Ramya Divya Spandana: ಯುದ್ಧವಾದರೆ ಸಾಯುವುದು ನಮ್ಮ ಸೈನಿಕರೇ..: ನಟಿ ರಮ್ಯಾ!

India Vs Pakistan War: ಯುದ್ಧವನ್ನು ಮಾಡುವುದರಿಂದ ಸಾಯುವುದು ನಮ್ಮ ಸೈನಿಕರೇ... ಈ ಕಾರಣಕ್ಕಾಗಿ ನಾನೆಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ ಅಂತ ನಟಿ ರಮ್ಯಾ ಅವರು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರು ಸೇರಿದಂತೆ ಇಡೀ ದೇಶದಾದ್ಯಂತ ಉಗ್ರರು ಹಾಗೂ ಬೆಂಬಲ ನೀಡಿದೆ ಎನ್ನಲಾದ ಪಾಕಿಸ್ತಾನದ ಮೇಲೆ ಪ್ರತೀಕಾರ ತೀರಿಸಿಕೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಈ ರೀತಿ ಇರುವಾಗಲೇ ರಮ್ಯಾ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಪರ - ವಿರೋಧ ಚರ್ಚೆ ಸಹ ನಡೆಯುತ್ತಿದೆ.

ನಟಿ ರಮ್ಯಾ ಅವರು ಕಾಂಗ್ರೆಸ್‌ ಪಕ್ಷದ ಮಾಜಿ ಸಂಸದೆ ಹಾಗೂ ಕಾಂಗ್ರೆಸ್‌ ಪಕ್ಷದೊಂದಿಗೆ ಅವರು ಗುರುತಿಸಿಕೊಂಡಿರುವುದು ಸಹ ಇದೆ. ಈ ಹಿನ್ನೆಲೆಯಲ್ಲಿ ಅವರು ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಲ್ಲದೇ ಭಾರತ Vs ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವಾಗ ಅವರು ನೀಡಿರುವ ಹೇಳಿಕೆಯು ಭಾರೀ ಚರ್ಚೆಗೆ ಸಹ ಕಾರಣವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕನ್ನಡಿಗರು ಸೇರಿದಂತೆ 26 ಜನ ಉಗ್ರರು ಮೃತಪಟ್ಟಿದ್ದಾರೆ.

If India Vs Pakistan War Happens Our Soldiers Will Die Actress Ramya

ಈ ದಾಳಿಯ ಬಗ್ಗೆ ಮಾತನಾಡಿರುವ ಅವರು, ಯುದ್ಧ ಮಾಡುವುದರಿಂದ ಯಾರಿಗಾದರೂ ಒಳ್ಳೆಯದಾಗುತ್ತಾ ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಯುದ್ಧ ಮಾಡುವುದರಿಂದ ಯಾರೂ ಸಹ ಉದ್ದಾರ ಆಗಲ್ಲ. ಎಲ್ಲದ್ದಕ್ಕೂ / ಎಲ್ಲಾ ಸಮಸ್ಯೆಗೂ ಯುದ್ಧವೊಂದೇ ಉತ್ತರವಲ್ಲ. ಯುದ್ಧ ಶುರುವಾದರೆ ನಮ್ಮ ಸೈನಿಕರೇ ಸಾಯುವುದು. ವೈಯುಕ್ತಿಕವಾಗಿ ನಾನು ಎಂದಿಗೂ ಹಿಂಸೆಯನ್ನ ಬೆಂಬಲಿಸಲ್ಲ, ಯುದ್ಧದಿಂದ ನಮ್ಮವರಿಗೇ ಸಾವು - ನೋವು ಅಂತ ಅವರು ಹೇಳಿದ್ದಾರೆ.

Take a Poll

ಭಾರತದಲ್ಲಿ ನಮ್ಮ ನಾಯಕರನ್ನು ನಾವು ಆಯ್ಕೆ ಮಾಡಿ ಕಳಿಹಿಸುವುದು ನಮ್ಮ ರಕ್ಷಣೆ ಮಾಡಲಿ ಎಂದಲ್ಲವೇ ಎಂದು ಪ್ರಶ್ನಿಸಿರುವ ಅವರು, ನಮ್ಮ ನಾಯಕರು ರಕ್ಷಣೆ ನೀಡದೆ, ಯುದ್ಧ ಎನ್ನುವುದಾದರೆ ಇದರಲ್ಲಿ ಸಾಯುವುದು ಅಮಾಯಕರಲ್ಲವೇ ಎಂದು ಪ್ರಶ್ನಿಸಿದ್ದಾರೆ. ಪಹಲ್ಗಾಮ್ ಘಟನೆಗೆ ಮುಖ್ಯವಾಗಿ ಇಂಟೆಲಿಜೆನ್ಸ್‌ನ ವೈಫಲ್ಯ ಹಾಗೂ ರಕ್ಷಣಾ ಲೋಪವಾಗಿದೆ ಈ ಬಗ್ಗೆ ನಾವು ಪ್ರಶ್ನೆ ಮಾಡಲೇಬೇಕು. ಗಡಿ ಭಾಗ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ಕಲ್ಪಿಸಬೇಕಲ್ಲವೇ ಎಂದು ಪ್ರಶ್ನಿಸಿರುವ ಅವರು, ಇಂತಹ ದೊಡ್ಡ ಮಟ್ಟದ ಭದ್ರತಾ ಲೋಪ ಯಾಕೆ ಆಗಿದೆ ಎನ್ನುವುದರ ಬಗ್ಗೆ ಪರಿಶೀಲನೆ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

If India Vs Pakistan War Happens Our Soldiers Will Die Actress Ramya

ಯುದ್ಧ ಬೇಡ ಎಂದಿದ್ದ ಸಿದ್ದರಾಮಯ್ಯ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಈಚೆಗೆ ಭಾರತ vs ಪಾಕಿಸ್ತಾನದ ನಡುವೆ ಯುದ್ಧ ಬೇಡ ಎಂದು ಮಾತನಾಡಿದ್ದರು. ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಆದರೆ ಭಾರೀ ವಿರೋಧ ಹಾಗೂ ಅಸಮಾಧಾನ ವ್ಯಕ್ತವಾಗಿತ್ತು. ಅಲ್ಲದೇ ಪಾಕಿಸ್ತಾನದ ನ್ಯೂಸ್‌ ಚಾನೆಲ್‌ಗಳಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ಪ್ರಸಾರವಾಗಿತ್ತು. ಇದಕ್ಕೆ ಭಾರೀ ವಿರೋಧ ಹಾಗೂ ಆಕ್ಷೇಪಣೆ ವ್ಯಕ್ತವಾದ ಮೇಲೆ ಯುದ್ಧ ಬೇಡವೇ ಬೇಡ ಎಂದು ಹೇಳಿಲ್ಲ ಎಂದಿದ್ದರು. ಇದೀಗ ರಮ್ಯಾ ಅವರ ಹೇಳಿಕೆಗೂ ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+