Rachitha: ಖ್ಯಾತ ನಟಿ ರಚಿತಾ ಅವರು ಪ್ರೀತಿಸಿ ಮದುವೆಯಾಗಿದ್ದ ಆ ಹುಡುಗ ಯಾರು ಗೊತ್ತೇ? ಅವರು ಫೇಮಸ್‌ ಸೆಲೆಬ್ರಿಟಿ!

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಚಿತಾ ಆರಂಭದಲ್ಲಿ ಕನ್ನಡ ಧಾರಾವಾಹಿಗಳಲ್ಲಿ ಸಹ ನಟಿಸುವ ಮೂಲಕ ಅದೆಷ್ಟೋ ಅಭಿಮಾನಿಗಳ ಮನಗೆದ್ದಿದ್ದಾರೆ. ಬೆಳ್ಳಿತೆರೆಯಲ್ಲಿ ನಟ- ನಟಿಯರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಅದೇ ರೀತಿ ಕಿರುತೆರೆಯಲ್ಲಿ ಹಲವು ನಟ-ನಟಿಯರೂ ಸಹ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ರಚಿತಾ ಅವರು ಅದೆಷ್ಟೋ ಯುವಕರ ಮನದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಚಿತಾ ಮಹಾಲಕ್ಷ್ಮಿ ಆರಂಭದಲ್ಲಿ ಕನ್ನಡ ಧಾರಾವಾಹಿಗಳಲ್ಲಿ ಸಹ ನಟಿಸಿದ್ದರು. ನಂತರ ತಮಿಳು ನಿರ್ದೇಶಕರು ಅವರ ಅಭಿನಯಕ್ಕೆ ಮನಸೋತು ಧಾರಾವಾಹಿಯೊಂದರಲ್ಲಿ ನಟಿಸಲು ಅವಕಾಶ ನೀಡಿದ್ದರು. ರಚಿತಾ ಮಹಾಲಕ್ಷ್ಮಿ ಅವರು ನಟಿಸಿದ ಧಾರಾವಾಹಿಗಳಿಂದ ಹೆಚ್ಚು ಪ್ರಸಿದ್ಧರಾಗಿದ್ದರು.

Is actress Rachita Mahalakshmi ready for her second marriage

ರಚಿತಾ ಮಹಾಲಕ್ಷ್ಮಿ ಅವರು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಹೆಚ್ಚು ಪ್ರಸಿದ್ದಿ ಹೊಂದಿದ ಬಳಿಕ ಬಿಗ್ ಬಾಸ್ 6 ಕಾರ್ಯಕ್ರಮದ ಮೂಲಕ ಇನ್ನೂ ಅನೇಕರಿಗೆ ಪರಿಚಿತರಾದರು. ಇನ್ನೂ ರಚಿತಾ ಮಹಾಲಕ್ಷ್ಮಿ ಅವರು ತಮ್ಮ ಮೊದಲ ತಮಿಳು ಧಾರಾವಾಹಿಯಲ್ಲಿ ಸಹನಟ ದಿನೇಶ್ ಎಂಬುವವರನ್ನ ಪ್ರೀತಿಸಿ 2015 ರಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ರಚಿತಾ ಹಾಗೂ ದಿನೇಶ್‌ ಅವರ ವೈಯಕ್ತಿಕ ಜೀವನ ತುಂಬಾ ಚನ್ನಾಗಿಯೇ ಸಾಗುತ್ತಿತ್ತು. ಆದರೆ, 2021ರಲ್ಲಿ ಅವರಿಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು.

2021 ರ ಬಳಿಕ ಇಬ್ಬರ ಮಧ್ಯೆ ಮನಸ್ಥಾಪದಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಬಳಿಕ 2022 ರಲ್ಲಿ ನಡೆದ ಬಿಗ್ ಬಾಸ್ ಸೀಸನ್ 6 ಕಾರ್ಯಕ್ರಮದಲ್ಲಿ ರಚಿತಾ ಮುಖ್ಯ ಸ್ಪರ್ಧಿಯಾಗಿ ಭಾಗವಹಿಸಿದರು. ಆಗ ಅವರ ದಾಂಪತ್ಯ ಮುರಿದು ಬೀಳಲು ನಟಿಯೇ ಕಾರಣ ಎಂದು ಹಲವರು ಹೇಳಿದ್ದರು. ಆದರೆ ರಚಿತಾ ಆ ವದಂತಿಗೆ ಸ್ಪಷ್ಟನೆಯನ್ನೂ ಕೊಟ್ಟಿದ್ದರು..

ಇನ್ನೂ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಆಗ ರಚಿತಾ ಮಹಾಲಕ್ಷ್ಮಿ ಅವರ ಮಾಜಿ ಪತಿ ದಿನೇಶ್ ಅವರು ಸಂದರ್ಶನವೊಂದರಲ್ಲಿ ರಚಿತಾ ಅವರ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ಅವರ "ತನಗಾಗಿಯೇ ಗೋಡೆ ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಅದನ್ನು ಒಡೆಯಲಾಗದೆ ಆ ಗೋಡೆ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ ಎಂದು ದಿನೇಶ್‌ ಅವರು ಹೇಳಿದ್ದರು.

ಮೊದಲ ಪತಿಯಿಂದ ದೂರವಾಗಿರುವ ರಚಿತಾ ಅವರು, ಕೆಲವು ದಿನಗಳಿಂದ ಎರಡನೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆಕೆ ಕನ್ನಡದ ನಿರ್ದೇಶಕರೊಬ್ಬರನ್ನು ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ರಚಿತಾ ಮಹಾಲಕ್ಷ್ಮಿ ಅವರ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.. ಹಾಗಾಗಿ ಇದು ಇಲ್ಲಿಯವರೆಗೆ ಕೇವಲ ವದಂತಿಗಳಾಗಿಯೇ ಉಳಿದಿವೆ.

ತಮಿಳು ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿರುವ ರಚಿತಾ ಮಹಾಲಕ್ಷ್ಮಿ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದು, ಸದ್ಯ ಬೇರೆ ಬೇರೆ ವಾಹಿನಿಗಳಲ್ಲಿ ರಚಿತಾ ಅವರು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಬೇರೆ ಬೇರೆ ವಾಹಿನಿಯಲ್ಲಿ ನಟಿಸುತ್ತಿರುವಾಗಲೇ ರಚಿತಾಗೆ 'ಸರವಣನ್ ಮೀನಾಕ್ಷಿ 2' ಅವಕಾಶ ಬಂದಿತ್ತು. ಮೊದಲ ಸೀಸನ್ ಯಶಸ್ವಿಯಾದ ನಂತರ, ಎರಡನೇ ಸೀಸನ್‌ನಲ್ಲಿಯೂ ನಟಿಸಲು ಸಹಿ ಹಾಕಿದರು. ಇದರಲ್ಲಿ ಸರವಣನ್ ಮೀನಾಕ್ಷಿ 2 ರಲ್ಲಿ ರಚಿತಾ ಅವರು 'ತಂಗ ಮೀನಾ' ಪಾತ್ರದಲ್ಲಿ ನಟಿಸಿದ್ದರು. ಈ ಎರಡೂ ಸೀಸನ್‌ಗಳು ಭಾರೀ ಹಿಟ್ ಆಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+