ದುಡ್ಡಿದ್ದವರಿಗೆ ಸುದೀಪ್..ದರ್ಶನ್, ದುಡ್ಡಿಲ್ಲದವರಿಗೆ ನಾನು..? ಹೀಗಂದವರು ಯಾರು..?
ದುಡ್ಡಿದ್ದವರಿಗೆ ಸುದೀಪ್, ದರ್ಶನ್, ದುಡ್ಡಿಲ್ಲದವರಿಗೆ ನಾನು ಎಂದು ಜನಪ್ರಿಯ ನಿರೂಪಕರೊಬ್ಬರು ನೀಡಿರುವ ಹೇಳಿಕೆ ವೈರಲ್ ಆಗಿತ್ತು. ಈ ಹೇಳಿಕೆಯನ್ನು ನೀಡಿರುವುದು ಮತ್ಯಾರೂ ಅಲ್ಲ ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ ಒಗ್ಗರಣೆ ಡಬ್ಬಿ ಮುರಳಿ. ಸುಮಾರು ಎರಡು ದಶಕದಿಂದ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ಒಗ್ಗರಣೆ ಡಬ್ಬಿ ಮುರಳಿ ದುಡ್ಡಿದ್ದವರಿಗೆ ಅವರು, ದುಡ್ಡಿಲ್ಲದವರಿಗೆ ನಾನು ಹೇಗೆ ಎನ್ನುವುದನ್ನು ವಿವರಿಸಿದ್ದಾರೆ.
ಈ ಬಗ್ಗೆ Rapid Rashmi ಯೂಟ್ಯೂಬ್ ಚಾನೆಲ್‌ನಲ್ಲಿ ಮನಬಿಚ್ಚಿ ಮಾತನಾಡಿದ ಅವರು, ಮೊದಲು ನಮ್ಮ ಕಾರ್ಯಕ್ರಮಕ್ಕೆ ಯಾರೋ ಫೈವ್ ಸ್ಟಾರ್ ಹೋಟೆಲ್ ಅವರನ್ನು ಕರೆದು ಅಡುಗೆ ಮಾಡಿಸುವುದಿಲ್ಲ. ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಯಕ್ರಮ ಶುರುವಾದ ಕಾರಣ ಮದುವೆ ಊಟದಂತಹ ವಿಶೇಷ ಊಟದ ಕಾರ್ಯಕ್ರಮ ನಡೆಸಿದವು. ಅಂತಹ ಸಮಯದಲ್ಲಿ ಕ್ಯಾಟರಿಂಗ್ ಮಾಡಿದವರಿಗೆಲ್ಲಾ ನಾವು ಹೋಟೆಲ್ ಮಾಡಬಹುದು ಅನಿಸಿತು. ಹೀಗಾಗಿ ಅವರೆಲ್ಲಾ ಹೋಟೆಲ್ ಆರಂಭಿಸಿದರು.

ನನ್ನ ಹತ್ತಿರ ಬಂದು ಸರ್ ಹೋಟೆಲ್ ಮಾಡುತ್ತೇವೆ. ನಿಮ್ಮ ಹೆಸರನ್ನು ಇಟ್ಟು ಹೋಟೆಲ್ ಮಾಡುತ್ತೇವೆ ಅಂದರು. ಆಯ್ತು ಮಾಡಿ ಹೋಗಿ ಅಂತಾ ಹೇಳಿದೆ. ಒಂದು 270 ಹೋಟೆಲ್ ನನ್ನ ಹೆಸರಿನಲ್ಲಿದೆ. ಆದರೆ ಯಾವುದು ನನ್ನದಲ್ಲ. ಅದು ಪ್ರಾಂಚೈಸಿನೂ ಅಲ್ಲ. ಯಾರ ಬಳಿ ಒಂದು ರೂಪಾಯಿ ಕೂಡ ನಾನು ತೆಗೆದುಕೊಳ್ಳುವುದಿಲ್ಲ. ದುಡ್ಡಿದ್ದವರಿಗೆ ಅವರು, ದುಡ್ಡಿಲ್ಲದವರಿಗೆ ನಾನು ಎಂದರು.
ಯಾರೋ ಒಬ್ಬರು ಬಂದು ನಿಮ್ಮ ಹೆಸರಿನಲ್ಲಿ ಬ್ಯುಸಿನೆಸ್ ಮಾಡುತ್ತೇವೆ ಅಂದಾಗ ಹಣ ಕೊಡು ಎನ್ನುವುದು ನನಗೆ ಅಷ್ಟು ಸರಿ ಕಾಣಲಿಲ್ಲ. ನಾವು ಅವರಿಗೆ ಮಾರಲ್ ಸಪೋರ್ಟ್. ನನ್ನ ಒಂದು ಫೋಟೋ ಹಾಕೋ ಹೋಗು ಬ್ಯುಸಿನೆಸ್ ಚೆನ್ನಾಗಿ ಮಾಡು ಅಂತಾ ಸಪೋರ್ಟ್ ಮಾಡುತ್ತೇನೆ. ಆದರೆ ಊಟ ಚೆನ್ನಾಗಿ ಕೊಡು. ಐದು ರೂಪಾಯಿ ಜಾಸ್ತಿ ಮಾಡು ಆದರೆ ಚೆನ್ನಾಗಿ ಇರುವ ಊಟ ಕೊಡು ಅಂತೀನಿ ಎಂದು ಹೇಳಿದರು.

ಜನ ಹಣ ಕೊಟ್ಟು ತಿನ್ನಲು ಬರುತ್ತಾರೆ. ಉಚಿತ ಊಟಕ್ಕಾಗಿ ದೇವಸ್ಥಾನಕ್ಕೆ ಹೋದ ಹಾಗಲ್ಲ ಅದು ಅಂತಾ ಹೇಳಿ ಮಾಡಿಸುತ್ತಿದ್ದೆ. ಇದು ಮಾಡಲು ಶುರುವಾಗಿ ಕರ್ನಾಟಕದಲ್ಲಿ ನನ್ನ ಹೆಸರಿನಲ್ಲಿ 270 ಹೋಟೆಲ್ ಆಯ್ತು. ಸಣ್ಣ ಸಣ್ಣ ಗಾಡಿ ಹೋಟೆಲ್‌ಗಳಿಂದ ಹಿಡಿದು ದೊಡ್ಡ ದೊಡ್ಡ ಸ್ಟಾರ್ ಹೋಟೆಲ್ ತನಕ ನನ್ನ ಹೆಸರಿದೆ. ನನ್ನ ಹೆಂಡತಿಯ ಎಷ್ಟೋ ರೆಸಿಪಿಗಳು ಎಷ್ಟೋ ಹೋಟೆಲ್‌ನಲ್ಲಿದೆ. ಇವತ್ತು ಫುಡ್ ಬ್ಲಾಗ್ ಮಾಡುವವರಿಗೆ ತಳಪಾಯ ನಮ್ಮ ಒಗ್ಗರಣೆ ಡಬ್ಬಿ ಕಾರ್ಯಕ್ರಮನೇ ಎಂದು ಮುರಳಿ ಹೇಳಿದ್ದಾರೆ.t












Click it and Unblock the Notifications