Shivraj Kumar: "ಜೈಲರ್ 2" ರಜನೀಕಾಂತ್ ಜೊತೆ ಶಿವರಾಜ್ ಕುಮಾರ್ ಮಾಸ್ ಎಂಟ್ರಿ, ಕನ್ನಡಿಗರಿಗೆ ಗುಡ್‌ನ್ಯೂಸ್!
Shivraj Kumar: ರಜನೀಕಾಂತ್ ಅವರ ಮತ್ತೊಂದು ಸಿನಿಮಾ ಜೈಲರ್ -2 ಬಿಡುಗಡೆಗೆ ಸಿದ್ಧವಾಗುತ್ತಿದ್ದು ಭಾರೀ ಹವಾ ಕ್ರಿಯೇಟ್ ಮಾಡಿದೆ. ಈ ಸಿನಿಮಾದಲ್ಲಿ ಕನ್ನಡಿಗರು ಸಂತೋಷಪಡುವ ಹಲವು ಪ್ರಮುಖ ವಿಷಯಗಳಿವೆ. ಕನ್ನಡಿಗರೂ ಹಾಗೂ ಸಿನಿಮಾ ಪ್ರಿಯರು ರಜನೀಕಾಂತ್ ಅವರ ಜೈಲರ್ ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಇದೀಗ ಈ ಸಿನಿಮಾದ ಪಾರ್ಟ್ 2 ಬರುವುದಕ್ಕೆ ಸಿದ್ಧತೆ ಜೋರಾಗಿದೆ. ಈ ಸಿನಿಮಾದ ಟೀಸರ್ ಬಿಡುಗಡೆಯ ಸಂದರ್ಭದಲ್ಲಿಯೇ ಭಾರೀ ಚರ್ಚೆಗೆ ಕಾರಣವಾಗಿತ್ತು. ರಜನೀಕಾಂತ್ ಅವರು ಈ ಸಿನಿಮಾದ ಟೀಸರ್‌ನಲ್ಲಿ ಇಲ್ಲಿ ಡೂಪ್ ಬಳಸಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಚಿತ್ರತಂಡವು ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಮಾಸ್ ಲುಕ್‌ಗೆ ರಜನೀಕಾಂತ್ ಅಭಿಮಾನಿಗಳು ಮನಸೋತಿದ್ದರು.
ಮಾಸ್ ಹೀರೋ & ಸೂಪರ್ ಸ್ಟಾರ್ ರಜನೀಕಾಂತ್ ಅವರ ಜೈಲರ್ 2 ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಜೈಲರ್ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಶಿವರಾಜ್ ಕುಮಾರ್ ಅವರ ಮಾಸ್ ಲುಕ್, ಕಣ್ಣಿನಲ್ಲೇ ಎದುರಾಳಿಗಳ ಗುಂಡಿಗೆ ಗನ್ ಇರಿಸುವಂತಹ ನೋಟಗಳಿಗೆ ತಮಿಳು ಸಿನಿಮಾ ಪ್ರೇಕ್ಷಕರು ಸಹ ಫಿದಾ ಆಗಿದ್ದರು. ಇದೀಗ ಜೈಲರ್ 2ನಲ್ಲೂ ಘಟಾನುಘಟಿ ನಟರು ಇದ್ದಾರೆ.

ಜೈಲರ್ 2ನಲ್ಲೂ ಮಾಸ್ ನಟ / ನಟಿಯರು: ಇನ್ನು ಜೈಲರ್‌ನಂತೆಯೇ ಜೈಲರ್ 2ನಲ್ಲಿಯೂ ಪ್ರಮುಖ ನಟ - ನಟಿಯರು ಇರಲಿದ್ದಾರೆ. ಅಲ್ಲದೇ ಕನ್ನಡಿಗರಿಗೂ ಈ ಸಿನಿಮಾದಲ್ಲಿ ಗುಡ್‌ನ್ಯೂಸ್ ಇರಲಿದೆ ಎಂದು ಹೇಳಲಾಗಿದೆ. ಜೈಲರ್ ಸಿನಿಮಾನಲ್ಲಿ ಕರ್ನಾಟಕದ ಶಿವರಾಜ್ ಕುಮಾರ್, ಕೇರಳದ ಮೋಹನ್ಲಾಲ್, ಹಿಂದಿಯ ಜಾಕಿ ಶ್ರಾಫ್ ಸೇರಿದಂತೆ ಹಲವು ಪ್ರಮುಖ ನಟರು ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. ಅಲ್ಲದೇ ತಮನ್ನಾ ಭಾಟಿಯಾ ಐಟಂ ಸಾಂಗ್‌ನಲ್ಲಿ ಮಿಂಚಿದ್ದರು. ನಟಿ ರಮ್ಯಾ ಕೃಷ್ಣ ಅವರು ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಜೈಲರ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದವರ ಜೊತೆಗೆ ಇನ್ನಷ್ಟು ಹೊಸ ನಟರು ಸಹ ಪಾರ್ಟ್ 2ನಲ್ಲಿ ಇರಲಿದ್ದಾರೆ ಎಂದು ಹೇಳಲಾಗಿದೆ.
ಶಿವಣ್ಣಗೆ ಮತ್ತಷ್ಟು ಅವಕಾಶ: ಇನ್ನು ಜೈಲರ್ -2 ನಲ್ಲೂ ಶಿವರಾಜ್‌ಕುಮಾರ್ ಅವರು ಮಿಂಚುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಇನ್ನು ಜೈಲರ್‌ನಲ್ಲಿ ಶಿವರಾಜ್‌ಕುಮಾರ್ ಅವರ ಅಭಿನಯಕ್ಕೆ 10/10 ಮಾರ್ಕ್ ಸಿಕ್ಕ ಹಿನ್ನೆಲೆಯಲ್ಲಿ ಈ ಬಾರಿಯೂ ಅವರಿಗೆ ಸಿನಿಮಾನದಲ್ಲಿ ಹೆಚ್ಚು ಸ್ಕೋಪ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜೈಲರ್‌ನಲ್ಲಿದ್ದ ನಟರೊಂದಿಗೆ ಮತ್ತೊಬ್ಬ ಮಾಸ್ ಹೀರೋ ನಂದಮೂರಿ ಬಾಲಕೃಷ್ಣ ಅವರು ಸಹ ಇರಲಿದ್ದಾರೆ ಎಂದು ಹೇಳಲಾಗಿದೆ.

2023ರಲ್ಲಿ ಬಿಡುಗಡೆಯಾಗಿದ್ದ ಜೈಲರ್ ಸಿನಿಮಾ ಹಾಡು, ಡ್ಯಾನ್ಸ್, ಕಾಮಿಡಿ ಹಾಗೂ ಮಾಸ್ ಹೀರೋಗಳ ಸಮಾಗಮದಿಂದ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಅತಿಥಿ ಪಾತ್ರದಲ್ಲಿ ಕೆಲವೇ ನಿಮಿಷ ಕಾಣಿಸಿಕೊಂಡಿದ್ದ ಶಿವಣ್ಣ ಭಾರೀ ಹವಾ ಸೃಷ್ಟಿ ಮಾಡಿದ್ದರು.












Click it and Unblock the Notifications