Bigg Boss: ಬಿಗ್ ಬಾಸ್ ಮನೇಲಿ ರಜತ್ & ಚೈತ್ರಾ ಕುಂದಾಪುರ ನಡುವೆ..
Bigg Boss: ಬಿಗ್ ಬಾಸ್ ಕನ್ನಡ 11ನೇ ಸೀಸನ್ ಮುಗಿಯಲು ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಈ ಭಾನುವಾರದ ವಾರದ ಕಥೆ ಕಿಚ್ಚನ ಜೊತೆ ಪ್ರೋಮೋ ಬಿಡುಗಡೆಯಾಗಿದ್ದು, ಈ ಜರ್ನಿಯಲ್ಲಿ ಡೇಂಜರ್ ಯಾರು ಹಾಗೂ ಜೋಕರ್ ಯಾರು ಎನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿರುತ್ತದೆ. ಇದೇ ವೇಳೆ ಕಪ್ ಎತ್ತಿಕೊಂಡು ನಾನು ಮನೆಗೆ ಹೋಗುತ್ತೇನೆ ಎಂದು ಸ್ಪರ್ಧಿಯೊಬ್ಬರು ಹೇಳುತ್ತಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಈ ಬಾರಿಯ ಸೀಸನ್ 11 97ನೇ ದಿನಕ್ಕೆ ಬಂದು ತಲುಪಿದೆ. ಅದರಲ್ಲೂ ಎಲ್ಲಾ ಸೀಸನ್‌ಗಿಂತಲೂ ಈ ಬಾರಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರದ್ದೇ ದರ್ಬಾರ್ ಆಗಿಬಿಟ್ಟಿದೆ. ಇವರ ಬಿಗ್ ಬಾಸ್ ಮನೆಯಲ್ಲಿನ ಆಟಕ್ಕೆ ವೀಕ್ಷಕರು ಸೈ ಎನ್ನುತ್ತಿದ್ದಾರೆ.

ಬಿಗ್‌ಬಾಸ್ ಕನ್ನಡ 11 ಸೀಸನ್ 50 ದಿನಗಳನ್ನು ಪೂರೈಸಿದ ಹೊತ್ತಲ್ಲೇ ಅಚ್ಚರಿ ರೀತಿಯಲ್ಲಿ ವೈಲ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ರಜತ್ ಅವರು ದಿನ ಕಳೆದಂತೆ ಸೌಂಡ್ ಹೆಚ್ಚು ಮಾಡುತ್ತಾ ಹೋದವರು. ಅಲ್ಲದೆ, ಕೆಲವೇ ದಿನಗಳಲ್ಲಿ ವೀಕ್ಷಕರ ಮನ ಗೆದ್ದುಬಿಟ್ಟಿದ್ದಾರೆ.
ವಾರದ ಕಥೆ ಕಿಚ್ಚನ ಜೊತೆ ಭಾನುವಾರದ ಎಪಿಸೋಡ್ ಪ್ರೋಮೋ ಬಿಡುಗಡೆಯಾಗಿದೆ. ಇದರಲ್ಲಿ ಚೈತ್ರಾ ಕುಂದಾಪುರಗೆ ಬಾಸ್ ಬಾಸ್ ಅಂತಲೇ ತಮಾಷೆ ಮಾಡುತ್ತಿದ್ದ ರಜತ್ ಇದೀಗ ಬಿಗ್ ಬಾಸ್ ಕಪ್ ನನಗೆ ಕೊಟ್ಟು ಬಿಡಿ ಅಂತಾ ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಈ ವೇಳೆ ಕಿಚ್ಚ ಸುದೀಪ್ ಅವರು ಫಿದಾ ಆಗಿದ್ದಾರೆ.
ಈ ವಾರ ಡೇಂಜರ್ ಯಾರು ಹಾಗೂ ಜೋಕರ್ ಯಾರು ಎನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿರುತ್ತದೆ. ಇದೇ ವೇಳೆ ಭವ್ಯಾ ಅವರು ತಲೆಯಲ್ಲಿ ತುಂಬಾ ವಿಚಾರಗಳನ್ನು ಓಡಿಸುತ್ತಿರುತ್ತಾರೆ ಎಂದು ಕಾರಣ ನೀಡುವ ಮೂಲಕ ಡೇಂಜರ್ ಅನ್ನುವುದನ್ನು ತ್ರಿವಿಕ್ರಂಗೆ ಕೊಡುತ್ತಾರೆ. ಇನ್ನು ಬಹುತೇಕ ಸ್ಪರ್ಧಿಗಳು ಚೈತ್ರಾಗೆ ಜೋಕರ್ ಎನ್ನುವ ಪಟ್ಟ ಕೊಡುತ್ತಾರೆ.
ಇದೇ ವೇಳೆ ರಜತ್ ಚೈತ್ರಾಗೆ ಜೋಕರ್ ಎನ್ನುವ ಪಟ್ಟವನ್ನು ಕೊಟ್ಟಿದ್ದಲ್ಲದೆ, ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಜೋಕರ್ ಚೈತ್ರಾ ಎಂದು ಹೇಳುವ ಮೂಲಕ ಅವರು ಬಿಗ್ ಬಾಸ್ ಮನೆಗೆ ಬಂದು ವಾರ ವಾರಗಳನ್ನು ಕಳೆದಿದ್ದಾರೆ. ಇಷ್ಟು ದಿನ ಅವರು ಸಂಪಾದನೆ ಮಾಡಿರೋದು ಇಷ್ಟು. ಅದಕ್ಕೆ ಅವರನ್ನು ಜೋಕರ್ ಥರಾ ನೋಡುತ್ತಿದ್ದೇನೆ ಎಂದು ಹೇಳುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಚೈತ್ರಾ ಕುಂದಾಪುರ ಅವರು, ಜೋಕರ್ ಆಸ್ಕರ್ ಗೆದ್ದಿರುವ ಕಥೆ ನಾನು ಕೇಳಿದ್ದೇನೆ ಸರ್. ಆದ್ದರಿಂದ ಇವರುಗಳ ಅಭಿಪ್ರಾಯವೇನು ನನಗೆ ದೊಡ್ಡದು ಅನ್ನಿಸುವುದಿಲ್ಲ. ಬಳಿಕ ಪ್ರತಿಕ್ರಿಯಿಸಿದ ರಜತ್ ಆಸ್ಕರ್ ಪ್ರಶಸ್ತಿಯನ್ನು ಚೈತ್ರಾ ಅವರೇ ಗೆದ್ದುಕೊಳ್ಳಲಿ ಸರ್.. ನಾನು ಬಿಗ್ ಬಾಸ್ ಕಪ್ ತೆಗೆದುಕೊಂಡು ಮನೆಗೆ ಹೋಗುತ್ತೇನೆ ಎಂದು ಹೇಳುತ್ತಾರೆ. ಆಗ ಕಿಚ್ ಸುದೀಪ್ ಫಿದಾ ಆಗಿ ನುಸು ನಗುತ್ತಾರೆ. ಈ ಪ್ರೋಮೋ ಇದೀಗ ಭಾರೀ ವೈರಲ್ ಆಗುತ್ತಿದೆ.
ರಜತ್ ಬಿಬ್ ಬಾಸ್ಗೆ ಎಂಟ್ರಿ ಕೊಟ್ಟ ದಿನದಿಂದಲೇ ಸ್ಪರ್ಧಿಗಳ ಜೊತೆ ತಮಾಷೆ, ಜಗಳ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಇವರು ಮಾಡುವ ಕಾಮಿಡಿಯಿಂಲೇ ಇವರು ವೀಕ್ಷಕರಿಗೆ ದಿನದಿಂದ ದಿನಕ್ಕೆ ಇಷ್ಟ ಆಗುತ್ತಲೇ ಇದ್ದಾರೆ.
ಇದೀಗ ಕಿಚ್ಚ ಸುದೀಪ ಅವರುಗೂ ಕೂಡ ರಜತ್ ಇಷ್ಟ ಆಗಿದ್ದಾರೆ. ಪ್ರತಿ ವಿಕೇಂಡ್ ಎಪಿಸೋಡ್‌ನನಲ್ಲಿ ರಜತ್‌ಗೆ ಕಿಚ್ಚ ಸುದೀಪ್ ಪೈಲ್ವಾನ್ ಅಂತಲೇ ಕರೆಯುತ್ತಾರೆ. ಇನ್ನು ಇಂದಿನ ಎಪಿಸೋಡ್‌ನಲ್ಲಿ ಎಲ್ಲಾ ಸ್ಪರ್ಧಿಗಳು ಚೈತ್ರಾ ಕುಂದಾಪುರಗೆ ಜೋಕರ್ ಪಟ್ಟ ಕೊಟ್ಟಿದ್ದಾರೆ.











Click it and Unblock the Notifications