿ ಇದ್ದರು ಅನ್ನೋ ಆರೋಪ ಇಂದು, ನಿನ್ನೆಯದಲ್ಲ. ಹಲವು ವರ್ಷಗಳಿಂದ ಇದೇ ರೀತಿ ಆರೋಪಗಳು ಕೇಳಿಬಂದವು. ಈಗ ಪೊಲೀಸರಿಗೆ ಕೂಡ ನಟ ದರ್ಶನ್ ತೂಗುದೀಪ್‌ಗೆ ಬೆಂಗಳೂರಿನ ರೌಡಿಗಳು ಸೇರಿ, ಇಡೀ ರಾಜ್ಯದಲ್ಲಿ ಹಲವು ಕಡೆ ರೌಡಿಗಳ ಸಂಪರ್ಕ ಇದೆ ಎಂಬ ಮಾಹಿತಿ ಸಿಕ್ಕಿದೆ ಎಂಬ ಬಗ್ಗೆ ಆರೋಪ ಕೇಳಿಬಂದಿದೆ. ಪರಿಸ್ಥಿತಿ ಹೀಗಿದ್ದಾಗ ದರ್ಶನ್ ಹಿಂದೆ ರೌಡಿ ಪಡೆ ಬಿದ್ದಿರುವುದು ಯಾಕೆ? ಹಾಗಾದ್ರೆ ಈಗ ಜೈಲಲ್ಲಿ ದರ್ಶನ್ ಇರುವ ಜೈಲಿನ ಕೊಠಡಿಗೆ ದಿಢೀರ್ ಭದ್ರತೆ ಹೆಚ್ಚಿಸಿದ್ದು ಏಕೆ? ಜೈಲು ಅಧಿಕಾರಿಗಳಿಗೆ ಕಾಡುತ್ತಿರುವ ಭಯ ಏನು? ಪೂರ್ಣ ಮಾಹಿತಿ ಮುಂದೆ ಇದೆ.

Kannada Actor Darshan Thoogudeepa May Get Good Hospitality From These People

ದರ್ಶನ್ ಬೆನ್ನಿಗೆ ನಾಗ & ಸೈಕಲ್ ರವಿ?

ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ A2 ಆರೋಪಿ ಆಗಿದ್ದಾರೆ ಅಲ್ಲದೆ ಕಂಬಿ ಎಣಿಸುತ್ತಿದ್ದಾರೆ. ಹೀಗಿದ್ದಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ಗೆ ಸೇವೆ ಮಾಡಲು ಅಂದ್ರೆ ಆತಿಥ್ಯ ನೀಡಲು ಬೆಂಗಳೂರಿನ ರೌಡಿ ಶೀಟರ್ ನಾಗ & ಸೈಕಲ್ ರವಿ ನಡುವೆ ಇದೀಗ ಭರ್ಜರಿಯಾಗಿ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.

ಈ ಬಗ್ಗೆ ಸ್ಫೋಟಕ ಹಾಗೂ ಭಯಾನಕ ಮಾಹಿತಿಯನ್ನ ಕನ್ನಡದ ಟಿವಿ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಇದೇ ಸಮಯದಲ್ಲಿ ರೌಡಿ ಶೀಟರ್ ನಾಗ ಜೈಲಿನಲ್ಲೇ ಇದ್ದು, ಜೈಲಿನಿಂದ ಹೊರಗೆ ಇರುವ ಸೈಕಲ್ ರವಿ ತನ್ನ ಹುಡುಗರ ಮೂಲಕ ದರ್ಶನ್‌ಗೆ ಆತಿಥ್ಯ ನೀಡಲು ಮುಂದಾಗಿರುವ ಆರೋಪ ಕೇಳಿಬಂದಿದೆ. ಈ ಸುದ್ದಿ ಇದೀಗ ಸಂಚಲನವನ್ನೇ ಸೃಷ್ಟಿ ಮಾಡಿದೆ.

ದರ್ಶನ್ ಹೆಸರಿನ ಜೊತೆ ರೌಡಿ ಪಟ್ಟ?

2011ರಲ್ಲಿ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಲ್ಲಿ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಮತ್ತು ಹಲವು ನಿರ್ಮಾಪಕ & ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಈಗ ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಪೊಲೀಸರು ಅಂತಿಮ ಸಿದ್ಧತೆಗಳ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+