1000 ಕೋಟಿ ಸಿನಿಮಾಗೆ ಸಿದ್ಧತೆ, ಹಾಲಿವುಡ್ ಮೀರಿಸುತ್ತಾ ಟಾಲಿವುಡ್?

ತೆಲುಗು ಚಿತ್ರರಂಗ ದೊಡ್ಡ ದೊಡ್ಡ ಬಜೆಟ್‌ ಸಿನಿಮಾ ಮಾಡೋದ್ರಲ್ಲಿ ಎತ್ತಿದ ಕೈ. ಅದರಲ್ಲೂ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಹೊಸ ಪ್ರಾಜೆಕ್ಟ್ ಶುರು ಮಾಡಿದ್ರೆ, ಅಲ್ಲಿ ದೊಡ್ಡ ಧಮಾಖ ಪಕ್ಕಾ. ಬಾಹುಬಲಿ-1, ಬಾಹುಬಲಿ-2 & ಆರ್‌ಆರ್‌ಆರ್ ಮೂಲಕ ಧೂಳೆಬ್ಬಿಸಿದ್ದ ಈ ಸ್ಟಾರ್ ಡೈರೆಕ್ಟರ್ ಈಗ ತೆಲುಗು ಸ್ಟಾರ್ ಮಹೇಶ್ ಬಾಬು ಅವರ ಜೊತೆಗೆ 1000 ಕೋಟಿ ಸಿನಿಮಾಗೆ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಹಾಲಿವುಡ್‌ನ ಮೀರಿಸುತ್ತಾ ಟಾಲಿವುಡ್? ಎಂಬ ಪ್ರಶ್ನೆ ಮೂಡಿದೆ.

ಹೌದು, ಆರ್‌ಆರ್‌ಆರ್‌ ಸಿನಿಮಾ ತೆರೆಕಂಡು ಇದೇ ಮಾರ್ಚ್‌ ತಿಂಗಳಿಗೆ 2 ವರ್ಷ ತುಂಬುತ್ತದೆ. ಹೀಗಿದ್ದರೂ ರಾಜಮೌಳಿ ಅವರು ತಮ್ಮ ಹೊಸ ಸಿನಿಮಾ ಶುರು ಮಾಡಿಲ್ಲ ಏಕೆ? ಎನ್ನುವ ಪ್ರಶ್ನೆಗಳು ಮೂಡಿದ್ದವು. ಅದಕ್ಕೆಲ್ಲಾ ಈಗ ಉತ್ತರ ಸಿಗುತ್ತಿದೆ, ಅದೇನೆಂದರೆ ಟಾಲಿವುಡ್‌ನ 'ಪ್ರಿನ್ಸ್' ಮಹೇಶ್ ಬಾಬು ಅವರ ಜೊತೆಗೆ ದೊಡ್ಡ ಸಿನಿಮಾ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಿದ್ದಾರಂತೆ ಸ್ಟಾರ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ. ಈಗಾಗಲೇ ಈ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಆದ್ರೆ ಈಗಿನ ಫ್ರೆಶ್ ಅಪ್‌ಡೇಟ್ ಏನು ಅಂದ್ರೆ ಇದೇ ಸಿನಿಮಾಗಾಗಿ 1000 ಕೋಟಿಗೂ ಹೆಚ್ಚು ಹಣ ಹಾಕ್ತಿದ್ದಾರೆ ಅನ್ನೋದು!

Is Super Star Mahesh Babu and SS Rajamouli Combo Making a Rs.1000-crore Budget Movie?

ಸಾವಿರ ಕೋಟಿ ಸಿನಿಮಾ ಪಕ್ಕಾ?

ಈ ಹಿಂದೆ ಕೂಡ ಎಸ್.ಎಸ್. ರಾಜಮೌಳಿ ಅವರು ದೊಡ್ಡ ದೊಡ್ಡ ಸಿನಿಮಾ ಮಾಡಿದ್ದರು. ಹಾಗೇ ದೊಡ್ಡ ಮಟ್ಟದ ಗೆಲುವನ್ನ ಕೂಡ ಕಂಡಿದ್ದಾರೆ. ಬಾಹುಬಲಿ-1, ಬಾಹುಬಲಿ-2 & ಆರ್‌ಆರ್‌ಆರ್ ಸಿನಿಮಾಗಳೇ ಇದಕ್ಕೆ ತಾಜಾ ಉದಾಹರಣೆ. ಇಬ್ಬರು ಸ್ಟಾರ್‌ಗಳ ಹೊಂದಿದ್ದ 'ಆರ್‌ಆರ್‌ಆರ್‌' ಬರೋಬ್ಬರಿ 550 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಆಗಿತ್ತು. ಅದನ್ನ ಬ್ರೇಕ್ ಮಾಡಲು ಸ್ವತಃ ರಾಜಮೌಳಿ ಅವರೇ ಬರ್ತಿದ್ದು, ಮಹೇಶ್ ಬಾಬು & ರಾಜಮೌಳಿ ಅವರ ಕಾಂಬಿನೇಷನ್‌ನ ಸಿನಿಮಾಗೆ ಭರ್ಜರಿ 1 ಸಾವಿರ ಕೋಟಿ ರೂಪಾಯಿ ಬಂಡವಾಳವನ್ನ ಹಾಕಲಾಗುತ್ತಿದೆ ಎನ್ನಲಾಗಿದೆ. ಆದರೂ ಸಿನಿಮಾ ತಂಡವು ಇನ್ನೂ ಅಧಿಕೃತ ಹೇಳಿಕೆಯನ್ನ ನೀಡಿಲ್ಲ.

1900 ಕೋಟಿ ಬಾಚಿದ್ದ ಬಾಹುಬಲಿ!

ಎಸ್.ಎಸ್. ರಾಜಮೌಳಿ ಅವರು ಕೇವಲ ಬಜೆಟ್ ವಿಚಾರದಲ್ಲಿ ಮಾತ್ರವಲ್ಲ ಇದರ ಜೊತೆಗೆ ಬಾಕ್ಸ್ ಆಫಿಸ್ ಕಲೆಕ್ಷನ್ ವಿಚಾರದಲ್ಲಿ ಕೂಡ ಸದ್ದು ಮಾಡುತ್ತಾರೆ. ತಮ್ಮ ಸಿನಿಮಾಗೆ ಹಾಕಿರುವ ಹಣವನ್ನು ಭರ್ಜರಿ ಲಾಭದ ಸಮೇತ ಹೊರತೆಯುತ್ತಾರೆ. ಹೀಗಿದ್ದಾಗ ಇಲ್ಲಿ ಹೀರೋಗೆ ಸಮ ಈ ಸ್ಟಾರ್ ಡೈರೆಕ್ಟರ್ ರಾಜಮೌಳಿ.

Is Super Star Mahesh Babu and SS Rajamouli Combo Making a Rs.1000-crore Budget Movie?

ಈ ಹಿಂದೆ ಎಸ್.ಎಸ್. ರಾಜಮೌಳಿ ಅವರ ಬಾಹುಬಲಿ-2 ಸಿನಿಮಾ ಸುಮಾರು 1900 ಕೋಟಿ ರೂಪಾಯಿ ಹಣನ ಬಾಚಿತ್ತು. ಜೊತೆಯಲ್ಲಿ ಬಾಹುಬಲಿ-1 ಕೂಡ ಸುಮಾರು 180 ಕೋಟಿ ರೂಪಾಯಿ ಬಂಡವಾಳದಲ್ಲಿ ಸಿದ್ಧವಾಗಿ 650 ಕೋಟಿಯಷ್ಟು ಕಲೆಕ್ಷನ್ ಮಾಡಿತ್ತು. ಹಾಗೇ ಆರ್‌ಆರ್‌ಆರ್ ಸಿನಿಮಾ ಕೂಡ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವಸೂಲಿ ಮಾಡಿತ್ತು.

ಹಾಲಿವುಡ್ ಸಿನಿಮಾಗಳನ್ನೇ ಮೀರಿಸುತ್ತಾ?

ಒಟ್ನಲ್ಲಿ ಹೀಗೆ ಹಾಕಿದ ಹಣವನ್ನು ನೀಟಾಗಿ ಹೊರಗೆ ತೆಗೆಯುವ ಕಲೆ ಕೂಡ ಕರ್ನಾಟಕದ ನಿರ್ದೇಶಕ ರಾಜಮೌಳಿ ಅವರಿಗೆ ಗೊತ್ತಿದೆ. ಕನ್ನಡ ನೆಲದಿಂದ ಹೋಗಿ ಟಾಲಿವುಡ್ ಅಖಾಡ ಪ್ರವೇಶ ಮಾಡಿ ಅಬ್ಬರಿಸಿರುವ ಎಸ್.ಎಸ್. ರಾಜಮೌಳಿ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ಆದ್ರೆ ಕೆಲವು ವರ್ಷದಿಂದ ಅವರು ಹೊಸ ಪ್ರಾಜೆಕ್ಟ್ ಶುರು ಮಾಡಿರಲಿಲ್ಲ. ಇದೀಗ ಅದಕ್ಕೆ ಪಕ್ಕಾ ಉತ್ತರ ಸಿಗುವ ಸಮಯ ಬಂದಂತೆ ಕಾಣುತ್ತಿದೆ. ಇನ್ನೇನು ಮಹೇಶ್ ಬಾಬು & ರಾಜಮೌಳಿ ಅವರ ಹೊಸ ಸಿನಿಮಾ ಶುರುವಾಗುವ ನಿರೀಕ್ಷೆ ಇದೆ. ಹಾಗೇ ಹಾಲಿವುಡ್ ಸಿನಿಮಾಗಳನ್ನೂ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿ ಮೀರಿಸುವ ಸೂಚನೆ ಸಿಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+