Kaatera: ನಮ್ಮ ಮೆಟ್ರೋದಲ್ಲೂ ಕಾಟೇರನ ಧ್ಯಾನ! ಟೋಲ್‌ ಸಿಬ್ಬಂದಿ ವಿಡಿಯೋ ಹಂಚಿಕೊಂಡ ನಟಿ

ಕಾಟೇರ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ಸಿನಿಮಾ, ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ಕೂಡ ಕಾಟೇರ ಅತ್ಯುತ್ತಮ ಪ್ರದರ್ಶನ ಕಾಣುತ್ತಿದ್ದು, ದರ್ಶನ್ ವೃತ್ತಿ ಜೀವನದಲ್ಲೇ ದೊಡ್ಡ ಯಶಸ್ವೀ ಚಿತ್ರ ಎನಿಸಿಕೊಳ್ಳುವ ಸೂಚನೆ ಸಿಕ್ಕಿದೆ.

ಮುಖ್ಯವಾಗಿ ಕುಟುಂಬ ಸಮೇತವಾಗಿ ಸಿನಿಮಾ ಪ್ರೇಮಿಗಳು ಚಿತ್ರಮಂದಿರಕ್ಕೆ ಬರುತ್ತಿರುವುದು ಚಂದನವನದ ಮಟ್ಟಿಗೆ ಖುಷಿಪಡುವ ಸುದ್ದಿ. ಥಿಯೇಟರ್ ಮಾಲೀಕರು ಕೂಡ ಕಾಟೇರನ ಕೊಂಡಾಡಿದ್ದು, ಕಲೆಕ್ಷನ್ ಅದ್ಭುತವಾಗಿದೆ ಎಂದಿದ್ದಾರೆ.

 Kaatera Movie Garners Overwhelming Response: Fans Hails katera at Namma Metro

ಈಗ ವಿದೇಶದಲ್ಲಿ ಕೂಡ ಕಾಟೇರ ಬಿಡುಗಡೆಗೆ ಸಿದ್ಧವಾಗಿದೆ. ಕಾಟೇರ ಬಿಡುಗಡೆಯಾಗಿ 5 ದಿನ ಕಳೆದರೂ ಇನ್ನೂ ಜನಪ್ರಿಯತೆ ಕಡಿಮೆಯಾಗಿಲ್ಲ, ಹಲವು ಥಿಯೇಟರ್ ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕೂಡ ಕಾಟೇರ ಸಿನಿಮಾ ಧ್ಯಾನ ಜೋರಾಗಿದೆ.

ಜೈ ಕಾಟೇರ ಎಂದ ಫ್ಯಾನ್ಸ್

ಸಿನಿಮಾ ನೋಡಿ ಜೋಶ್‌ನಲ್ಲೇ ಹೊರ ಬಂದ ಅಭಿಮಾನಿಗಳಿಗೆ ಕಾಟೇರ ಸಖತ್ ಇಷ್ಟವಾಗಿದ್ದಾನೆ, ಅದಕ್ಕೆ ಏನೋ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ಚಿತ್ರದ ಗುಂಗಿನಿಂದ ಹೊರ ಬರದ ಅಭಿಮಾನಿಗಳು ಜೈ ಕಾಟೇರ ಎಂದು ಘೋಷಣೆ ಕೂಗಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು ಈ ವಿಡಿಯೋ ಹಂಚಿಕೊಂಡು ಖುಷಿಪಡುತ್ತಿದ್ದಾರೆ.

ಚಂದನವನದ ನಟಿ ಮೇಘನಾ ಗಾಂವ್ಕರ್ ಕೂಡ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 13 ಸೆಕೆಂಡ್‌ಗಳ ವಿಡಿಯೋದಲ್ಲಿ ಟೋಲ್‌ ಸಿಬ್ಬಂದಿ ಕಾಟೇರ ಸಿನಿಮಾ ಚನಾಗಿದೆ ಮೇಡಂ ಎನ್ನುವುದನ್ನು ಕೇಳಬಹುದು. ಕೊನೆಗೆ ಜೈ ಡಿ ಬಾಸ್ ಎಂದು ಕೂಗಿದ್ದಾರೆ. ಇದು ವಿಜಯಪುರದ ಬಳಿ ತೆಗೆದ ವಿಡಿಯೋ ಎಂದು ಮೇಘನಾ ಹೇಳಿಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಳ್ಳಲು ನನಗೆ ಸಂತಸವಾಗುತ್ತಿದೆ ಎಂದಿರುವ ಅವರು ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಕಾಟೇರ ಗಳಿಸಿದ್ದೆಷ್ಟು?

ಕಾಟೇರ ಸಿನಿಮಾ ಗಳಿಕೆ ವಿಚಾರದಲ್ಲಿ ಕೂಡ ಹೊಸ ದಾಖಲೆ ಬರೆಯುತ್ತಿದೆ. ಹಲವು ಮೂಲಗಳ ಪ್ರಕಾರ ಸಿನಿಮಾ 75 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲವಾದರೂ, ಭರ್ಜರಿ ಲಾಭ ಮಾಡಿರುವುದಂತೂ ಸತ್ಯ ಎನ್ನಲಾಗಿದೆ.

ಅಲ್ಲದೆ ಹಲವು ಕಡೆಗಳಲ್ಲಿ ಇನ್ನೂ ಹೌಸ್‌ಫುಲ್ ಪ್ರದರ್ಶನ ಇರುವ ಕಾರಣ ಕಾಟೇರ ಶತಕೋಟಿ ಗಳಿಕೆ ಮಾಡಬಹುದು ಎನ್ನುವ ಲೆಕ್ಕಾಚಾರ ಕೂಡ ಮಾಡಲಾಗಿದೆ. ಕಲೆಕ್ಷನ್ ವಿಚಾರದಲ್ಲಿ ಏನೇ ಗೊಂದಲ ಇದ್ದರೂ, ಪ್ರೇಕ್ಷಕ ಮಾತ್ರ ಕಾಟೇರನ ಮೆಚ್ಚಿಕೊಂಡಿದ್ದಾನೆ ಎನ್ನುವುದು ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+