‘ಹನುಮಾನ್’ ಸಿನಿಮಾಗೆ ಹನುಮಂತನ ಪರಮ ಭಕ್ತ ಸರ್ಜಾ ಸಾಥ್!

ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕ್ರೇಜ್ ಕ್ರಿಯೇಟ್ ಮಾಡಿ, ಅಬ್ಬರಿಸುತ್ತಿವೆ. ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗುತ್ತಿವೆ. ಹೀಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ದಕ್ಷಿಣ ಭಾರತದಿಂದ ಸೇರ್ಪಡೆ ಆಗುತ್ತಿದೆ. ಹೀಗೆ ಸಂಭ್ರಮ ಮನೆ ಮಾಡಿದ ಸಮಯದಲ್ಲೇ 'ಹನುಮಾನ್' ಸಿನಿಮಾಗೆ ಹನುಮಂತನ ಪರಮ ಭಕ್ತ ಸರ್ಜಾ ಸಾಥ್ ನೀಡಿದ್ದಾರೆ!

ಹೌದು, ಸ್ಯಾಂಡಲ್ ವುಡ್‌ನ ಭರ್ಜರಿ ಹುಡುಗ ಧ್ರುವ ಸರ್ಜಾ ಆಂಜನೇಯ ಸ್ವಾಮಿಯ ಪರಮ ಭಕ್ತ ಅಂತ ಇಡೀ ಕನ್ನಡ ನಾಡಿಗೆ ಗೊತ್ತು. ಸದಾ ಹನುಮಂತನ ಬಗ್ಗೆ ಭಕ್ತಿಯನ್ನ ಮೆರೆಯುವ ಆಕ್ಷನ್ ಪ್ರಿನ್ಸ್ ಅವರನ್ನ ಹನುಮಾನ್ ಸಿನಿಮಾ ನಾಯಕ ತೇಜ ಸಜ್ಜಾ ಭೇಟಿ ಆಗಿದ್ದಾರೆ. ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ತೇಜ, ಈ ವೇಳೆ ಆಂಜನೇಯನ ಪರಮ ಭಕ್ತ ಧ್ರುವ ಅವರನ್ನು ಭೇಟಿಯಾಗಿ ಕೆಲ‌ಕಾಲ ಸಿನಿಮಾ ಬಗ್ಗೆ & ಸಿನಿಮಾ ರಂಗದ ಕುರಿತಾಗಿ ಚರ್ಚೆ ನಡೆಸಿದ್ದಾರೆ.

 Hanuman Movie Team And Teja Sajja Meets Dhruva Sarja In Bengaluru

'ಮಾರ್ಟಿನ್' & 'ಕೆಡಿ'ಗೆ ತೇಜ ವಿಶ್

ತೇಜ ಸಜ್ಜಾ ನಟಿಸಿದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆ ತಮ್ಮ ಚಿತ್ರ ನೋಡಲು ಧ್ರುವ ಸರ್ಜಾಗೆ ತೇಜ ಮನವಿ ಮಾಡಿದರು. ಈ ವೇಳೆ ಹನುಮಾನ್ ಟ್ರೇಲರ್ ಅದ್ಭುತವಾಗಿದ್ದು ಸಿನಿಮಾ ನೋಡುವುದಾಗಿ ಆಕ್ಷನ್ ಪ್ರಿನ್ಸ್ ಧ್ರುವ ತಿಳಿಸಿದ್ದಾರೆ. ಧ್ರುವ ಮುಂದಿನ ಸಿನಿಮಾ ಕೆಡಿ, ಮಾರ್ಟಿನ್‌ಗೆ ತೇಜ ಶುಭಾಶಯ ಕೋರಿದ್ದಾರೆ. ನಿಮ್ಮ ಪೊಗರು ಸಿನಿಮಾ, ತೆಲುಗು ಚಿತ್ರ ರಂಗದಲ್ಲಿ ಸದ್ದು ಮಾಡಿತ್ತು. ನೀವು ಅತ್ಯದ್ಭುತವಾಗಿ ಆಕ್ಷನ್ ಮಾಡುತ್ತೀರಾ ಎಂದು ಧ್ರುವ ನಟನೆಯನ್ನು ಇದೇ ವೇಳೆ ತೇಜ ಮೆಚ್ಚಿಕೊಂಡಿದ್ದಾರೆ.

ಹೇಗಿದೆ ಗೊತ್ತಾ ಸಿನಿಮಾ ಟೀಂ?

ಇನ್ನೂ ವರಲಕ್ಷ್ಮೀ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಟಪ್ ಶ್ರೀನು, ಸತ್ಯ ಒಳಗೊಂಡ ಸ್ಟಾರ್ ಕಲಾವಿದರ ತಾರಾಬಳಗವು ಚಿತ್ರದಲ್ಲಿದೆ. ಯುವ & ಪ್ರತಿಭಾವಂತ ಸಂಗೀತ ನಿರ್ದೇಶಕ ಗೌರಹರಿ ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್ ಜತೆಗೆ, ರಾಜು ತಲರಿ ಸಂಕಲನ ಈ ಸಿನಿಮಾಗೆ ಇದೆ.

ಕಥೆಯ ಬಗ್ಗೆ ಹೇಳುವುದಾದರೆ

ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ 'ಹನು-ಮಾನ್' ಕುರಿತು ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕನಾಗಿ ತೇಜ ಸಜ್ಜ ನಟಿಸುತ್ತಿದ್ದು, ನಾಯಕಿ ಆಗಿ ಅಮೃತಾ ಐಯ್ಯರ್ ನಟಿಸುತ್ತಿದ್ದಾರೆ. ಅಂಜನಾದ್ರಿ ಎಂಬ ಕಾಲ್ಪನಿಕ ಊರಲ್ಲಿ ನಡೆಯುವ ಹನುಮಾನ್‌ ಬಗ್ಗೆ ಎಲ್ಲರಲ್ಲಿಯೂ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಜನವರಿ 12ಕ್ಕೆ ರಿಲೀಸ್ ಆಗುತ್ತಿದೆ. ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ಈ ಸಿನಿಮಾ ಹನುಮಾನ್ ರಿಲೀಸ್ ಆಗ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+