Gauthami Jadav: ಬಿಗ್‌ ಬಾಸ್‌ ಗೌತಮಿಗೆ ವನದುರ್ಗೆಯ ಮೇಲೆ ಯಾಕಷ್ಟು ನಂಬಿಕೆ?

ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ಸ್ಪರ್ಧಿಯಾಗಿರುವ ಸತ್ಯ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಜಾದವ್‌ ಅನೇಕ ಬಾರಿ ವನದುರ್ಗೆ ಹೆಸರು ಹೇಳುವುದನ್ನು ನೀವು ಕೇಳಿರಬಹುದು. ನಾಮಿನೇಷನ್‌ನಲ್ಲಿ ಸೇವ್‌ ಆಗುವ ಸಮಯದಲ್ಲಿ ಅಥವಾ ಟಾಸ್ಕ್‌ಗಳ ಸಮಯದಲ್ಲಿ ಹೀಗೆ ದಿನದಲ್ಲಿ ಒಂದು ಬಾರಿಯಾದರೂ ವನದುರ್ಗಮ್ಮ ಎಂದು ಹೇಳುವುದನ್ನು ಅನೇಕ ಬಾರಿ ನೋಡಿರಬಹುದು. ಹಾಗಾದರೆ ಈ ವನದುರ್ಗೆ ದೇವಸ್ಥಾನ ಎಲ್ಲಿದೆ? ಕ್ಷೇತ್ರದ ಮಹತ್ವ ಏನು ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಈ ಪ್ರಶ್ನೆಗೆ ಸ್ವತಃ ಗೌತಮಿ ಜಾದವ್‌ ನೀಡಿರುವ ಉತ್ತರ ವೈರಲ್‌ ಆಗುತ್ತಿದೆ.

ಬಿಗ್‌ ಬಾಗ್‌ಗೆ ಹೋಗುವುದಕ್ಕೂ ಮುನ್ನ ಸ್ಪೀಡ್‌ ಪ್ಲಸ್‌ ಕರ್ನಾಟಕದಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗೌತಮಿ, 'ಕಳೆದ ಒಂಬತ್ತು ವರ್ಷಗಳಿಂದ ನಾನು ಪ್ರತಿ ತಿಂಗಳು ವನದುರ್ಗೆ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ. ಈ ದೇವಸ್ಥಾನ ಮಂಗಳೂರಿನಲ್ಲಿದೆ. ಇದು ನಮ್ಮದು ಮನೆ ದೇವರಲ್ಲ. ನಾನು ನಂಬಿ, ನಡೆದುಕೊಳ್ಳುವ ದೇವರು. ನನಗೆ ಭೂಮಿಗೆ ಬಂದ ಭಗವಂತ ಧಾರಾವಾಹಿಯ ನಾಯಕಿ ನಟಿ ಕೃತಿಕಾ ಅವರಿಂದ ಈ ದೇವಸ್ಥಾನದ ಬಗ್ಗೆ ಗೊತ್ತಾಯಿತು. ಅಂದು ಆಗಸ್ಟ್‌ 2015ರಿಂದ ಪ್ರತಿ ತಿಂಗಳು ಈ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ' ಎಂದರು.

Gauthami Jadav Shares Faith In Vanadurga Temple And Its Significance

'ಈ ದೇವರಿಂದ ನನಗೆ ತುಂಬಾ ಒಳ್ಳೆಯದಾಗಿದೆ. ತುಂಬಾ ಸಕರಾತ್ಮಕ ಶಕ್ತಿ ಇದೆ ಅಲ್ಲಿ. ಕೆಲವರು ದೇವರು ಅಂದಾಕ್ಷಣ ಅದೊಂದು ಬೇರೆ ಹಂತಕ್ಕೆ ಹೋಗಿ ಬಿಡುತ್ತಾರೆ. ಕೆಲವು ಸಲ ನಂಬಿಕೆ ದಾಟಿ ಮೂಢನಂಬಿಕೆಗೆ ಹೋಗಿರುತ್ತದೆ. ಆದರೆ ದೇವರು ಅಂದರೆ ನಂಬಿಕೆ. ಆ ನಂಬಿಕೆಯೊಂದನಿಟ್ಟರೆ ಆ ಸ್ಥಳದಿಂದ ಎಲ್ಲವೂ ಆಗುತ್ತದೆ ಅನಿಸುತ್ತದೆ. ಅಲ್ಲಿನ ಗುರೂಜಿ ಸಹ ತುಂಬಾ ಪ್ರಾಕ್ಟಿಕಲ್‌ ಆಗಿದ್ದಾರೆ'.

'ದೇವರನ್ನು ನಂಬಿ ಬಿಟ್ಟುಬಿಡುವುದಲ್ಲ. ದೇವರನ್ನು ನಂಬಿ ನಿನ್ನ ಶ್ರಮ ಹಾಕು ಆಗುತ್ತದೆ. ನಂಬಿ ಕೈ ಕಟ್ಟಿ ಕುಳಿತರೆ ಏನೂ ಆಗುವುದಿಲ್ಲ ಎಂದು ಗುರೂಜಿ ಹೇಳುತ್ತಾರೆ. ಅಲ್ಲಿ ನನಗೆ ಹೆಚ್ಚು ಒಳ್ಳೆ ಅನುಭವವಾಗಿದೆ. ಹೀಗಾಗಿ ನಾನು ಆ ದೇವರಿಗೆ ತುಂಬಾ ನಡೆದುಕೊಳ್ಳುತ್ತೇನೆ' ಎಂದು ಹೇಳಿದರು.

ಇನ್ನು ತಾವು ಮಾಂಸಹಾರವನ್ನು ಬಿಟ್ಟಿದ್ದೇಕೆ ಎನ್ನುವ ವಿಚಾರವಾಗಿ ಮಾತನಾಡಿದ ಗೌತಮಿ, 'ನಾನು ವನ ದುರ್ಗೆ ಎನ್ನುವ ದೇವರನ್ನು ತುಂಬಾ ನಂಬುತ್ತೇನೆ. ಆ ದೇವರಿಗೆ ನಡೆದುಕೊಳ್ಳುತ್ತೇನೆ. ಅಲ್ಲಿನ ಪೂಜೆಗಳನ್ನು ಸಾಮಾನ್ಯವಾಗಿ ಮಾಡುತ್ತಿದ್ದೆ. 108 ದಿನಗಳ ಪೂಜೆ ಮಾಡುತ್ತೇನೆ. ಆಗ ಮಾಂಸಹಾರ ಸೇವಿಸುವುದನ್ನು ಬಿಡುತ್ತೇನೆ. ಆ ಪೂಜೆಯ ಸಮಯದಲ್ಲಿ ನಾನ್‌ ವೆಜ್‌ ತಿನ್ನುವ ಹಾಗಿಲ್ಲ. ಪೂಜೆಯನ್ನು ನಾನು 108 ದಿನಗಳು ಮಾಡಲಿಲ್ಲ.

Gauthami Jadav Shares Faith In Vanadurga Temple And Its Significance

ಆದರೆ ಪೂಜೆ ನಿಲ್ಲಿಸಿದ ಮೇಲೂ ನನಗೆ ನಾನ್‌ ವೆಜ್‌ ತಿನ್ನಬೇಕು ಅಂತಾ ಅನಿಸಿಲ್ಲ. ಈಗ ಅದರ ಮೇಲೆ ಆಸೆನೂ ಆಗಲ್ಲ. ಆದರೆ ಅದನ್ನು ಬಿಟ್ಟ ಮೇಲೆ ಗೊತ್ತಾಯ್ತು ಇವತ್ತು ನಮಗೆ ಬರುವ ನಾನ್‌ ವೆಜ್‌ ಆಹಾರ ಅಷ್ಟು ಉತ್ತಮವಾಗಿರುವುದಿಲ್ಲ ಅಂತಾ. ವೆಜ್‌ನಲ್ಲೂ ಸಹ ಹಾಗೇ ಇರುತ್ತದೆ. ಆದರೆ ನಾನ್‌ ವೆಜ್‌ ಬಿಟ್ಟು ನಷ್ಟ ಏನಿಲ್ಲ ಅಂತಾ ಗೊತ್ತಾಯ್ತು. ಅದಕ್ಕೆ ಸಂಪೂರ್ಣವಾಗಿ ಅದನ್ನು ತಿನ್ನುವುದನ್ನು ನಿಲ್ಲಿಸಿದ್ದೇನೆ' ಎಂದು ನಟಿ ಗೌತಮಿ ಜಾದವ್‌ ಹೇಳಿದ್ದಾರೆ.

Image Credit- Gauthami Jadav Instagram

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+