ಕಮಲ್ ಹಾಸನ್ ಹೀಗಂತೆ: ಖ್ಯಾತ ಗಾಯಕಿ ಸುಚಿತ್ರಾರ ಆ ಹೇಳಿಕೆ ಎಲ್ಲೆಲ್ಲೋ ವೈರಲ್
Suchitra vs Kamal Haasan: ಖ್ಯಾತ ಸಿಂಗರ್ ಸುಚಿತ್ರಾ ಮೊದಲಿನಿಂದಲೂ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಕಮಲ್ ಹಾಸನ್ ಬಗ್ಗೆ ನೀಡಿರುವ ಹೇಳಿಕೆಯೊಂದು ಇದು ಭಾರೀ ಸಂಚಲನ ಮೂಡಿದೆ. ಹಾಗಾದರೆ ಆ ಹೇಳಿಕೆಯಲ್ಲಿ ಅಂತಹದ್ದೇನಿದೆ ಎನ್ನುವ ಮಾಹಿತಿಯನ್ನು ನೀವು ತಿಳಿಯಲೇಬೇಕು. ಇಲ್ಲಿದೆ ನೋಡಿ ಮಾಹಿತಿ.
ಸಾಮಾನ್ಯವಾಗಿ ಸಿನಿರಂಗದಲ್ಲಿ ಆಗಾಗ ವಿವಾದಾತ್ಮಕ ಹೇಳಿಕೆಗಳು ಸದ್ದು ಮಾಡುತ್ತಲೇ ಇರುತ್ತವೆ. ಆದರೆ ಅವುಗಳು ಚಿಕ್ಕಮಟ್ಟದಲ್ಲಿ ಸದ್ದು ಮಾಡುತ್ತಿರುತ್ತವೆ. ಇಂತಹ ಘಟನೆಗಳು ಸ್ಯಾಂಡಲ್‌ವುಡ್‌ನಲ್ಲೂ ನಡೆಯುತ್ತಿರುತ್ತವೆ. ತೀರಾ ಕಡಿಮೆ. ಆದರೆ ಬೇರೆ ಬೇರೆ ಅಂದರೆ, ಬಾಲಿವುಡ್, ಕಾಲಿವುಡ್, ಟಾಲಿವುಡ್‌ನಲ್ಲಿ ಇತ್ತೀಚೆಗೆ ಇಂತಹ ವಿವಾದಾತ್ಮಕ ಹೇಳಿಕೆಗಳು ಕೇಳಿಬರುತ್ತಿವೆ. ಇದೀಗ ಖ್ಯಾತ ಗಾಯಕಿ ಸುಚಿತ್ರಾ ಅವರು ಕಮಲ್ ಹಾಸನ್ ಬಗ್ಗೆ ಮಾಡಿರುವ ಆ ಹೇಳಿಕೆ ಎಲ್ಲೆಲ್ಲೋ ಹರಿದಾಡುತ್ತಿದೆ. ಅಲ್ಲದೆ ಭಾರೀ ವೈರಲ್ ಕೂಡ ಆಗುತ್ತಿದೆ.

ಕಳೆದ ವರ್ಷಗಳ ಹಿಂದೆ ಸುಚಿತ್ರಾ ಅವರು ಧನುಷ್, ಅನಿರುಧ್ ರವಿಚಂದರ್, ಆಂಡ್ರಿಯಾ ಸೇರಿ ಹಲವರ ವಿರುದ್ದ ಕೆಲವೊಂದು ಕಾಮೆಂಟ್‌ಗಳನ್ನು ಮಾಡಿದ್ದರು. ಬಳಿಕ ಇದೇ ಫೋಟೋಗಳೂ ವೈರಲ್ ಆಗಿ ಭಾರೀ ಸದ್ದು ಮಾಡಿದ್ದವು. ಈ ಮೂಲಕ ಅವರು ಭಾರೀ ಸದ್ದು ಮಾಡಿದ್ದರು.
ಮತ್ತೆ ಇದೀಗ ಖ್ಯಾತ ಗಾಯಕಿ ಎನಿಸಿಕೊಂಡಿರುವ ಸುಚಿತ್ರಾ ಅವರು ನಟ ಕಮಲ್ ಹಾಸನ್ ಅವರನ್ನು "ಟ್ರಾನ್ಸ್ ಜೆಂಡರ್" ಎಂದು ಹೇಳಿದ್ದು, ಆಕೆಯ ಈ ಕಾಮೆಂಟ್‌ಗಳು ಇದೀಗ ಎಲ್ಲೆಲ್ಲೋ ಹರಿದಾಡುತ್ತಿವೆ. ಆರ್.ಜೆ.ಸುಚಿತ್ರಾ ಇತ್ತೀಚೆಗೆ ಹಾಟ್ ಟಾಪಿಕ್ ಆಗಿದ್ದಾರೆ. ಸುಚಿ ಲೀಕ್ಸ್ ಮೂಲಕ ಅನೇಕ ಸೆಲೆಬ್ರಿಟಿಗಳ ವೈಯಕ್ತಿಕ ಫೋಟೋಗಳನ್ನು ಹಂಚಿಕೊಂಡು ಸುಚಿತ್ರಾ ಸುದ್ದಿಯಲ್ಲಿದ್ದರು.
ಅಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವೈವಾಹಿಕ ಜೀವನದ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಕೂಡ ಮಾಡಿದ್ದರು. "ಧನುಷ್ ಸಲಿಂಗಕಾಮಿ, ಅವರು ನನ್ನ ಪತಿ ಕಾರ್ತಿಕ್ ಜೊತೆ ಇದ್ದರು," ಅಂತಾ ಗಂಭೀರ ಆರೋಪ ಮಾಡಿದ್ದರು. ಇದು ಕೂಡ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಇನ್ನು ಇದೀಗ "ವಿಶ್ವರೂಪಂ ಚಿತ್ರದಲ್ಲಿ ಶಾಸ್ತ್ರೀಯ ನೃತ್ಯ ಕಲಿಸುವಾಗ ಕಮಲ್ ಹಾಸನ್ ಟ್ರಾನ್ಸ್‌ಜೆಂಡರ್‌ನಂತೆ ನಟನೆ ಮಾಡುತ್ತಾರೆ. ಈ ಹಿನ್ನೆಲೆ ಅವರು ಆ ಸಿನಿಮಾದಲ್ಲಿ ಯಾವಾಗಲೂ ಬಿಳಿ ಬಣ್ಣದ ಬಟ್ಟೆ ಕಹಾಕಿಕೊಳ್ಳುತ್ತಾರೆ. ರೀಲ್ ಜೀವನದಲ್ಲಿ ಮಾತ್ರ ಅಲ್ಲ, ರಿಯಲ್ ಲೈಫ್‌ನಲ್ಲೂ ಅವರು ಟ್ರಾನ್ಸ್‌ಜೆಂಡರ್, ಅದಕ್ಕೆ ಅಂತಹ ಬಟ್ಟೆಗಳನ್ನು ಹಾಕುತ್ತಾರೆ," ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಕಾಮೆಂಟ್ ಭಾರೀ ಸಂಚಲನಕ್ಕೆ ಕಾರಣವಾಗಿದೆ.












Click it and Unblock the Notifications