Dharma: ಐಶ್ವರ್ಯಾ ಕಣ್ಣೀರಿಟ್ಟಿದ್ದು ನಾಟಕನಾ? ಒಂದೇ ಉತ್ತರದಿಂದ ಮತ್ತೆ ಹೃದಯ ಗೆದ್ದ ಧರ್ಮ

ಕನ್ನಡ ಚಿತ್ರರಂಗದ ಹಿರಿಯ ನಟ ಕೀರ್ತಿ ರಾಜ್ ಅವರ ಮಗ, ನವಗ್ರಹ ಸಿನಿಮಾ ಖ್ಯಾತಿಯ ಧರ್ಮ ಕೀರ್ತಿರಾಜ್ ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರಲ್ಲಿ ಎಂಟು ವಾರಗಳನ್ನು ಪೂರೈಸಿ ಕಳೆದ ವೀಕೆಂಡ್‌ ಸಂಚಿಕೆಯಲ್ಲಿ ಮನೆಯಿಂದ ಹೊರಬಂದರು. ಯಾರ ಮನಸ್ಸನ್ನೂ ನೋಯಿಸದ ಧರ್ಮ ಕೀರ್ತಿರಾಜ್ ಪ್ರೇಕ್ಷಕರಿಗೆ ಮಾತ್ರವಲ್ಲ ಬಿಗ್‌ ಬಾಸ್‌ ಮನೆಯಲ್ಲೂ ಎಲ್ಲರಿಗೂ ಪ್ರಿಯವಾಗಿದ್ದು. ಹೀಗಾಗಿ ಧರ್ಮ ಕೀರ್ತಿರಾಜ್ ಹೊರ ಬರುತ್ತಿದ್ದಂತೆ ಎಲ್ಲರೂ ಕಣ್ಣೀರಿಟ್ಟಿದ್ದಾರೆ.

ಈ ಪೈಕಿ ಧರ್ಮ ಕೀರ್ತಿರಾಜ್ ಆಪ್ತೆಯಾಗಿದ್ದ ಐಶ್ವರ್ಯ ಜೋರಾಗಿ ಕಣ್ಣೀರಿಟ್ಟಿದ್ದಾರೆ. ಐಶ್ವರ್ಯ ಅಳುವುದನ್ನು ಕಂಡ ಕೆಲ ಸ್ಪರ್ಧಿಗಳು ಅದನ್ನು ನಾಟಕ ಎಂದಿದ್ದಾರೆ. ಯಾಕೆಂದರೆ ಕೊನೆಯ ಬಾರಿ ಕಿಚ್ಚ ಸುದೀಪ್‌ ಯಾರು ಈ ಮನೆಯಲ್ಲಿ ಉಳಿಯ ಬೇಕು ಎಂದಾಗ ಧರ್ಮ ಹಾಗೂ ಚೈತ್ರಾ ಪೈಕಿ ಐಶ್ವರ್ಯ, ಚೈತ್ರಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಐಶ್ವರ್ಯ ಯಾಕೆ ಚೈತ್ರಾ ಅವರನ್ನು ಆಯ್ಕೆ ಮಾಡಿಕೊಂಡರು ಎನ್ನುವುದುನ್ನು ತಿಳಿಯದೇ ಆಕೆ ಅತ್ತಿದ್ದು ನಕಲಿ ಎಂದು ತಾವೇ ತೀರ್ಮಾನ ತೆಗೆದುಕೊಂಡಿದ್ದರು.

Is Aishwarya Really Cried When Dharma Keerthiraj Leaves The Bigg Boss House

ಈ ಬಗ್ಗೆ ಸ್ವತಃ ಧರ್ಮ ಕೀರ್ತಿರಾಜ್ ಮಾತನಾಡಿದ್ದು, ತಾವು ಕೊಟ್ಟ ಒಂದೇ ಉತ್ತರಿಂದ ಮತ್ತೆ ಪ್ರೇಕ್ಷಕರ ಹೃದಯ ಕದ್ದಿದ್ದಾರೆ. ' ಬಿಗ್‌ ಬಾಸ್‌ ಮನೆಯಲ್ಲಿ ಐಶ್ವರ್ಯ ನನ್ನ ಪರವಾಗಿ ಪ್ರತಿಯೊಂದು ಸಂದರ್ಭದಲ್ಲಿಯೂ ನಿಂತಿದ್ದಾರೆ. ಪ್ರತಿ ಸಲ ನಾಮಿನೇಷನ್‌ನಲ್ಲೂ ಯಾರಿರಬೇಕು ಎಂದಾಗ ಐಶ್ವರ್ಯ ನನ್ನ ಹೆಸರೇ ಹೇಳಿದ್ದಾರೆ. ನಾನು ಅದನ್ನು ಅವರಿಗೂ ಹೇಳಿದ್ದೇನೆ. ಯಾರೇ ಎದುರು ನಿಂತರೂ ನೀವು ನನ್ನ ಬಿಟ್ಟುಕೊಟ್ಟಿಲ್ಲ, ಯಾವಾಗಲೂ ನಾನು ಇರಬೇಕು ಅಂತಾನೇ ಹೇಳಿದ್ದೀರಾ ಎಂದು ನಾನೇ ಹೇಳಿದ್ದೆ ಎಂದರು.

ಜೋಡಿ ಟಾಸ್ಕ್‌ ಬಂದಾಗ ನನಗೆ ತುಂಬಾ ಪ್ರೋತ್ಸಾಹ ಕೊಡುತ್ತಾರೆ. ಯಾವುದೋ ಒಂದು ಅವಾರ್ಡ್‌ ಬಂದಿರುವುದಕ್ಕೆ ನಾನು ತುಂಬಾ ಬೇಜಾರಿನಲ್ಲಿದ್ದೆ. ಅಂತಹ ಸಮಯದಲ್ಲಿ ಐಶ್ವರ್ಯ ನನ್ನ ಜೊತೆಗೆ ಇದ್ದು ಪ್ರೋತ್ಸಾಹ ಕೊಟ್ಟಿದ್ದರು. ಆದರೆ ಕೊನೆಯ ದಿನ ಕೊನೆಯ ಕ್ಷಣ ಬಂದಾಗ ಇಡೀ ಮನೆ ಧರ್ಮ ಇರಬೇಕು ಎಂದು ಹೇಳುತ್ತಾರೆ. ಆದರೆ ಐಶ್ವರ್ಯ ಹೇಳಲ್ಲ. ಯಾಕೆಂದರೆ ಆ ವಾರ ಚೈತ್ರಾ ಮತ್ತು ಅವರಿಗೆ ಒಳ್ಳೆಯ ಸ್ನೇಹ ಬೆಳೆದಿರುತ್ತದೆ.

Is Aishwarya Really Cried When Dharma Keerthiraj Leaves The Bigg Boss House

ಗಂಟೆ ಗಟ್ಟಲೆ ಮಾತನಾಡಿರುತ್ತಾರೆ. ಆ ವೇಳೆ ಎಲ್ಲೋ ಒಂದು ಸಂದರ್ಭದಲ್ಲಿ ಚೈತ್ರಾ ಅವರು ತಮಗೆ ಬಿಗ್ ಬಾಸ್‌ ಎಷ್ಟು ಮುಖ್ಯ ಎಂದು ಹೇಳಿರುತ್ತಾರೆ. ಇದರಿಂದ ಐಶ್ವರ್ಯ ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದರು. ಇದರಿಂದ ಅವರು ಚೈತ್ರಾ ಅವರ ಹೆಸರು ತೆಗೆದುಕೊಂಡಿರಬಹುದು. ಅದರಲ್ಲಿ ನನಗೆ ಏನೂ ಬೇಜಾರಿಲ್ಲ. ಅವರು ಅತ್ತಿದ್ದು ಮನಸಾರೆ ಅಂತಾ ನನಗೆ ಅನಿಸುತ್ತದೆ. ಶಿಶಿರ್‌ ಹಾಗೂ ಐಶ್ವರ್ಯ ಅವರು ನನ್ನ ವಿಚಾರದಲ್ಲಿ ನಿಜವಾಗಿ ಬೇಸರ ಮಾಡಿಕೊಂಡಿದ್ದಾರೆ ಎಂದು ಧರ್ಮ ಕೀರ್ತಿರಾಜ್‌ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+