ದ್ವಾಪರ ದಾಟುತ ಹಾಡು ಬರೆಯಲು ನಾಗೇಂದ್ರ ಪ್ರಸಾದ್ ತೆಗೆದುಕೊಂಡ ಸಮಯ ಎಷ್ಟು..?
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಇನ್ನೇನು ತೆರೆ ಕಾರಣು ಸಿದ್ಧವಾಗಿದೆ. ಈ ಸಿನಿಮಾದ ದ್ವಾಪರ ದಾಟುತ ನನ್ನನೇ ನೋಡಲು ನನ್ನನೇ ಸೇರಲು ಬಂದ ರಾಧಿಕೆ ಎಂಬ ಹಾಡು ಸಖತ್ ಟ್ರೆಂಡಿಂಗ್‌ನಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನದ್ದೇ ಅಬ್ಬರವಾಗಿದೆ. ಕೇಳುಗರು ತಲೆದೂಗುವ ಈ ಹಾಡನ್ನು ಹೊಸ ಗಾಯಕ ಜಸ್‌ಕರಣ್ ಸಿಂಗ್ ಹಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮುಖ್ಯವಾಗಿ ವಿ.ನಾಗೇಂದ್ರ ಪ್ರಸಾದ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಸದ್ಯ ಟ್ರೆಂಡಿಂಗ್‌ನಲ್ಲಿರುವ ಈ ಹಾಡನ್ನು ಬರೆಯಲು ಎಷ್ಟು ಸಮಯ ತೆಗೆದುಕೊಂಡಿತು ಎನ್ನುವುದನ್ನು ಸ್ವತಃ ನಾಗೇಂದ್ರ ಪ್ರಸಾದ್ ಅವರೇ ಹೇಳಿದ್ದಾರೆ. ಟವಿ 9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಎಲ್ಲಾ ಹಾಡುಗಳನ್ನು ಐದು-ಹತ್ತು ನಿಮಿಷದಲ್ಲಿ ಬರೆಯುತ್ತೇನೆ. ಈ ಹಾಡು ಬರೆಯಲು ಕೂಡ ಹೆಚ್ಚು ಸಮಯ ತೆಗೆದುಕೊಂಡಿಲ್ಲ. ಆದರೆ ಈ ಹಾಡಿಗೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಇತ್ತು. ಕಾಂಪೋಸೇಷನ್ ಜೊತೆ ಜೊತೆ ಈ ಹಾಡನ್ನು ಬರೆದಿರುವುದು ಎಂದರು.

ಯಾವುದೇ ಸಿನಿಮಾ ಆಗಲೀ, ಯಾವುದೇ ಹಾಡಾಗಲಿ, ಒಬ್ಬರಿಗೆ ಕ್ರೆಡಿಟ್ ಸಲ್ಲುವುದಿಲ್ಲ. ನಿರ್ದೇಶಕನಿಂದ ಹಿಡಿದು ಕೊರಿಯೋಗ್ರಾಫರ್‌ತನಕ ಎಲ್ಲರ ಶ್ರಮವೂ ಲೆಕ್ಕಕ್ಕೆ ಬರುತ್ತದೆ. ಒಂದು ಹಾಡಿಗೆ ಎಲ್ಲರ ಕೊಡುಗೆ ಇರುತ್ತದೆ. ಅವರು ಟ್ಯೂನ್ ಕೊಟ್ಟಿದ್ದಕ್ಕೆ, ನಾನು ಬರೆದಿದ್ದಕ್ಕೆ, ಅದಕ್ಕೆ ಸರಿಯಾಗಿ ಸೀನ್ ಸಿಕ್ಕಿರುವುದಕ್ಕೆ ಹಾಡು ಇಷ್ಟೊಂದು ಜನಪ್ರಿಯತೆ ಪಡೆದಿದೆ. ಇತ್ತೀಚಿಗೆ ನಾವು ಏನು ಮಾಡುತ್ತೇವೆ ಎಂದರೆ, ಕಾಂಪೋಸಿಂಗ್ ಜೊತೆಗೆ ಹಾಡಿನ ಸಾಲು ಬರೆಯಲು ಶುರು ಮಾಡುತ್ತೇವೆ ಎಂದು ಹೇಳಿದರು.
ಹಿಂದೆಲ್ಲಾ ಹಾಡು ಕೊಟ್ಟು ಸ್ವಲ್ಪ ದಿನ ಸಮಯ ತೆಗೆದುಕೊಳ್ಳುವುದು ಯಾವಾಗಲೋ ಟ್ಯೂನ್ ಬರುತ್ತಿತ್ತು ನಾನು ಸಮಯ ತೆಗೆದುಕೊಂಡು ಬರೆಯುತ್ತಿದ್ದೆ. ಈ ಸಿನಿಮಾದಲ್ಲಿ ಜೊತೆಯಲ್ಲೇ ಕುಳಿತುಕೊಂಡು ಮಾಡೋಣ ಅಂತಾ ಹೇಳಿದರು. ಹೀಗಾಗಿ ಅಲ್ಲಿ ಕಾಂಪೋಸಿಂಗ್ ಮಾಡುತ್ತಿದ್ದರು. ಅಲ್ಲಿಯೇ ಹಾಡಿನ ಸಾಲುಗಳನ್ನು ಅವರಿಗೆ ಕೊಡುತ್ತಿದ್ದೆ. ಈ ಹಾಡು ಹಾಗೇ ಆಗಿರುವಂತದ್ದು.

ಇಡೀ ಹಾಡು ಅಲ್ಲೇ ಕುಳಿತು ಮಾಡಿದ್ದು. ಅರ್ಜುನ್ ಬಹಳ ಸ್ಪೀಡ್ ಆಗಿ ಕಂಪೋಸ್ ಮಾಡುತ್ತಾರೆ. ಅಲ್ಲೇ ಈ ಹಾಡನ್ನು ಕಂಪೋಸ್ ಮಾಡಿದ್ರು, ನಾನು ಅಲ್ಲೇ ಸಾಲುಗಳನ್ನು ಬರೆದೆ. ಅಲ್ಲೇ ಸಿಂಗರ್ ಇರುತ್ತಾರೆ. ಅಲ್ಲೇ ಹಾಡಿ , ಅಲ್ಲೇ ಸಣ್ಣ ರಿಧಮ್ ಕೂಡ ಹಾಕಿ ಅರ್ಜುನ್ ಹಾಡು ಸಿದ್ಧ ಮಾಡಿಕೊಳ್ಳುತ್ತಾರೆ. ನನ್ನ ಅಂದಾಜು ಅಬ್ಬಾಬ್ಬ ಅಂದರೆ ಒಂದು ಎರಡು ಗಂಟೆಯಲ್ಲೇ ಈ ಹಾಡು ಸಿದ್ಧವಾಯಿತು ಎಂದು ಹೇಳಿದರು.












Click it and Unblock the Notifications