Darshan Thoogudeepa: ಗಣೇಶ ಚತುರ್ಥಿಗೆ ನಟ ದರ್ಶನ್‌ಗೆ ಸಿಕ್ತು ಸ್ಪೆಷಲ್ ಗಿಫ್ಟ್; ಏನದು?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸದ್ಯ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರಿಗೆ ಗಣೇಶ ಚತುರ್ಥಿ ದಿನವೇ ಒಂದು ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದ ದರ್ಶನ್, ಪೊಲೀಸರ ಬಳಿ ಕೆಲವು ವಸ್ತುಗಳಿಗೆ ಬೇಡಿಕೆ ಇಟ್ಟಿದ್ದರು. ಅದರಂತೆ ಪೊಲೀಸರು ಕೂಡ ದರ್ಶನ್ ಅವರ ಬೇಡಿಕೆಗಳನ್ನು ಒಂದೊಂದಾಗಿ ಈಡೇರಿಸುತ್ತಾ ಬಂದಿದ್ದರು. ಇಂದು ಹಬ್ಬದ ದಿನವೇ ನಟ ದರ್ಶನ್ ಅವರ ಕೋರಿಕೆ ಈಡೇರಿದೆ.
ಐದು ದಿನಗಳ ಹಿಂದಷ್ಟೇ ನಟ ದರ್ಶನ್ ಜೈಲಿನಲ್ಲಿ ನನಗೆ ಟಿ.ವಿ. ವ್ಯವಸ್ಥೆ ಮಾಡುವಂತೆ ಜೈಲಾಧಿಕಾರಿಗಳ ಮುಂದೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪಿಗೆ ನೀಡಿದ್ದ ಅಧಿಕಾರಿಗಳು ಇಂದು ಬೆಳಿಗ್ಗೆಯೇ ದರ್ಶನ್ ಸೆಲ್‌ನಲ್ಲಿ ಟಿ.ವಿ. ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಮೇಲಿನ ಕೇಸ್ ವಿಚಾರಗಳು, ಚಾರ್ಜ್‌ಶೀಟ್ ಸಲ್ಲಿಕೆ ಹಾಗೂ ಜೈಲಿನಿಂದ ಹೊರಗೆ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತಿವೆ? ಎಂಬುದರ ಬಗ್ಗೆ ದರ್ಶನ್ ಅವರಿಗೆ ಕುತೂಹಲವಿದ್ದು, ಈ ಕಾರಣಕ್ಕಾಗಿಯೇ ಅವರು ಟಿ.ವಿ ಬೇಕೆಂದು ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ದರ್ಶನ್ ಕೇಳಿದ ಕೂಡಲೇ ಟಿ.ವಿ. ವ್ಯವಸ್ಥೆ ಮಾಡಲು ಅಧಿಕಾರಿಗಳು ಮುಂದಾಗಿರಲಿಲ್ಲ. ಏಕೆಂದರೆ, ಇದ್ದ ಟಿ.ವಿ.ರಿಪೇರಿಯಾಗಿತ್ತು. ಇದೀಗ ಜೈಲಿನ ನಿಯಮದಂತೆಯೇ ಟಿ.ವಿ. ನೀಡಲಾಗಿದೆ. ಇಂದಿನಿಂದ ದರ್ಶನ್ ಹೊರ ಜಗತ್ತಿನ ಬಗ್ಗೆ ಟಿ.ವಿ.ಗಳಲ್ಲಿ ಮಾಹಿತಿ ತಿಳಿದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಆಗಿದ್ದ ನಟ ದರ್ಶನ್ ಇಲ್ಲಿನ ಜೈಲಿನಲ್ಲಿದ್ದ ಇಂಡಿಯನ್ ಟಾಯ್ಲೆಟ್ ಬದಲಿಗೆ ವೆಸ್ಟರ್ನ್ ಟಾಯ್ಲೆಟ್ ಬೇಕೆಂದು ಮನವಿ ಮಾಡಿದ್ದರು. ಅದರಂತೆ ಪೊಲೀಸರು ವೆಸ್ಟರ್ನ್ ಟಾಯ್ಲೆಟ್ ವ್ಯವಸ್ಥೆಯೂ ಮಾಡಿ ದರ್ಶನ್ ಕೋರಿಕೆ ಈಡೇರಿಸಿದ್ದರು. ಇದೀಗ ಅವರ ಟಿ.ವಿ. ಬೇಡಿಕೆಯೂ ಈಡೇರಿದೆ.

ಅದರಂತೆ ಬಳ್ಳಾರಿ ಜೈಲಿಗೆ ದರ್ಶನ್ ಅವರು ಸ್ಥಳಾಂತರಿಸಲಾಗಿದೆ. ಇದರ ಜೊತೆಗೆ ಪರಪ್ಪನ ಅಗ್ರಹಾರದಲ್ಲಿ ನಡೆದ ಯಾವ ಘಟನೆಗಳೂ ಬಳ್ಳಾರಿಯಲ್ಲಿ ಮರುಕಳಿಸಬಾರದು ಎಂದು ಈ ಬಾರಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ದರ್ಶನ್ ಬೆಂಗಳೂರಿನಲ್ಲಿರುವಂತೆ ಬಳ್ಳಾರಿ ಜೈಲಿನಲ್ಲಿರಲು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ.
ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಕಾರಾಗೃಹ ಹಿರಿಯ ಅಧಿಕಾರಿಗಳು ವಿಶೇಷ ರೂಲ್ಸ್ ಜಾರಿ ತಂದಿದ್ದಾರೆ. ಅದೇನಂದ್ರೆ, ದರ್ಶನ್ ಅವರನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಬೇಕು ಹಾಗೂ ಆ ಸೆಲ್‌ಗೆ 24x7 ಅವಧಿಗೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಬೇಕು. ಪ್ರತಿದಿನವೂ ಈ ರೆಕಾರ್ಡಿಂಗ್‌ಗಳನ್ನು ಸ್ಟೋರೇಜ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ದರ್ಶನ್ ಇರುವ ಸೆಲ್ ಕಾಯಲು ಪ್ರತ್ಯೇಕವಾಗಿ ಒಬ್ಬ ಅಧಿಕಾರಿ ಇರಲಿದ್ದಾರೆ. ಈ ಸೆಲ್‌ಗೆ ಜೈಲರ್ ಪ್ರತಿದಿನ ಭೇಟಿ ನೀಡಿ ಭದ್ರತೆಯನ್ನು ಚೆಕ್ ಮಾಡಲಿದ್ದಾರೆ. ಜೈಲಿನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸೆಲ್‌ಗೆ ಬೀಗ ಹಾಕುವುದು ಮತ್ತು ಬೀಗ ತೆಗೆಯುವುದು ನಡೆಯಲಿದೆ. ದರ್ಶನ್ ಸೆಲ್‌ಗೆ ನಿಯೋಜಿಸುವ ಅಧಿಕಾರಿ ಕಡ್ಡಾಯವಾಗಿ ಬಾಡಿವೋರ್ನ್' ಕ್ಯಾಮೆರಾ ಧರಿಸಲಿದ್ದಾರೆ. ಹಾಗಾಗಿ ದರ್ಶನ್ ಅವರ ಪ್ರತಿ ಚಲನವಲನವೂ ಕಣ್ಗಾವಲಿನಲ್ಲಿರಲಿದೆ.
ಭೇಟಿಗೆ ಯಾರಿಗೆಲ್ಲ ಅವಕಾಶ?: ಇನ್ನು ನಟ ದರ್ಶನ್ ಭೇಟಿ ವಿಚಾರದಲ್ಲೂ ಅಧಿಕಾರಿಗಳು ಖಡಕ್ ರೂಲ್ಸ್ ತಂದಿದ್ದಾರೆ. ದರ್ಶನ್ ಭೇಟಿಗೆ ಬರುವವರ ಪೈಕಿ ಅವರ ಪತ್ನಿ, ರಕ್ತಸಂಬಂಧಿ ಹಾಗೂ ವಕೀಲರ ಭೇಟಿಗೆ ಮಾತ್ರ ಅವಕಾಶ ಸಿಗಲಿದೆ. ಉಳಿದಂತೆ ಸಿನಿಮಾ ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಅಥವಾ ರಾಜಕೀಯ ನಾಯಕರ ಭೇಟಿಗೆ ಅವಕಾಶ ಇರುವುದಿಲ್ಲ.












Click it and Unblock the Notifications