ನಟ ದರ್ಶನ್‌ ಬಿಡುಗಡೆ ಬಗ್ಗೆ ಜೋಕುಮಾರಸ್ವಾಮಿ ನುಡಿದ ಭವಿಷ್ಯ ಕೇಳಿ ಧಂಗಾದ ಅಭಿಮಾನಿ

Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ & ಪಟಾಲಂ ಗ್ಯಾಂಗ್‌ ಜೈಲು ಸೇರಿ ಮೂರು ತಿಂಗಳು ಕಳೆದಿದೆ. ಈಗಾಗಲೇ ಪೊಲೀಸರು ಕೋರ್ಟ್‌ಗೆ ಪ್ರಕರಣದ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಇದರ ನಡುವೆಯೇ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ದರ್ಶನ್‌ನನ್ನು ಹೊರತರಲು ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಮತ್ತೊಂದೆಡೆ ಬಿಡುಗಡೆ ಬಗ್ಗೆ ಭವಿಷ್ಯವೊಂದು ಹೊರಬಿದ್ದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪತ್ನಿ ದರ್ಶನ್‌ಗಾಗಿ ಪತ್ನಿ ವಿಜಯಲಕ್ಷ್ಮಿ ಟೆಂಪಲ್‌ ರನ್‌ ಮುಂದುವರೆಸಿದ್ದು, ವಿಶೇಷ ಪೂಜೆ, ವ್ರತ, ಹರಕೆಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ಕೆಲವರು ಬಾಸ್‌.. ಬಾಸ್‌ ಎಂದು ಚೀರಾಡುತ್ತಾ ಸಾರ್ವಜನಿಕರಿಗೆ ತೊಂದರೆ ಮಾಡುವ ಮೂಲಕ ಅಂಧಾಭಿಮಾನ ಮೆರೆಯುತ್ತಿದ್ದರೆ, ಇನ್ನೂ ಕೆಲವರು ಸಮಾಧಾನದಿಂದ ದರ್ಶನ್‌ಗಾಗಿ ದೇವಸ್ಥಾನಗಳಲ್ಲಿ ವಿಶೇಷ ಪೊಗಳನ್ನು ಮಾಡಿಸುತ್ತಿದ್ದಾರೆ.

Jokumaraswamy prediction on actor Darshan release

ಇನ್ನು ಇದೀಗ ವಿಜಯಪುರದ ಗೋಳಗುಮ್ಮಟ ಏರಿಯಾದ ಅಭಿಮಾನಿ ಸಚಿನ್ ಎಂಬಾತ ನಟ ದರ್ಶನ್ ಹೊರಬರುವುದು ಯಾವಾಗ ಎನ್ನುವ ಬಗ್ಗೆ ಜೋಕುಮಾರಸ್ವಾಮಿ ಬಳಿ ಭವಿಷ್ಯ ಕೇಳಿದ್ದಾರೆ. ಅದಕ್ಕೆ ಜೋಕುಮಾರಸ್ವಾಮಿ ನುಡಿದ ಭವಿಷ್ಯ ಹೋಗಿದೆ. ನಟ ದರ್ಶನ್‌ 3 ತಿಂಗಳಲ್ಲಿ ಜೈಲಿನಿಂದ ಹೊರಗೆ ಬರುತ್ತಾರೆ ಅಂದರೆ ಜೈಲಿನಿಂದ ಬಿಡುಗಡೆಯಾಗುತ್ತಾರಂತೆ. ಬಳಿಕ "ಡೆವಿಲ್" ಸಿನಿಮಾ ಹಿಟ್ ಆಗುವ ಬಗ್ಗೆಯೂ ಧನಾತ್ಮಕ ಉತ್ತರ ಬಂದಿದೆ.

ಒಂದೊಂದು ಪ್ರಶ್ನೆ ಕೇಳಿ ಅಭಿಮಾನಿ ಸಚಿನ್ ಜೋಕುಮಾರಸ್ವಾಮಿ ಬುಟ್ಟಿ ಎತ್ತಿದ್ದು, ಈ ವೇಳೆ ಜೋಕುಮಾರಸ್ವಾಮಿ ದರ್ಶನ್ ಮೂರು ತಿಂಗಳ ಒಳಗೆ ಹೊರಗೆ ಬರುತ್ತಾರೆ ಎಂಬ ಸೂಚನೆ ನೀಡಿದೆ. ಬಳಿಕ ಜೈಲಿನಿಂದ ದರ್ಶನ್ ಹೊರಗೆ ಬರುತ್ತಾರಾ ಎಂಬ ಪ್ರಶ್ನೆ ಕೇಳಿದ ಬಳಿಕ ಬುಟ್ಟಿ ಸುಲಭವಾಗಿ ಮೇಲೆ ಬಂದಿದೆ.

ದರ್ಶನ್‌ ಹೊರಗಡೆ ಬಂದ ಮೇಲೆ ಹೇಗೆ ಎನ್ನುವ ಪ್ರಶ್ನೆಗೆ ಜೋಕುಮಾರ ಸ್ವಾಮಿಯ ಬುಟ್ಟಿ ಭಾರವಾಗಿದೆ. ಇದು ಅಭಿಮಾನಿಯನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದ್ದು, ಜೈಲಿನಿಂದ ಹೊರಗೆ ಬಂದರೂ ನಟ ದರ್ಶನ್‌ಗೆ ಕಂಟಕ ತಪ್ಪಿದ್ದಲ್ಲ ಎನ್ನುವ ಸೂಚನೆ ಎನ್ನಲಾಗುತ್ತಿದೆ.

ಗಣೇಶನ ಬಳಿಕ ಭೂಮಿಗೆ ಜೋಕುಮಾರಸ್ವಾಮಿ ಬರುತ್ತಾನೆಂಬ ನಂಬಿಕೆಯಿದೆ. ಗಣೇಶ ಹಬ್ಬದ ಬಳಿಕ ಬುಟ್ಟಿಯಲ್ಲಿ ಜೋಕುಮಾರಸ್ವಾಮಿಯನ್ನು ಇಟ್ಟುಕೊಂಡು ಮನೆ-ಮನೆಗೆ ಮಹಿಳೆಯರು ಬರುತ್ತಾರೆ. ಈ ವೇಳೆ ಕೆಲವರು ತಮ್ಮ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದಾಗಿದೆ. ಇದಕ್ಕೆ ಜೋಕುಮಾರಸ್ವಾಮಿ ಉತ್ತರ ನೀಡುತ್ತಾರೆ. ಈ ಭವಿಷ್ಯ ನಿಜವಾದ ಉದಾಹರಣೆಗಳು ಇವೆ ಅಂತಲೂ ನಮ್ಮ ಹಿರಿಯರು ಆಗಾಗ ಹೇಳುತ್ತಿರುತ್ತಾರೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಕಾರಣಕ್ಕೆ ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ನಟ ದರ್ಶನ್‌ & ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಭೀಕರವಾಗಿ ಹತ್ಯೆ ಮಾಡಿತ್ತು ಎನ್ನುವುದು ಪೊಲೀಸ್‌ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ಬಳಿಕ ದರ್ಶನ್‌ನನ್ನು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿಟ್ಟಿದ್ದರು. ಆದರೆ, ಅಲ್ಲಿಯೂ ನಟ ದರ್ಶನ್‌ ರೌಡಿ ಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗನ ಜೊತೆ ಕುಳಿತು ರೆಸಾರ್ಟ್‌ ರೀತಿಯಲ್ಲಿ ರೌಂಡ್‌ ಟೇಬಲ್‌ ಪಾರ್ಟಿ ಮಾಡಿರುವ ಫೋಟೋ ಮತ್ತು ವಿಐಪಿ ಸೆಲ್‌ನಿಂದಲೇ ರೌಡಿ ಶೀಟರ್‌ಗಳ ಜೊತೆ ಪಾರ್ಟಿ ಮಾಡಿರುವ ವಿಡಿಯೋಗಳು ವೈರಲ್‌ ಆಗಿದ್ದರು. ಬಳಿಕ ಎಚ್ಚತ್ತ ಸರ್ಕಾರ ಅಲ್ಲಿನ 9 ಜೈಲಾಧಿಕಾರಿಗಳನ್ನು ಅಮಾನತು ಮಾಡಿತ್ತು.

ಇನ್ನು ಪೊಲೀಸರು ಕೋರ್ಟ್ ಆದೇಶದ ಮೇರೆಗೆ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿತ್ತು. ಅಷ್ಟಾದರೂ ದರ್ಶನ್‌ ಸೊಕ್ಕು ಮಾತ್ರ ಇಳಿದಿಲ್ಲ. ಅಲ್ಲಿಯೂ ಇತ್ತೀಚೆಗಷ್ಟೇ ಮಧ್ಯದ ಬೆರಳು ತೋರಿಸುವ ಮೂಲಕ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಕೂಡ ಇದೀಗ ಭಾರೀ ವೈರಲ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+