Kiccha Sudeep: ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ: ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್! ತೇಲಿಸುವ ಪ್ರಶ್ನೆಯೇ ಇಲ್ಲ...
Kiccha Sudeep: ನಟ ಕಿಚ್ಚ ಸುದೀಪ್ ಅವರು ಇದೇ ಮೊದಲ ಬಾರಿ ನಟ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ನಟ ಕಮಲ್ ಹಾಸನ್ ಅವರು ತಮಿಳಿನಿಂದಲೇ ಕನ್ನಡ ಬಂದಿದೆ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ನಟ ಕಮಲ್ ಹಾಸನ್ ಅವರ ಹೇಳಿಕೆಯನ್ನು ಕನ್ನಡದ ಯಾವ ನಟರೂ ಟೀಕಿಸಲಿಲ್ಲ. ಮಾತನಾಡಲಿಲ್ಲ ಅಲ್ಲದೇ ಚಿತ್ರರಂಗವು ಈ ವಿಚಾರವಾಗಿ ಮಾತನಾಡಲಿಲ್ಲ ಎನ್ನುವ ಆರೋಪಗಳು ಸಹ ಕೇಳಿ ಬಂದಿದ್ದವು. ಇದೀಗ ಇದೇ ಮೊದಲ ಬಾರಿಗೆ ನಟ ಕಿಚ್ಚ ಸುದೀಪ್ ಅವರು ಕಮಲ್ ಹಾಸನ್ ಅವರ ಹೇಳಿಕೆಯ ವಿಚಾರವಾಗಿ ಅತ್ಯಂತ ಮುಕ್ತವಾಗಿ ಮಾತನಾಡಿದ್ದಾರೆ. ಆದರೆ ಈ ವಿಚಾರವಾಗಿ ಪರ - ವಿರೋಧ ಚರ್ಚೆ ಶುರುವಾಗಿದೆ. ಶಿವ ರಾಜ್‌ಕುಮಾರ್ ಅವರ ರೀತಿಯೇ ನಟ ಕಿಚ್ಚ ಸುದೀಪ್ ಅವರು ಸಹ ಕಮಲ್ ಹಾಸನ್ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಜನ ಮಾಡುತ್ತಿದ್ದಾರೆ.
ಕಿಚ್ಚ ಸುದೀಪ್ ಅವರು ಖಡಕ್ ಮಾತು ಹಾಗೂ ನೇರ ನುಡಿಗಳಿಂದಲೇ ಫೇಮಸ್. ರಾಜಕಾರಣಿಗಳನ್ನೇ ಅವರು ಬಿಟ್ಟಿರುವ ಉದಾಹರಣೆ ಇಲ್ಲ. ಇನ್ನು ಇದೀಗ ನಟ ಕಿಚ್ಚ ಸುದೀಪ್ ಅವರು ಕಮಲ್ ಹಾಸನ್ ಅವರ ವಿಚಾರವಾಗಿ ಯಾವ ಕಾರಣಕ್ಕೆ ಮಾತನಾಡಿಲ್ಲ ಎನ್ನುವುದನ್ನು ಹೇಳಿದ್ದಾರೆ. ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಕನ್ನಡದ ವಿಷಯ ಬಂದಾಗ ಕನ್ನಡ ಚಿತ್ರರಂಗ ಯಾಕೆ ಮಾತನಾಡುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, ನಾವು ಮಾತನಾಡದೆ ಇರುವುದಕ್ಕೆ ಒಂದಾಗಿಲ್ಲ ಎಂದು ಕೊಳ್ಳಬೇಡಿ. ಒಂದಾಗಿರುವುದಕ್ಕೇ ಮಾತನಾಡಿಲ್ಲ ಅಂತ ನಟ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

ನಟ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಗೆ ಯಾರೂ ಪ್ರತಿಕ್ರಿಯಿಸಲಿಲ್ಲವೇಕೆ ಎನ್ನುವುದಕ್ಕೆ ಅವರು ಉತ್ತರಿಸಿದ್ದಾರೆ. ಯಾಕೆಂದರೆ ಆ ಕಲಾವಿದ (ಕಮಲ್ ಹಾಸನ್) ಅವರು ಕನ್ನಡ ಚಿತ್ರರಂಗದಲ್ಲೂ ಬಂದು ನಟನೆ ಮಾಡಿ ಹೋಗಿರುವುದರಿಂದ ಯಾರಿಗೂ ಏನು ಮಾತನಾಡಬೇಕು ಎನ್ನುವುದೇ ತೋಚಲಿಲ್ಲ. ಇದು ತೇಲಿಸುವ ವಿಚಾರವಲ್ಲ. ತೇಲಲೇ ಬೇಕಾ ತೋರಿಸಿಕೊಡುತ್ತೇನೆ ಬನ್ನಿ. ನಾವು ಯಾಕೆ ತೇಲಿಸಬೇಕು. ಗಂಡು ನಾಡಿನಲ್ಲಿ ಹುಟ್ಟಿರುವ ಗಂಡಮ್ಮಾ ನಾವು. ನಾವ್ಯಾಕೆ ತೇಲಿಸೋಣ.. ಯಾರಿಗೆ ಹೆದರೋಣ ಅಂತ ನಟ ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ.
ಗೌರವ ಇದೆ ಒಬ್ಬ ವ್ಯಕ್ತಿಯ ಮೇಲೆ. ಕೆಳಗಡೆ ಕುಳಿತು ಕೇಳಿಸಿಕೊಂಡ ವ್ಯಕ್ತಿಯ ಮೇಲೆ ಅಪಾರ ಗೌರವ ಇದೆ. ಎರಡು ಗೌರವಗಳ ನಡುವೆ ಚಿತ್ರರಂಗ ಏನು ಮಾಡಬೇಕು ಅಂತ ಮಾತನಾಡಿಲ್ಲ ಎಂದಾಗ ಪದೇ ಪದೇ ಚಿತ್ರರಂಗಕ್ಕೆ ನೀವು ಹಿಂಗೆ ಅಂತ ಹೇಳಿದಾಗ. ನಮ್ಮ ಬಳಿ ಗನ್ ಇದೆಯಾ, ಪೊಲೀಸಾ, ಲಾಯರ್ ಅಥವಾ ಕೋರ್ಟ್ ಅಲ್ಲ. ಏನ್ಮಾಡೋಕೆ ಆಗುತ್ತೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಈ ವಿಚಾರದಲ್ಲಿ ನಮಗೆ ಸಾಕಷ್ಟು ನೈತಿಕತೆ ಹಾಗೂ ಎಮೋಷನ್ ಇದೆ. ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ತಿಳಿಯಲಿಲ್ಲ. ಇದರಲ್ಲಿ ತೇಲಿಸುವುದು ಏನೂ ಇಲ್ಲ. ನಾನ್ಯಾಕೆ ತೇಲಿಸಲಿ ಅಂತ ಅವರು ಹೇಳಿದ್ದಾರೆ. ಇದು ಅಧಿಕಾರದಲ್ಲಿ ಇರುವವರನ್ನು ಕೇಳಿ, ಕರ್ನಾಟಕದ ಪೂರ್ತಿ ಅಧಿಕಾರವನ್ನು ಹಿಡಿದುಕೊಂಡು ವಿಧಾನಸೌಧದಲ್ಲಿ ಕುಳಿತಿರುವವರನ್ನು ಕೇಳಿ.
Kiccha Sudeep about Kamal Haasan controversy 👀@KicchaSudeep #KicchaSudeep #BRB #BRBFirstBlood #KFI #Kannada pic.twitter.com/DqkpPq32kG
— Filmy Kannada (@Filmy_Kannada_) June 20, 2025
ನಾವು ತುಂಬಾ ಟ್ಯಾಕ್ಸ್ ಕಟ್ಟುತ್ತಿರುವ ಜನ. ಬೆಳಗ್ಗೆಯಾದರೆ ಎಲ್ಲರಿಗೂ ಅವರದ್ದೇ ಆದ ಭಯಗಳಿವೆ. ಹೆದರಿಕೆಗಳಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಕೆಲವರ ಮೇಲೆ ಗೌರವ ಇದೆ. ಈ ರೀತಿ ಮಾತನಾಡಿ ಬಿಟ್ಟರಲ್ಲ ಎನ್ನುವ ಶಾಕ್‌ನಲ್ಲಿ ಇದ್ದಾರೆ ಎಂದು ನಟ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಕಮಲ್ ಹಾಸನ್ ಪರ: ಇನ್ನು ಸುದೀಪ್ ಅವರ ಮಾತಿಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಟ ಕಿಚ್ಚ ಸುದೀಪ್ ಅವರು, ಕಮಲ್ ಹಾಸನ್ ಅವರ ಪರವಾಗಿ ಮಾತನಾಡಿದ್ದಾರೆ ಎಂದು ಕೆಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ನೇರವಾಗಿ ಕಮಲ್ ಹಾಸನ್ ಅವರ ಹೇಳಿಕೆಯನ್ನು ಖಂಡಿಸಬೇಕು ಎಂದೂ ಹೇಳಿದ್ದಾರೆ.












Click it and Unblock the Notifications