Bigg Boss: ಬಿಗ್‌ಬಾಸ್‌ ಮನೆಗೆ ಹೋಗಲು ಇಲ್ಲಿದೆ ಸುವರ್ಣಾವಕಾಶ, ಇಷ್ಟು ಮಾಡಿದ್ರೆ ಸಾಕಂತೆ..!

ಸೆಪ್ಟೆಂಬರ್‌ 28ರಿಂದ ಬಿಗ್‌ಬಾಸ್‌ ಕನ್ನಡ ಸೀಸನ್‌ 12 (Bigg Boss Kannada Season 12) ಶುರುವಾಗಲಿದೆ. ಈ ಬಾರಿಯ ಸ್ಪರ್ಧಿಗಳು ಯಾರೆಂದು ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ. ಯಾವಾಗಲೂ ಸೆಲೆಬ್ರಿಟಿಗಳಿಗೆ ಮಾತ್ರನಾ ಬಿಗ್‌ಬಾಸ್‌? ಕಾಮನ್‌ ಮ್ಯಾನ್‌ಗೆ ಅವಕಾಶ ಕೊಡಿ ಎಂದು ರಾಜ್ಯದ ಜನ ಕೇಳಿಕೊಳ್ಳುತ್ತಿದ್ದರು. ಹಿಂದೊಮ್ಮೆ ಈ ಪ್ರಯೋಗವೂ ನಡೆದಿತ್ತು. ಆದರೆ ಕಳೆದ ಸೀಸನ್‌ಗಳಲ್ಲಿ ಸಾಮಾನ್ಯ ಜನರು ಬಿಗ್‌ಬಾಸ್‌ ಸ್ಪರ್ಧಿಗಳಾಗಿ ಹೋಗಿರಲಿಲ್ಲ. ಆದರೆ ಈ ಬಾರಿ ಇಂತಹ ಸುವರ್ಣಾವಕಾಶವನ್ನು ಕಲರ್ಸ್‌ ವಾಹಿನಿ ಕಲ್ಪಿಸಿದೆ. ಈ ಕೆಲಸ ಮಾಡಿದ್ರೆ ಸಾಕು, ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ನೀವೂ ಕಾಣಿಸಿಕೊಳ್ಳಬಹುದು.

ಸಾಮಾನ್ಯವಾಗಿ ಬಿಗ್‌ಬಾಸ್‌, ಸೆಲೆಬ್ರಿಟಿಗಳ ರಿಯಾಲಿಟಿ ಶೋ ಎನ್ನುವ ಮಾತಿದೆ. ಸಿನಿಮಾ, ಕ್ರೀಡೆ, ಸೀರಿಯಲ್‌, ಸೋಷಿಯಲ್‌ ಮೀಡಿಯಾ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಹೆಚ್ಚಾಗಿ ಜನಕ್ಕೆ ಪರಿಚಿತರಿರುವ ವ್ಯಕ್ತಿಗಳೇ ಬಿಗ್‌ಬಾಸ್‌ ಸ್ಪರ್ಧಿಗಳಾಗಿ ಹೋಗ್ತಾರೆ. ಆದರೆ ಸಾಮಾನ್ಯ ಜನರಿಗೂ ಬಿಗ್‌ಬಾಸ್‌ ಸ್ಪರ್ಧಿಯಾಗಬೇಕು ಅನ್ನೋದು ದೊಡ್ಡ ಕನಸು. ಪ್ರತಿ ಸೀಸನ್‌ ಬಂದಾಗಲೂ ನಾನೂ ಸ್ಪರ್ಧಿಯಾಗಬೇಕಿತ್ತು ಎಂದು ಹಗಲುಗನಸು ಕಾಣುತ್ತಾರೆ. ಈ ಹಿಂದೆ ಒಂದೆರಡು ಬಾರಿ ಕಾಮನ್‌ ಮ್ಯಾನ್‌ ಕೂಡ ಬಿಗ್‌ಬಾಸ್‌ ಮನೆಗೆ ಹೋಗುವ ಅವಕಾಶ ಪಡೆದಿದ್ದರು.

golden-opportunity-to-enter-bigg-boss-kannada-season-12-house

ಕೆಲವೇ ಸೀಸನ್‌ನಲ್ಲಿ ಕಾಮನ್‌ ಮ್ಯಾನ್‌ ಕೂಡ ಕನ್ನಡ ಬಿಗ್‌ಬಾಸ್‌ ಸ್ಪರ್ಧಿಯಾಗಿ ಮಿಂಚಿದ್ದರು. ಆದರೆ ಕಳೆದ ಸೀಸನ್‌ಗಳಲ್ಲಿ ಸಾಮಾನ್ಯ ಜನರಿಗೆ ಅವಕಾಶ ಕೊಟ್ಟಿರಲಿಲ್ಲ. ಇದರಿಂದ ಬಿಗ್‌ಬಾಸ್‌ ಅಭಿಮಾನಿಗಳು ತುಸು ಬೇಸರಗೊಂಡಿದ್ದರು. ಹೀಗಾಗಿ ಈ ಬಾರಿ ಜನಸಾಮಾನ್ಯರೂ ಬಿಗ್‌ಬಾಸ್‌ ಮನೆಗೆ ಪ್ರವೇಶಿಸಲು ಅವಕಾಶ ಕಲ್ಪಿಸಿದೆ.

ಬಿಗ್‌ಬಾಸ್‌ ಮನೆಗೆ ಹೋಗಲು ಏನ್‌ ಮಾಡ್ಬೇಕು?

ಈ ಅವಕಾಶ ನೀಡಿರುವ ಬಗ್ಗೆ ಕಲರ್ಸ್‌ ವಾಹಿನಿ ಪ್ರೋಮೋ ಹಂಚಿಕೊಂಡಿದ್ದು, ಕಿಚ್ಚ ಸುದೀಪ್‌ ವಿವರಿಸಿದ್ದಾರೆ. "ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಬಿಗ್‌ಬಾಸ್‌ ಮನೆಗೆ ಸ್ವಾಗತ" ಎಂದು ಸುದೀಪ್‌ ಸ್ವಾಗತಿಸಿದ್ದಾರೆ. ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಡಲು ಅದ್ಭುತ ಅವಕಾಶ. ಲಕ್ಕಿ ವಿನ್ನರ್‌ಗಳಿಗೆ ಬಿಗ್‌ಬಾಸ್‌ ಮನೆಗೆ ಅತಿಥಿಗಳಾಗಿ ಹೋಗಲು ಸೂಪರ್‌ ಚಾನ್ಸ್‌ ಇಲ್ಲಿದೆ ಎಂದು ಪ್ರೋಮೋ ಹಂಚಿಕೊಂಡಿದೆ. ಇದರಲ್ಲಿ ಕಿಚ್ಚ ಸುದೀಪ್‌, ಬನ್ನಿ ಸಿಗೋಣ ಎಂದಿದ್ದಾರೆ.

ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಯಿಂದ 10:30 ಗಂಟೆಯವರೆಗೆ ಕಲರ್ಸ್‌ ಕನ್ನಡ ನೋಡಿ ಪ್ರತಿ ಸೀರಿಯಲ್‌ನಲ್ಲಿ ಕೇಳುವ ಎಲ್ಲ ಪ್ರಶ್ನೆಗಳಿಗೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸರಿಯಾದ ಉತ್ತರ ಕೊಟ್ಟವರಿಗೆ ಈ ಬಾರಿ ಬಿಗ್‌ಬಾಸ್‌ ಮನೆಗೆ ಅತಿಥಿಯಾಗಿ ಹೋಗುವ ಅವಕಾಶ ಕಲ್ಪಿಸುವುದಾಗಿ ಗುಡ್‌ನ್ಯೂಸ್‌ ನೀಡಿದೆ. ಈ ಬಾರಿ ನೀವು ಕೂಡ ಬಿಗ್‌ಬಾಸ್‌ ಮನೆಗೆ ಹೋಗಿ ಸ್ಪರ್ಧಿಗಳನ್ನು ಭೇಟಿಯಾಗುವ ಸುವರ್ಣಾವಕಾಶ ಕಲ್ಪಿಸಿದೆ. ಅದೃಷ್ಟಶಾಲಿ ವಿಜೇತರು ಬಿಗ್‌ಬಾಸ್‌ ಮನೆಯಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿ ಕೇಳಿ ಬಿಗ್‌ಬಾಸ್‌ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಯಾರೆಲ್ಲ ಅತಿಥಿಗಳಾಗಿ ದೊಡ್ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸದ್ಯದಲ್ಲೇ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+