Gauthami Jadav: ಮತ್ತೊಂದು ಪೋಸ್ಟ್ ಹಂಚಿಕೊಂಡ ಗೌತಮಿ ಜಾದವ್ ಮಾವ; ಫೋಟೊದಲ್ಲಿ ಮಗ, ಸೊಸೆಯೇ ಮಿಸ್!
ಸತ್ಯ ಧಾರವಾಹಿ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಗೌತಮಿ ಜಾದವ್ ಬಿಗ್ ಬಾಸ್ ಮೂಲಕ ಜನರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಬಿಗ್ ಬಾಸ್‌ನಲ್ಲಿ ಇರುವಷ್ಟು ದಿನ ಯಾರ ವಿರುದ್ಧವೂ ಕುತಂತ್ರ ಮಾಡದೆ, ಕೋಪ ಮಾಡಿಕೊಳ್ಳದೆ ಸಮಾಧಾನದಿಂದಲೇ ಇರುತ್ತಿದ್ದ ಗೌತಮಿ ಹಲವರ ನೆಚ್ಚಿನ ಸ್ಪರ್ಧಿ ಕೂಡ ಆಗಿದ್ದರು.
ಸತ್ಯ ಧಾರವಾಹಿಯಲ್ಲಿ ರೌಡಿ ಬೇಬಿ ಪಾತ್ರದಲ್ಲಿ ಮಿಂಚಿದ್ದ ಅವರು ನಿಜ ಜೀವನದಲ್ಲಿ ಅದಕ್ಕೆ ತದ್ವಿರುದ್ಧವಾಗಿದ್ದರು. ಅವರ ಸೌಮ್ಯ ಸ್ವಭಾವದ ಗುಣ ಅನೇಕರಿಗೆ ಅಚ್ಚರಿ ತಂದರೂ ಜನ ಇಷ್ಟಪಟ್ಟಿದ್ದಕ್ಕೆ ಅವರು ಫಿನಾಲೆ ವಾರದ ಸನಿಹ ಬಂದಿದ್ದರು.

ಕನ್ನಡ ಸಿನಿಮಾ ನಿರ್ದೇಶಕ ಗಣೇಶ್ ಕಾಸರಗೋಡು ಅವರ ಸೊಸೆ ಗೌತಮಿ ಜಾದವ್ ಎನ್ನುವುದು ಅನೇಕರಿಗೆ ಈಗಾಗಲೇ ಗೊತ್ತಾಗಿದೆ. ಗಣೇಶ್ ಕಾಸರಗೋಡು ಅವರ ಮಗ ಅಭಿಷೇಕ್‌ರನ್ನು ಗೌತಮಿ ಪ್ರೀತಿಸಿ ಮದುವೆಯಾಗಿದ್ದಾರೆ. ಬಿಗ್ ಬಾಸ್ ಮೂಲಕ ಗೌತಮಿ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಈ ಬೆನ್ನಲ್ಲೇ ಗಣೇಶ್ ಕಾಸರಗೋಡು ಅವರ ಫೇಸ್‌ಬುಕ್ ಪೋಸ್ಟ್ ಹಲವು ಅನುಮಾನಗಳಿಗೆ ಕಾರಣವಾಗಿತ್ತು.
"ಅಪ್ಪ-ಅಮ್ಮನನ್ನು ಬಿಟ್ಟು ಕುರುಡು ಮೋಹಕ್ಕೆ ಮರುಳಾಗಿ ಹೆಂಡತಿಯ ಬಾಲ ಹಿಡಿದು ಹೊರಟು ಹೋಗುವ ನಿಯತ್ತಿಲ್ಲದ ಗಂಡು ಮಕ್ಕಳಿಗೆ ಅರ್ಪಣೆ...!" ಎಂದು ಈ ಮೊದಲು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದರಿಂದ ಗೌತಮಿ ಜಾದವ್ ಮತ್ತು ಅಭಿಷೇಕ್ ಅವರ ಕುಟುಂಬದಲ್ಲಿ ಏನೋ ಸರಿ ಇಲ್ಲ ಎನ್ನುವ ಅನುಮಾನ ಶುರುವಾಗಿತ್ತು.
ಈಗ ಮತ್ತೊಂದು ಪೋಸ್ಟ್
ಹಲವು ಮಾಧ್ಯಮಗಳು ಗಣೇಶ್ ಕಾಸರಗೋಡು ಅವರ ಫೇಸ್‌ಬುಕ್ ಪೋಸ್ಟ್ ಹಂಚಿಕೊಂಡು ವರದಿ ಮಾಡಿದ್ದವು. ಈಗ ಗಣೇಶ್ ಕಾಸರಗೋಡು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.
ಗಣೇಶ್ ಕಾಸರಗೋಡ್ ತಮ್ಮ ಪತ್ನಿ, ಕಿರಿಯ ಮಗ ಮತ್ತು ಸೊಸೆಯ ಜೊತೆಗಿರುವ ಫೋಟೊವನ್ನು ಹಂಚಿಕೊಂಡಿದ್ದು, ಯಾವ ಸುಂಟರಗಾಳಿಯೂ ಇಲ್ಲ ಬಿರುಗಾಳಿಯೂ ಇಲ್ಲ, ಇದು ನಮ್ಮ ಹ್ಯಾಪಿ ಕುಟುಂಬ ಎಂದು ಪೋಸ್ಟ್ ಹಾಕಿದ್ದಾರೆ.
ಅಭಿಷೇಕ್ ಗಣೇಶ್ ಕಾಸರಗೋಡ್ ಅವರ ಹಿರಿಯ ಮಗನಾಗಿದ್ದು ಅವರ ಮತ್ತು ಗೌತಮಿ ಜಾದವ್ ಅವರ ಫೋಟೊ ಹಂಚಿಕೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ ಹಲವರು ಹಿರಿ ಮಗ ಮತ್ತು ಸೊಸೆಯ ಬಗ್ಗೆ ವಿಚಾರಿಸಿದಾದ ಅವರನ್ನೇ ಕೇಳಿ ಎನ್ನುವ ಉತ್ತರ ಕೊಟ್ಟಿದ್ದಾರೆ.
ಮುನಿಸು ಮರೆತು ಒಂದಾಗಲಿ
ಗಣೇಶ್ ಕಾಸರಗೋಡ್ ಅವರ ಸುಂದರ ಕುಟುಂಬದ ಮೇಲೆ ಯಾವುದೇ ದೃಷ್ಟಿ ಬೀಳದೇ ಇರಲಿ. ಈಗ ಬಂದಿರುವ ಸಮಸ್ಯೆಗಳು ಬಗೆ ಹರಿದು ಆದಷ್ಟು ಬೇಗೆ ಹಿರಿಮಗ ಅಭಿಷೇಕ್ ಮತ್ತು ಸೊಸೆ ಗೌತಮಿ ಜಾದವ್ ಅವರ ಜೊತೆಯೂ ಇದೇ ರೀತಿ ಫೋಟೊ ತೆಗೆಸಿಕೊಳ್ಳುವಂತಾಗಲಿ ಎಂದು ಹಲವರು ಹಾರೈಸಿದ್ದಾರೆ.











Click it and Unblock the Notifications