ಈ ಕಾರಣಕ್ಕೆ ಬಿಗ್ ಪ್ರಾಜೆಕ್ಟ್ ಸಿಗುತ್ತಿಲ್ಲ; ಬೇಸರ ವ್ಯಕ್ತಪಡಿಸಿದ ದಿಯಾ ನಟಿ ಖುಷಿ ರವಿ
ದಿಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ ಖುಷಿ ರವಿ. ಕನ್ನಡ ಚಿತ್ರರಂಗದಲ್ಲಿ ವಿಶಿಷ್ಠ ಸಿನಿಮಾಗಳ ಮೂಲಕ ಭರವಸೆಯನ್ನು ಮೂಡಿಸಿರುವ ನಟಿ ಖುಷಿ ಅವರು ಚಿತ್ರರಂಗದಲ್ಲಿ ಜನಪ್ರಿಯ ಪಡೆದ ನಟಿಯಾಗಿದ್ದಾರೆ. ದಿಯಾ ಸಿನಿಮಾದ ಬಳಿಕ ಇತ್ತೀಚೆಗೆ ಜೀ 5ನ ಮೊದಲ ಕನ್ನಡ ವೆಬ್ ಸೀರಿಸ್ 'ಅಯ್ಯನ ಮನೆ'ಯಲ್ಲಿ ನಟಿಸಿದ್ದಾರೆ. 'ಅಯ್ಯನ ಮನೆ' ಕನ್ನಡ ವೆಬ್‌ನಲ್ಲಿ ಖುಷಿ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ದಿಯಾ ನಟಿ ಖುಷಿ ರವಿ ಅವರಿಗೆ ಈಗಾಗಲೇ ಮದುವೆ ಆಗಿ, ಒಬ್ಬ ಮಗಳಿದ್ದಾಳೆ. ಇದನ್ನೇ ಮುಂದಿಟ್ಟುಕೊಂಡು ಅವಕಾಶ ನೀಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆಂದು ಗ್ಲೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಹಲವು ಪಾತ್ರದಲ್ಲಿ ನಟಿಸಿ, ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದರೂ ಸಹ ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್‌ನಿಂದ ಆಫರ್ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕೆಲವು ಆಫರ್‌ಗಳು ಬಂದವು. ಪ್ರಾಮಾಣಿಕವಾಗಿ ಹೇಳಬೇಕು ಅಂದರೆ, ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್‌ನವರು ಓ ಇವರಿಗೆ ಮದುವೆ ಆಗಿ ಮಗು ಆಗಿದೆಯಂತೆ ಅಂತ ಆರಂಭದಲ್ಲಿ ಹೇಳಿದವು. ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನನಗೆ ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಮಾಡಬೇಕು. ಹಿಂದೆಲ್ಲ ಒಳ್ಳೊಳ್ಳೆ ಹೀರೋಯಿನ್ಸ್‌ಗೆ ಮಾತ್ರ ಒಳ್ಳೊಳ್ಳೆ ರೋಲ್ ಸಿಗುತ್ತಿದ್ದವು. ರಮ್ಯಾ, ರಾಧಿಕಾ, ರಕ್ಷಿತಾ ಮೇಡಂ ಅವರಿಗೆಲ್ಲ ತುಂಬಾನೇ ಪ್ರಾಮುಖ್ಯತೆ ಇರೋದು ಎಂದು ನಟಿ ಖುಷಿ ರವಿ ಹೇಳಿದ್ದಾರೆ.
ದಿಯಾ ಸಿನಿಮಾದಲ್ಲಿ ಖುಷಿ ರವಿಗೆ ಗ್ಲಾಮರ್, ಬ್ಯೂಟಿ ಎಲ್ಲಾ ಪಕ್ಕಕ್ಕೆ ಇಡಿ ಎಂದು ನಿರ್ದೇಶಕರು ಹೇಳಿದ್ದರಂತೆ. ನನಗೆ ಅಶೋಕ್ ಸರ್ ಹೇಳಿದ್ದು ಅದೇ. ನಾನು ನಿಮ್ಮನ್ನು ಗ್ಲಾಮರ್‌ಗೋಸ್ಕರ ತೆಗೆದುಕೊಂಡಿಲ್ಲ. ಇದು ನಿಮ್ಮ ಮೇಲೆ ನಡೆಯೋ ಸಿನಿಮಾ. ಮೇಕಪ್, ಔಟ್‌ಫಿಟ್ಸ್ ಹೀಗೆ ವೆರೈಟಿ ಎಲ್ಲಾ ಬೇಡ. ನಿಮ್ಮ ವೆರೈಟಿ ಏನಿದ್ದರೂ ಆಕ್ಟಿಂಗ್‌ನಲ್ಲಿ ಇರಬೇಕು ಅಂತ ಹೇಳಿದ್ದರು. ಹೀರೋಯಿನ್ ಅಂದ ಕೂಡಲೇ ಬ್ಯೂಟಿ ಶಾಟ್ಸ್ ಆಗಿರಬಹುದು, ಇಂಟ್ರುಡಕ್ಷನ್ ಶಾಟ್ಸ್, ಬಿಲ್ಡಪ್ ಈ ತರ ಎಲ್ಲಾ ಇರೋದು. ಇಲ್ಲಿ ನಿಮಗೆ ಯಾವುದೂ ಇರೋದಿಲ್ಲ. ನಾರ್ಮಲ್ ಆಗಿರುತ್ತೆ. ಎಲ್ಲದಕ್ಕೂ ರೆಡಿಯಾಗಿರಿ ಎಂದೇ ಹೇಳಿದ್ದರು ಎಂದು ದಿಶಾ ನಿರ್ದೇಶಕರ ಮಾತನ್ನು ಸಂದರ್ಶನದಲ್ಲಿ ಹೇಳಿದರು.
ರಮೇಶ್ ಇಂದಿರಾ ಸರ್ ಒಂದು ಪ್ರಾಜೆಕ್ಟ್‌ಗೆ ಕಾಲ್ ಮಾಡಿದ್ದರು. ಆದರೆ, ವರ್ಕ್‌ಔಟ್ ಆಗಲಿಲ್ಲ. ಅದು ಅಯ್ಯನ ಮನೆ ಅಲ್ಲ ಬೇರೆ ಪ್ರಾಜೆಕ್ಟ್. ಆ ಟೈಮ್‌ನಲ್ಲಿ ನಾನು ಸ್ವಲ್ಪ ಬ್ಯುಸಿಯಾಗಿದ್ದೆ. ರಮೇಶ್ ಸರ್ ಹತ್ತಿರ ಮಾತಾಡುವುದಕ್ಕೆ ಆಗಲಿಲ್ಲ. ಆಮೇಲೆ 3 ತಿಂಗಳಾದ್ಮೇಲೆ ರಮೇಶ್ ಇಂದಿರಾ ಸರ್ ಅವರಿಂದಲೇ ಫೋನ್ ಬಂತು. ಒಂದು ಪ್ರಾಜೆಕ್ಟ್ ಬಗ್ಗೆ ಮೀಟ್ ಮಾಡಬೇಕು ಅಂತ ಹೇಳಿದ್ದರು. ಆಗ ನನಗೆ ವೆಬ್ ಸೀರಿಸ್ ಅಂತೇನು ಹೇಳಿರಲಿಲ್ಲ. ಒಂದು ಕಥೆ ಹೇಳುತ್ತೀನಿ ಅಂತ ಹೇಳಿದ್ದರು. ನನಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು ಎಂದು ಅಯ್ಯನ ಮನೆ ಪ್ರಾಜೆಕ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications