Jyothi Rai: ನಟನ ಜತೆ ರೋಮ್ಯಾನ್ಸ್ ಬೆನ್ನಲ್ಲೆ ಮತ್ತೊಂದು ಅವತಾರದಲ್ಲಿ ಜ್ಯೋತಿ ರೈ...Video Viral

ಕನ್ನಡದ ಅನೇಕ ಧಾರವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದ ನಟಿ ಜ್ಯೋತಿ ರೈ ಅವರು ಇಂದು ತೆಲುಗಿನಲ್ಲಿ ಬ್ಯೂಸಿಯಾಗಿದ್ದಾರೆ. ವಿಡಿಯೋ ವಿಚಾರವಾಗಿ ಸಾಕಷ್ಟು ಟ್ರೋಲ್ ಆಗಿದ್ದ ನಟಿ ಜ್ಯೋತಿ ರೈ ಕನ್ನಡ ಬಿಟ್ಟು ಆಂಧ್ರ ಪ್ರದೇಶದಲ್ಲಿ ಎರಡನೇ ಪತಿ ಜೊತೆಗೆ ಆರಾಮಾಗಿದ್ದಾರೆ. ಪತಿ ಸುಕು ಪೂರ್ವಜ್ ನಿರ್ದೇಶನದ 'ಕಿಲ್ಲರ್'ದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಜ್ಯೋತಿ ಹಾಗೂ ನಾಯಕನಟ ವಿಫಲ ಲಿಪ್ ಕಿಸ್ ವಿಡಿಯೋ ವೈರಲ್ ಆದ ಬೆನ್ನಲ್ಲೆ ಮತ್ತೊಂದು ವಿಡಿಯೋ ಹರಿದಾಡುತ್ತಿದೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು, ಮಿಮ್ಸ್, ಟ್ರೋಲ್, ಸುದ್ದಿಗಳು ನಿಮಿಷಗಳಲ್ಲಿ ವೈರಲ್ ಆಗಿ ಬಿಡುತ್ತವೆ. ಈ ಹಿಂದೆಯು ಸಾಕಷ್ಟು ಹಾಟ್‌ ಫೋಟೋಗಳನ್ನು ಹಂಚಿಕೊಂಡು ಸುದ್ದಿಯಾಗಿದ್ದ ನಟಿ ಜ್ಯೋತಿ ರೈ ಅವರು ತೆಲುಗಿನ ಕಿಲ್ಲರ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಆ ಸಿನಿಮಾದ ನಟ ವಿಶಾಲ್ ರಾಜ್ ಅವರೊಂದಿಗೆ ಮುಖಕ್ಕೆ ಮುಖವಿಟ್ಟು ರೋಮ್ಯಾನ್ಸ್ ಮಾಡಿದೆ, ವಿಫಲ ಲಿಪ್ ಕಿಸ್ ವಿಡಿಯೋ ವೈರಲ್ ಆಗಿತ್ತು.

Jyothi Rai s Smoking-Hot Look from Killer Movie Goes Viral- Actress Clarifies on Cigarette Clip

ಇದೀಗ ಮಿನಿ ಸ್ಕರ್ಟ್‌ನಲ್ಲಿ ನಟಿ ಜ್ಯೋತಿ ರೈ ಅವರು ಕಾರು ಪಕ್ಕ ನಿಂತು ಸ್ಟೈಲ್ ಆಗಿ ಧಮ್ ಎಳೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೈಮೇಲೆ ಶಾಲ್, ಸನ್ ಗ್ಲಾಸ್ ಧರಿಸಿರುವ ನಟಿ ಜ್ಯೋತಿ ರೈ ಅವರು ಆಕಾಶ ನೋಡಿಕೊಂಡು ಹೊಗೆ ಬಿಡುವುದು ವಿಡಿಯೋದಲ್ಲಿ ನೋಡಬಹುದು. ''ನಾನು ಧೂಮಪಾನ ಮಾಡುವುದಿಲ್ಲ. ಮತ್ತು ಯಾರು ಧೂಮಪಾನ ಮಾಡುತ್ತಾರೆಂದು ನಾನು ನಿರ್ಣಯಿಸುವುದಿಲ್ಲ. ನಿಮ್ಮ ಜೀವನ, ನಿಮ್ಮ ಕರೆ'' ಎಂದು ಬರೆದುಕೊಂಡಿದ್ದಾರೆ. ಜೊತೆಗೆ 'ಕಿಲ್ಲರ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ' ಎಂದು ಅಪ್ಡೇಟ್ ಕೊಟ್ಟಿದ್ದಾರೆ.

ಈ ಸಿನಿಮಾದಲ್ಲಿ ಜ್ಯೋತಿ ರೈ ಅವರು ಸಖತ್ ಫೈಟ್ ಮಾಡಿದ್ದಾರೆ. ಗನ್ ಹಿಡಿದು ರೌಡಿಗಳ ಜೊತೆ ಹೋರಾಟದ ದೃಶ್ಯಗಳು ಇವೆ. ಸಿನಿಮಾದ ಕೆಲವು ತುಣಕುಗಳನ್ನು ಆಗಾಗ ಇನ್‌ಸ್ಟಾ ಗ್ರಾಮ್‌ನಲ್ಲಿ ನಟಿ ಹಂಚಿಕೊಳ್ಳುತ್ತಾರೆ. ಕಿಲ್ಲರ್ ಟೀಸರ್ ಸಹ ಬಿಡುಗಡೆ ಆಗಿದೆ. ಅದೆಲ್ಲ ನೋಡಿದರೆ ಇದೊಂದು ರೋಮ್ಯಾಂಟಿಕ್ ಹಾಗೂ ಕಮರ್ಷಿಯಲ್ ಸಿನಿಮಾ ಎಂದನಿಸುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ ಜ್ಯೋತಿ ರೈ ಅವರು ಹಾಟ್‌ ಫೋಟೋಗಳಿಂದ ಕೆಲವು ಭಾರಿ ಸುದ್ದಿಯಾಗಿದ್ದರು. ಆಗಾಗ ಫ್ಯಾನ್ಸ್ ಮುಂದೆ ಪ್ರತ್ಯಕ್ಷರಾಗುವ ಜ್ಯೋತಿಯವರು ಇದೀಗ ಕೈಲಿ ಸಿಗರೇಟ್ ಹಿಡಿದು ಕಾಣಿಸಿಕೊಂಡಿದ್ದಾರೆ. ವಿಡಿಯೋಗೆ 18000 ಲೈಕ್ಸ್ ಹಾಗೂ 03 ಲಕ್ಷಕ್ಕೂ ಅಧಿಕ ವೀಕ್ಷಣೆ ಬಂದಿವೆ. ಜ್ಯೋತಿ ರೈ ಫ್ಯಾನ್ಸ್ ಕಿಲ್ಲರ್ ಸಿನಿಮಾಗಾಗಿ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+