Kamal Haasan: ತಮಿಳುನಾಡಿಗೆ ಜಯವಾಗಲಿ ಕಮಲ್‌ ಹಾಸನ್‌ ಪೋಸ್ಟ್‌ ವೈರಲ್‌!

Kamal Haasan: ನಟ ಹಾಗೂ ರಾಜಕಾರಣಿ ಕಮಲ್‌ ಹಾಸನ್‌ ಅವರು ಕಳೆದ ಒಂದು ವಾರದಿಂದಲೂ ಸುದ್ದಿಯಲ್ಲಿದ್ದಾರೆ. ಕಮಲ್‌ ಹಾಸನ್‌ ಅವರು ಕನ್ನಡದ ಹುಟ್ಟು ತಮಿಳಿನಿಂದ ಆಗಿದೆ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಕ್ಷಮೆ ಕೇಳಬೇಕು ಎಂದು ಕನ್ನಡಿಗರು ಆಗ್ರಹಿಸುತ್ತಿದ್ದರೂ ಕಮಲ್‌ ಅವರು ಇದಕ್ಕೆ ಮಣಿಯುತ್ತಿಲ್ಲ. ಇಷ್ಟೆಲ್ಲ ಆಕ್ರೋಶ ವ್ಯಕ್ತವಾದರೂ ಅವರು ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಿಲ್ಲ. ಕನ್ನಡ ಅಸ್ಮಿತೆಯ ವಿಚಾರಕ್ಕೆ ಸಂಬಂಧಿಸಿಂದತೆ ಕಮಲ್‌ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಅವರು ತಮಿಳುನಾಡಿನ ಬಗ್ಗೆ ಬರೆದುಕೊಂಡಿರುವ ಪೋಸ್ಟ್‌ವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಕಮಲ್‌ ಹಾಸನ್ ಅವರು ಕೇವಲ ನಟ ಮಾತ್ರವಲ್ಲ. ಅವರು ಇದೀಗ ರಾಜಕಾರಣಿಯೂ ಹೌದು. ಕಮಲ್‌ ಹಾಸನ್‌ ಅವರು ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ನೀದಿ ಮೈಯಂ ಎನ್ನುವ ಪಾರ್ಟಿಯನ್ನು ಪ್ರಾರಂಭಿಸಿದ್ದಾರೆ. ಆದರೆ, ಈ ಪಾರ್ಟಿ ಹೇಳಿಕೊಳ್ಳುವಂತಹ ಯಶಸ್ಸನ್ನು ಸಾಧಿಸಿಲ್ಲ. ಆದರೆ, ಕಮಲ್‌ ಹಾಸನ್‌ ಅವರು ರಾಜಕೀಯುದಲ್ಲಿ ಸಕ್ರಿಯರಾಗಿದ್ದು. ಇದೀಗ ತಮಿಳುನಾಡಿನ ಆಡಳಿತರೂಢ ಪಾರ್ಟಿ ದ್ರಾವಿಡ ಮುನ್ನೇತ್ರ ಕಳಗಂ ದೊಂದಿಗೆ ಕೈ ಜೋಡಿಸಿದ್ದಾರೆ. ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಕಮಲ್‌ ಹಾಸನ್‌ ಅವರಿಗೆ ರಾಜ್ಯಸಭೆಗೆ ಟಿಕೆಟ್‌ ನೀಡಿದೆ.

Kamal Haasan s post wishing Tamil Nadu victory goes viral

ತಮಿಳುನಾಡಿನಲ್ಲಿ ರಾಜಕೀಯ ನೆಲೆಯನ್ನು ಕಮಲ್‌ ಅವರು ಕಂಡುಕೊಳ್ಳುವುದಕ್ಕೆ ಒಂದು ದಶಕಕ್ಕೂ ಹೆಚ್ಚಿನ ಅವಧಿಯಿಂದ ಶ್ರಮಿಸುತ್ತಿದ್ದಾರಾದರೂ ಅವರಿಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಇದೀಗ ಅವರು ಡಿಎಂಕೆಯೊಂದಿಗೆ ಕೈಜೋಡಿಸಿದ್ದಾರೆ. ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ದ್ರಾವಿಡ - ತಮಿಳು ಭಾಷೆ ವಿಚಾರಗಳ ಬಗ್ಗೆ ಹೆಚ್ಚು ಒಲವು ಹೊಂದಿದೆ. ಈ ಪಾರ್ಟಿ ನಡೆದುಕೊಂಡು ಬಂದಿದ್ದೇ ಆರ್ಯನ್ನರ ಪ್ರಭಾವ ತಮಿಳು ಹಾಗೂ ದ್ರಾವಿಡದ ಮೇಲೆ ಆಗಬಾರದು ಎಂದು ಚಳವಳಿ ಹಾಗೂ ಅಭಿಯಾನಗಳನ್ನು ನಡೆಸಿಕೊಂಡು ಬರುವ ಮೂಲಕ ಇದೀಗ ಕಮಲ್‌ ಅವರು ತಮಿಳಿನ ಬಗ್ಗೆ ಇಷ್ಟೊಂದು ಪ್ರೀತಿಯಿಂದ ಮಾತನಾಡುತ್ತಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆಯೇ ಎನ್ನುವ ಬಗ್ಗೆ ಚರ್ಚೆ ಆಗುತ್ತಿದೆ. ಮೊದಲೇ ಹೇಳಿದಂತೆ ನಟ ಕಮಲ್‌ ಹಾಸನ್‌ ಅವರು ಈಗ ಕೇವಲ ನಟರಾಗಿ ಉಳಿದಿಲ್ಲ.

ತಮಿಳುನಾಡಿಗೆ ಜಯವಾಗಲಿ: ಇನ್ನು ನಟ ಕಮಲ್‌ ಹಾಸನ್‌ ಅವರು ಅವರ ಸೋಷಿಯಲ್‌ ಮೀಡಿಯಾ ಖಾತೆ ಎಕ್ಸ್‌ನಲ್ಲಿ ತಮಿಳುನಾಡಿಗೆ ಜಯವಾಗಲಿ ಅಂತ ಬರೆದುಕೊಂಡಿರುವುದು ಈಗ ವೈರಲ್‌ ಆಗುತ್ತಿದೆ. ತಮಿಳುನಾಡಿಗೆ ಜಯವಾಗಲಿ ಅಂತ ಅವರು ಕನ್ನಡ ಸೇರಿದಂತೆ ವಿವಿಧ ಭಾಷೆಯಲ್ಲಿ ಬರೆದುಕೊಂಡಿದ್ದಾರೆ.

ಪಂಚ ಭಾಷೆಗಳಲ್ಲಿ ನಟ ಕಮಲ್‌ ಹಾಸನ್‌ ಅವರು ತಮಿಳುನಾಡಿಗೆ ಜಯವಾಗಲಿ ಅಂತ ಬರೆದುಕೊಂಡಿದ್ದಾರೆ. ಇದು ಗಮನ ಸೆಳೆಯುತ್ತಿದೆ. ಕನ್ನಡ - ತಮಿಳು ಭಾಷಾ ವಿವಾದದ ನಡುವೆ ಇವರ ಪೋಸ್ಟ್‌ ಗಮನ ಸೆಳೆದಿದೆ. (ಮುಖಪುಟದ ಫೋಟೋ) ಎಲ್ಲಾ ಭಾಷೆಯಲ್ಲೂ ಬರೆದಿದ್ದು ತಮಿಳಿನಲ್ಲಿ ದೊಡ್ಡದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+