ಕನ್ನಡ ಕಿರುತೆರೆಯಿಂದ ಗಿಣಿರಾಮ ನಟಿ ನಯನಾ ನಾಗರಾಜ್ ಬ್ಯಾನ್: ಕಾರಣವೇನು?
ಪಾಪ ಪಾಂಡು ಹಾಗೂ ಗಿಣಿರಾಮದಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದ ನಯನಾ ನಾಗರಾಜ್ ಇತ್ತೀಚಿಗೆ ಯಾವುದೇ ಕಿರುತೆರೆ ಧಾರಾವಾಹಿ ಹಾಗೂ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದರಿಂದ ಅವರ ಅಭಿಮಾನಿಗಳಿಗೆ ಬೇಸರವಾಗಿದ್ದು, ಕೆಲ ಕಿರುತೆರೆ ಪ್ರೇಕ್ಷಕರು ನಯನಾರನ್ನು ಮರೆಯುತ್ತಿದ್ದಾರೆ.
ನಗು ಮುಖದ ನಯನಾ ನಾಗರಾಜ್ ಪಾಪ ಪಾಂಡುವಂತಹ ಧಾರಾವಾಹಿಯಲ್ಲಿ ನಗಿಸಲು ಸೈ, ಗಿಣಿರಾಮದಂತಹ ಧಾರಾವಾಹಿಯಲ್ಲಿ ಖಡಕ್ ಪಾತ್ರಕ್ಕೂ ಸೈ ಎನ್ನುವಂತಿದ್ದರು. ಯಾವುದೇ ಪಾತ್ರಕ್ಕೂ ಕೂಡ ನಯನಾ ನಾಗರಾಜ್ ಹೊಂದುತ್ತಿದ್ದರು. ಆದರೆ ನಯನಾ ನಾಗರಾಜ್ ಏಕಾಏಕಿ ಹೀಗೆ ಕಿರುತೆರೆಯಿಂದ ದೂರಾಗಿದ್ದೇಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿರಬಹುದು. ಇದಕ್ಕೆ ಉತ್ತರ ಇಲ್ಲಿದೆ.

ನಯನಾ ನಾಗರಾಜ್ ಅವರನ್ನು ಧಾರಾವಾಹಿಗಳಿಂದ ಬ್ಯಾನ್ ಮಾಡಲಾಗಿದೆ ಎನ್ನುವ ವಿಚಾರವನ್ನು ನೀವು ನಂಬುತ್ತೀರಾ? ಆಶ್ಚರ್ಯವಾದರೂ ಇದು ಸತ್ಯ. ಹೌದು ಗಿಣಿರಾಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಯನಾ ನಾಗರಾಜ್ ಅವರನ್ನು ಕಳೆದ ವರ್ಷ ಧಾರಾವಾಹಿಗಳಿಂದ ಬ್ಯಾನ್ ಮಾಡಲಾಗಿದೆಯಂತೆ. ಈ ವಿಚಾರವನ್ನು ಸ್ವತಃ ನಯನಾ ನಾಗರಾಜ್ ಇತ್ತೀಚಿಗೆ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ತಾವು ನಟಿಸುತ್ತಿದ್ದ ಧಾರಾವಾಹಿ ತಂಡದಲ್ಲಿ ವ್ಯಕ್ತಿಯೊಬ್ಬನಿ೦ದ ಮಾನಸಿಕ ಹಿಂಸೆಯಾಗುತ್ತಿತ್ತು. ಆತನ ಕಮೆಂಟ್‌ಗೆ ಎದುರೇಟು ಕೊಟ್ಟಿದ್ದಕ್ಕೆ ಆತ ಒಂದು ವರ್ಷ ನನ್ನ ಬದುಕನ್ನು ನರಕ ಮಾಡಿದ. ಹೀಗಾಗಿ ಆತನ ಮೇಲೆ ವಾಹಿನಿಗೆ ದೂರು ನೀಡಿದೆ. ಇದರಿಂದ ಹಿಂಸೆ ಇನ್ನಷ್ಟು ಜಾಸ್ತಿ ಆಯ್ತು. ಬಳಿಕ ಧಾರಾವಾಹಿ ಬಿಡುವ ನಿರ್ಧಾರ ಮಾಡಿದೆ. ಕೊನೆಗೆ ಧಾರಾವಾಹಿ ಕಥೆ ಅಂತ್ಯಗೊಳಿಸಲಾಯಿತು. ಇದರಿಂದ ತಮ್ಮ ಧಾರಾವಾಹಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತು ಎಂದು ಆರೋಪಿಸಿ ನನ್ನ ವಿರುದ್ಧ ದೂರು ನೀಡಿದರು. ಇದೇ ಕಾರಣದಿಂದ ನಾನು ಧಾರಾವಾಹಿ ಮಾಡದಂತೆ ನಿಷೇಧ ವಿಧಿಸಲಾಯಿತು ಎಂದು ನಟಿ ನಯನಾ ಹೇಳಿಕೊಂಡಿದ್ದರು.

ನಯನಾ ನಟನೆಯಿಂದ ಬ್ಯಾನ್ ಆಗಿರುವ ಹೇಳಿಕೆ ಹಾಗೂ ಧಾರಾವಾಹಿ ತಂಡದಿಂದ ತಮಗಾದ ನೋವಿನ ಬಗ್ಗೆ ಹೇಳಿರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಿಂದ ನಯನಾ ನಾಗರಾಜ್ ಏಕಾಏಕಿ ಹೀಗೆ ಕಿರುತೆರೆಯಿಂದ ದೂರಾಗಿದ್ದೇಕೆ ಎನ್ನುವ ಪ್ರಶ್ನೆಗೆ ಅವರ ಅಭಿಮಾನಿಗಳಿಗೆ ಹಾಗೂ ಕಿರುತೆರೆ ಪ್ರೇಕ್ಷಕರಿಗೆ ಉತ್ತರ ಸಿಕ್ಕಂತಾಗಿದೆ. ಸದ್ಯ ಮದುವೆಯಾಗಿ ತಮ್ಮ ಹಾಡು ಹಾಗೂ ರಂಗ ಭೂಮಿ ಕೆಲಸಗಳಲ್ಲಿ ಬ್ಯೂಸಿಯಾಗಿರುವ ನಯನಾ ನಾಗರಾಜ್ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.












Click it and Unblock the Notifications