ಗೆಲ್ಲಲೆಬೇಕು ಒಳ್ಳೆತನ; ಬಿಗ್ ಬಾಸ್ ಫಿನಾಲೆ ಟಿಕೆಟ್ ಗೆದ್ದ ಹನುಮಂತ, ತ್ರಿವಿಕ್ರಮ್ ರೋಚಕ ಪೈಪೋಟಿ
ಬಿಗ್ ಬಾಸ್ ಕನ್ನಡ 11ನೇ ಆವೃತ್ತಿ ಮುಕ್ತಾಯಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಫಿನಾಲೆಗೆ ಮೂರು ವಾರ ಇರುವಾಗಲೇ ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲಿ ಒಬ್ಬರಿಗೆ ನೇರವಾಗಿ ಫಿನಾಲೆಗೆ ಟಿಕೆಟ್ ಪಡೆಯಲು ಟಾಸ್ಕ್‌ಗಳನ್ನು ನೀಡಲಾಗಿತ್ತು. ಭವ್ಯ, ತ್ರಿವಿಕ್ರಮ್, ರಜತ್ ಮತ್ತು ಹನುಮಂತು ಫಿನಾಲೆ ಟಾಸ್ಕ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದರು. ಶುಕ್ರವಾರ ಫಿನಾಲೆ ಟಿಕೆಟ್‌ಗಾಗಿ ನಡೆದ ಟಾಸ್ಕ್ ರೋಚಕವಾಗಿತ್ತು.
ಭವ್ಯ, ತ್ರಿವಿಕ್ರಮ್, ರಜತ್ ಮತ್ತು ಹನುಮಂತು ಫಿನಾಲೆ ಟಿಕೆಟ್ ಪಡೆಯಲು ರೋಚಕ ಸ್ಪರ್ಧೆ ನಡೆಸಿದರು. ಹಗ್ಗದ ಮೇಲೆ ಹತ್ತಿ ಕೀಲಿಕೈ ತೆಗೆದುಕೊಂಡು, ಪೆಟ್ಟಿಗೆಯ ಬೀಗ ತೆಗೆದು ಅದರಲ್ಲಿದ್ದ ಬಿಗ್ ಬಾಸ್ ಬಾವುಟವನ್ನು ಮನೆಯ ಮೇಲೆ ಹತ್ತಿ ಹಾರಿಸುವುದು ಟಾಸ್ಕ್ ಆಗಿತ್ತು.

ಭವ್ಯ ಮೊದಲನೆ ಸ್ಪರ್ಧಿಯಾಗಿ ಉತ್ತಮವಾಗಿ ಆಡಿದರು ತಮ್ಮ ಟಾಸ್ಕ್ ಅನ್ನು 3.18 ನಿಮಿಷದಲ್ಲಿ ಮುಗಿಸಿದರು. ಎರಡನೇ ಸ್ಪರ್ಧಿಯಾಗಿ ಬಂದ ರಜತ್ ಟಾಸ್ಕ್ ಮುಗಿಸಲು 3.20 ನಿಮಿಷ ತೆಗೆದುಕೊಂಡರು. ಬಳಿಕ ಬಂದ ತ್ರಿವಿಕ್ರಮ್ 2 ನಿಮಿಷ 29 ಸೆಕೆಂಡ್‌ನಲ್ಲಿ ಟಾಸ್ಕ್ ಮುಗಿಸಿದರೆ, ಕೊನೆಯದಾಗಿ ಆಟವಾಡಿದ ಹನುಮಂತ 2 ನಿಮಿಷ 27 ಸೆಕೆಂಡ್‌ನಲ್ಲಿ ಆಟ ಮುಗಿಸಿದ್ದರು.
ಛೂ ಮಂತರ್ ಸಿನಿಮಾ ನಾಯಕ ಶರಣ್ ಮತ್ತು ನಟಿ ಅದಿತಿ ಪ್ರಭುದೇವ ಬಿಗ್ ಬಾಸ್ ಮನೆಗೆ ಬಂದು ಫಲಿತಾಂಶವನ್ನು ಘೋಷಿಸಿದರು. 2 ನಿಮಿಷ 27 ಸೆಕೆಂಡ್‌ನಲ್ಲಿ ಆಟ ಮುಗಿಸಿದ ಹನುಮಂತ ಫಿನಾಲೆ ಟಿಕೆಟ್ ಪಡೆದುಕೊಂಡರು. ತ್ರಿವಿಕ್ರಮ್ ರೋಚಕ ಪೈಪೋಟಿ ಕೊಟ್ಟರು 2 ಸೆಕೆಂಡ್ ಅಂತರದಲ್ಲಿ ಫಿನಾಲೆ ಟಿಕೆಟ್ ಪಡೆಯುವ ಅವಕಾಶ ಕಳೆದುಕೊಂಡರು. ನಾಯಕ ಶರಣ್ ಎಲ್ಲಾ ಸ್ಪರ್ಧಿಗಳಿಗೆ ಶುಭ ಕೋರಿದರು.
ಕ್ಯಾಪ್ಟನ್ ಹನುಮಂತ
ಹನುಮಂತನ ಆಟಕ್ಕೆ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹನುಮಂತ ಸೋಲು ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಆಟವನ್ನು ಆಡುವುದು, ಆತನ ಮುಗ್ದತೆಯನ್ನು ಹಾಗೇ ಉಳಿಸಿಕೊಂಡಿರುವುದು ಸಾಕಷ್ಟು ಜನ ಇಷ್ಟಪಡಲು ಕಾರಣವಾಗಿದೆ.
ಬಿಗ್ ಬಾಸ್ 11ರ ಕೊನೆಯ ಕ್ಯಾಪ್ಟನ್ ಆಗಿ ಹನುಮಂತ ಆಯ್ಕೆಯಾಗಿದ್ದಾರೆ. ಫಿನಾಲೆ ಟಿಕೆಟ್ ಪಡೆದವರಿಗೆ ಕ್ಯಾಪ್ಟನ್ ಅಧಿಕಾರ ಸಿಗಲಿದೆ ಎಂದು ಬಿಗ್ ಬಾಸ್ ಘೋಷಿಸಿದರು. ಕೊನೆಯ ವಾರ ಕ್ಯಾಪ್ಟನ್ ಆಗಿರುವ ಹನುಮಂತ ಬಿಗ್ ಬಾಸ್ ಮನೆಯ ಸ್ಪರ್ಧಿಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ನೋಡಬೇಕಿದೆ.
ಉಗ್ರಂ ಮಂಜುಗೆ ಕಳಪೆ
ಈ ವಾರ ಕೆಟ್ಟ ನಿರ್ಧಾರದಿಂದ ತಾನೂ ಸೋತು ಗೌತಮಿ ಸೋಲಿಗೂ ಕಾರಣವಾಗಿದ್ದ ಉಗ್ರಂ ಮಂಜುಗೆ ಸ್ಪರ್ಧಿಗಳೆಲ್ಲಾ ಸೇರಿ ಕಳಪೆ ಪಟ್ಟ ಕೊಟ್ಟಿದ್ದಾರೆ. ಪ್ರತಿ ವಾರ ಕಳಪೆ ಪಡೆಯುತ್ತಿದ್ದ ಚೈತ್ರಾ ಕುಂದಾಪುರ ಈ ವಾರ ಉತ್ತಮ ಪಡೆದುಕೊಂಡಿದ್ದಾರೆ.












Click it and Unblock the Notifications