ಕಿಚ್ಚ ಸುದೀಪ್‌ ಬದಲು ಹುಚ್ಚ ಸುದೀಪ್ ಎಂದ ಬಿಟ್ಟ ಕೆ.ಮಂಜು

ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿ ಗೆದ್ದಿರುವ ಕೆ. ಮಂಜು ಕನ್ನಡ ಸಿನಿಪ್ರಿಯರಿಗೆ ಚಿರಪರಿಚಿತ. ಕೆ ಮಂಜು ಅವರು ಇದೀಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಇದೀಗ ಕೆ.ಮಂಜು ಅವರೇ ನಿರ್ಮಿಸಿದ 'ವಿಷ್ಣು ಪ್ರಿಯ' ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ.

ಶ್ರೇಯಸ್ ಕೆ.ಮಂಜು ಮತ್ತು ಪ್ರಿಯಾ ವಾರಿಯರ್ ಜೋಡಿಯಾಗಿ ನಟಿಸಿರುವ 'ವಿಷ್ಣು ಪ್ರಿಯಾ' ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಕೆ ಮಂಜು ಮಾಡಿದ ಎಡವಟ್ಟು ಇದೀಗ ಸಖತ್ ವೈರಲ್ ಆಗುತ್ತಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಟ ಕಿಚ್ಚ ಸುದೀಪ್‌ ಅವರು ಆಗಮಿಸಿದ್ರು, ಕಾರ್ಯಕ್ರಮದಲ್ಲಿ ಕೆ ಮಂಜು ಅವರು ಸುದೀಪ್‌ರನ್ನು ಉದ್ದೇಶಿಸಿ ಮಾತನಾಡುವಾಗ ಕಿಚ್ಚ ಅನ್ನೋ ಬದಲು ಹುಚ್ಚ ಎಂದುಬಿಟ್ಟರು.

K Manju Calls Kiccha Sudeep As Huccha In Vishnu Priya Trailer Launch Event

ಇನ್ನೂ ಕೆ ಮಂಜು ಅವರು ಈ ರೀತಿ ಕರೆದಿರುವುದಕ್ಕೆ ನಟ ಸುದೀಪ್‌ ಅವರ ಅಭಿಮಾನಿಗಳು ಗರಂ ಆಗಿದ್ದಾರೆ. ಆದರೆ, ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಕಿಚ್ಚ ಸುದೀಪ್‌ ಅವರು ಫುಲ್‌ ಕೂಗಿ ಆಗಿ ಉತ್ತರಿಸಿದ್ದಾರೆ. ಕೆ ಮಂಜು ಅವರು ಹುಚ್ಚ ಸುದೀಪ್‌ ಎಂದು ಹೇಳಿದ ಬಳಿಕ, ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಿಜಕ್ಕೂ ಥ್ಯಾಂಕ್ಸ್‌ ನಮ್ಮ ಹುಚ್ಚ ಸುದೀಪ್ ಅವರಿಗೆ. ಕಿಚ್ಚ ಸುದೀಪ್ ಅವರು. ಯಾಕೆ ಹುಚ್ಚ ಅಂದೆ ಅಂದರೆ ಈ ಸಿನಿಮಾ ನೋಡಿದಾಗ ಹುಚ್ಚ ಸಿನಿಮಾ ನೆನಪಿಗೆ ಬರುತ್ತದೆ. ನಾವೇ ರೈಟ್ಸ್‌ ತಂದು ಮಾಡುವುದಕ್ಕೆ ಹೋಗಿದ್ವಿ. ಆ ಸಿನಿಮಾದ ಉಸಿರೇ ಉಸಿರೇ ಆ ಹಾಡನ ಫೀಲಿಂಗ್ ಈ ಸಿನಿಮಾ ಹಾಡು ನೋಡಿದಾಗ ಬಂತು. ಹುಚ್ಚ ಸಿನಿಮಾ ತರ ಯಶಸ್ವಿ ಅಗಲಿ ಅಂತ ಕೇಳಿಕೊಂಡೆ. ಬೇರೆ ಏನೂ ಇಲ್ಲ ಎಂದು ವೇದಿಕೆ ಮೇಲೆ ಕೆ. ಮಂಜು ಮಾತನಾಡಿದ್ದರು.

ನಟ ಸುದೀಪ್‌ ಅವರನ್ನ ಕಿಚ್ಚನ ಹುಚ್ಚ ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸುದೀಪ್ ಅವರು ಮಾತನಾಡಿ, ವಿಷ್ಣು ಪ್ರಿಯ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. 'ಕೆ.ಮಂಜು ಕಡೆಯಿಂದ ಏನೋ ಒಂದು ಮಿಸ್ಟೇಕ್ ಆಯ್ತು. ಸ್ಟೇಜ್‌ ಮೇಲೆ ಚೆನ್ನಾಗಿ ಪ್ಯಾಚಪ್ ಮಾಡಿಬಿಟ್ಟರು. ಅಷ್ಟೇ ಅಲ್ಲ ಅದರ ಮೇಲೆ ಸ್ವಲ್ಪ ಹೊಗಳಿ ಹುಚ್ಚ ಯಾಕೆ ಅಂತ ಹೇಳಿ ಚೆನ್ನಾಗಿ ಪ್ಯಾಚಪ್ ಮಾಡಿದ್ರಿ' ಎಂದು ಸುದೀಪ್ ನಗುತ್ತಲೇ ನೇರವಾಗಿ ಉತ್ತರಿಸಿದ್ದರು.

ಇನ್ನೂ 50ನೇ ಸಿನಿಮಾ ಒಂದು ಸಂಸ್ಥೆಯಿಂದ ಬಂದಿರೋದು ಜೋಕ್ ಅಲ್ಲ. ಚಿಕ್ಕ ಸಿನಿಮಾ ಆಗಿರಬಹುದು ದೊಡ್ಡ ಸಿನಿಮಾ ಆಗಿರಬಹುದು. ಅತಿ ದೊಡ್ಡದಾಗಿರಬಹುದು...ಟೋಟಲ್‌ ಆಗಿ ಒಂದು 50 ಸಿನಿಮಾಗಳು ಒಂದು ಸಂಸ್ಥೆಯಿಂದ ಬರುತ್ತಿದೆ ಅಂದರೆ ನಿಜಕ್ಕೂ ಗ್ರೇಟ್. ನನಗೆ ನಿಜಕ್ಕೂ ಗೊತ್ತಿರಲಿಲ್ಲ. ನನಗೆ ಖುಷಿಯಾಗುತ್ತಿದೆ. ನಿಮ್ಮ ಮೇಲೆ ಹೆಮ್ಮೆ ಅನಿಸುತ್ತಿದೆ. ಇದು ಚಿಕ್ಕ ಕೊಡುಗೆ ಅಲ್ಲವೇ ಅಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+