Darshan Thoogudeepa: ಬಳ್ಳಾರಿ ಜೈಲಿನಲ್ಲಿ ಟಾಯ್ಲೆಟ್ ತೊಳೆಯುತ್ತಿರುವ ಕೊಲೆ ಆರೋಪಿ ದರ್ಶನ್ ತೂಗುದೀಪ!
ಡಿ-ಬಾಸ್.. ಡಿ-ಬಾಸ್.. ಅಂತಾ ಹೊರಗೆ ಮೆರೆಯುತ್ತಿದ್ದ ದರ್ಶನ್ ತೂಗುದೀಪ ಕೋಪದ ಕೈಗೆ ಬುದ್ಧಿ ಕೊಟ್ಟು ಈಗ ನರಳುವ ಪರಿಸ್ಥಿತಿ ಬಂದಿದೆ. ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಆರೋಪದ ಕಾರಣಕ್ಕೆ ಅಂದರ್ ಆಗಿ, ಬಳ್ಳಾರಿ ಜೈಲಿನಲ್ಲಿ ನರಳುತ್ತಿರುವ ದರ್ಶನ್ ತೂಗುದೀಪ ಒಂದು ಟಿವಿ ಬೇಕು ಅಂತಾ ಕಾಲು ಹಿಡಿಯುವ ಪರಿಸ್ಥಿತಿ ಬಂದಿದೆ. ಹಾಗಾದ್ರೆ ಬಳ್ಳಾರಿ ಜೈಲಲ್ಲಿ ನಟ ದರ್ಶನ್ ತೂಗುದೀಪ ಟಾಯ್ಲೆಟ್ ತೊಳೆಯಲು ಕಾರಣ ಏನು? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ದರ್ಶನ್ ತೂಗುದೀಪ್ ಪರಿಸ್ಥಿತಿ ಬಿಸಿ ತುಪ್ಪ ಬಾಯಲ್ಲಿ ಇಟ್ಟುಕೊಂಡಂತೆ ಆಗಿದೆ. ಯಾಕಂದ್ರೆ ತನ್ನ ಪ್ರಿಯತಮೆ ಪವಿತ್ರಾ ಗೌಡಾಳ ಕಾರಣಕ್ಕೆ ರೇಣುಕಾಸ್ವಾಮಿ ಎಂಬ ವ್ಯಕ್ತಿ ಕೊಲೆಯನ್ನು ಮಾಡಿರುವ ಆರೋಪ ದರ್ಶನ್ ತೂಗುದೀಪನ ವಿರುದ್ಧ ಕೇಳಿ ಬಂದಿದೆ. ಇದೇ ಕಾರಣಕ್ಕೆ ಈ ನಟ ಬಳ್ಳಾರಿ ಜೈಲು ಸೇರಿ ಪರದಾಡುತ್ತಿದ್ದಾನೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಸಿಗರೇಟು & ಎಣ್ಣೆ & ಬಿರಿಯಾನಿ ಅಂತಾ ಮಜಾ ಮಾಡಿಕೊಂಡು ಬದುಕಿದ್ದ ದರ್ಶನ್ ತೂಗುದೀಪ್ ಎಂಬ ಆರೋಪ ಇತ್ತು. ಅಲ್ಲದೆ ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರದ ಜೈಲಿನ ಕೋಣೆಗಳಲ್ಲಿ ಮಜಾ ಮಾಡುತ್ತಿರುವ ವಿಡಿಯೋಸ್ & ಫೋಟೋ ವೈರಲ್ ಆಗಿತ್ತು. ಇದೇ ಕಾರಣಕ್ಕೆ ದರ್ಶನ್ ತೂಗುದೀಪ್ ಬಳ್ಳಾರಿಗೆ ಎತ್ತಂಗಡಿ ಆಗಿದ್ದು, ಟಾಯ್ಲೆಟ್ ಕೂಡ...

ಟಾಯ್ಲೆಟ್ ತೊಳೆದ ದಾಸ ದರ್ಶನ್!
ಕನ್ನಡ ಸಿನಿಮಾ ರಂಗದ ದುಬಾರಿ ಹೀರೋ ಎನಿಸಿಕೊಂಡಿದ್ದ ದರ್ಶನ್ ತೂಗುದೀಪ್ ಈಗ ಬಳ್ಳಾರಿ ಜೈಲಿನಲ್ಲಿ ಸಾಮಾನ್ಯ ಖೈದಿ. ಅದರಲ್ಲೂ ಹೆಚ್ಚಿನ ಭದ್ರತೆ ಇರುವ ಜೈಲು ಕೋಣೆ ಒಳಗೆ ಒಬ್ಬನೇ ಪರದಾಡುತ್ತಿರುವ ದರ್ಶನ್ ತೂಗುದೀಪ್ ತನ್ನ ಕೆಲಸ ತಾನೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಅದರಲ್ಲೂ ಬಳ್ಳಾರಿ ಜೈಲಿನಲ್ಲಿ ತನ್ನ ಟಾಯ್ಲೆಟ್ ತಾನೇ ತೊಳೆಯುತ್ತಾ ಹಾಗೂ ತನ್ನ ಜೈಲಿನ ಕೋಣೆಯ ಒಳಗೆ ಕಸ ಗುಡಿಸಿಕೊಂಡು ಬದುಕುವ ಪರಿಸ್ಥಿತಿ ಇದೀಗ ನಿರ್ಮಾಣ ಆಗಿದೆ.
ಬಟ್ಟೆ ಒಗೆಯುತ್ತಿರುವ ದರ್ಶನ್ ತೂಗುದೀಪ!
ಟಾಯ್ಲೆಟ್ ಮಾತ್ರ ಅಲ್ಲದೆ ದರ್ಶನ್ ತೂಗುದೀಪ ಇದೀಗ ಬಳ್ಳಾರಿ ಜೈಲಿನಲ್ಲಿ ತನ್ನ ಬಟ್ಟೆಯ ತಾನೇ ಒಗೆಯುವ ಸ್ಥಿತಿ ಇದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್‌ಗೆ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತಿದ್ದರು ಸಹ ಖೈದಿಗಳು. ಇದೀಗ ಬಳ್ಳಾರಿ ಜೈಲು ದರ್ಶನ್ ತೂಗುದೀಪನಿಗೆ ನರಕದಂತೆ ಆಗಿದೆ. ಹೀಗಾಗಿ ತನ್ನ ಜೈಲಿನ ಕೋಣೆ ಒಳಗೆ ತಾನೇ ಟಾಯ್ಲೆಟ್ ತೊಳೆಯುತ್ತಾ, ಕಸ ಗುಡಿಸಿಕೊಂಡು & ನೆಲ ಒರೆಸಿ, ಬಟ್ಟೆ ಕೂಡ ತೊಳೆಯುತ್ತಾ ಜೀವನ ಕಳೆಯುವಂತೆ ಆಗಿದೆ ದಾಸ ದರ್ಶನ್!












Click it and Unblock the Notifications