Gauthami Jadav: ನಾವು ಮೂರು ಜನ ಸೂಪರ್ ಆಗಿದ್ದೇವೆ- ಗೌತಮಿ ಜಾದವ್‌

ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ಸ್ಪರ್ಧಿ ಗೌತಮಿ ಜಾದವ್‌ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ವಾ? ಎನ್ನುವ ಪ್ರಶ್ನೆಗೆ ಕಾರಣವಾಗಿದ್ದು, ಅವರ ಮಾವ ಅಂದರೆ ಗೌತಮಿ ಪತಿ ಅಭಿಷೇಕ್‌ ಅವರ ತಂದೆ, ಕನ್ನಡ ಚಿತ್ರರಂಗ ನಿರ್ದೇಶಕ ಗಣೇಶ್‌ ಕಾಸರಗೋಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್‌.

ಗೌತಮಿ ಜಾದವ್‌ ಬಿಗ್‌ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ ನಿರ್ದೇಶಕ ಗಣೇಶ್‌ ಕಾಸರಗೋಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ 'ಅನ್ಯಾಯದ ಬೇಡಿಕೆಯ ಪ್ರಾರ್ಥನೆಯನ್ನು ಮುಲಾಜಿಲ್ಲದೇ ಧಿಕ್ಕರಿಸುವ, ತಿರಸ್ಕರಿಸುವ ನಮ್ಮಮ್ಮ ವನದುರ್ಗೆಗೆ ನಮೋ ನಮಃ' ಎಂದು ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು, ನಿರ್ದೇಶಕ ಗಣೇಶ್‌ ಕಾಸರಗೋಡು ಸೊಸೆಯ ಸೋಲನ್ನು ಸಂಭ್ರಮಿಸಿದರಾ? ಗೌತಮಿ ಜಾದವ್‌ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ವಾ? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

Gautami Jadhav clarify their relationship status amidst social media speculation and family rumours

ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಕೆಲವರು ಗೌತಮಿ ಜಾದವ್‌ ಹಾಗೂ ಪತಿ ಅಭಿಷೇಕ್ ನಡುವೆ ಭಿನ್ನಾಭಿಪ್ರಾಯ ಬಂದಿದೆಯೇ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದರು. ಹೀಗಾಗಿ ಈ ಬಗ್ಗೆ ಇದೀಗ ಸ್ವತಃ ಗೌತಮಿ ಜಾದವ್‌ ಸ್ಪಷ್ಟನೆ ಕೊಟ್ಟಿದ್ದು, 'ನಾವು ಆರಾಮಾಗಿದ್ದೇವೆ. ನಾನು, ಅಭಿಷೇಕ್‌ ಹಾಗೂ ಮಂಜು ಅವರು ಭೇಟಿಯಾಗುತ್ತಿದ್ದೇವೆ. ಮೂರು ಜನ ಫೋನ್‌ನಲ್ಲಿ ಮಾತನಾಡುತ್ತೇವೆ. ಆರಾಮಾಗಿದ್ದೇವೆ' ಎಂದರು.

'ನಿಜವಾಗಲೂ ಸೂಪರ್ ಆಗಿದ್ದೇವೆ. ಅಂತಹ ವಿಷಯ ಇದ್ದರೆ ಸ್ಪಷ್ಟನೆ ಕೊಡಬಹುದು. ಸೋಶಿಯಲ್‌ ಮೀಡಿಯಾದಲ್ಲಿ ಮಾತನಾಡುತ್ತಿದ್ದಾರೆ ಅಷ್ಟೇ. ಆದರೆ ನಾವೆಲ್ಲಾ ಆರಾಮಾಗಿದ್ದೇವೆ. ಇಂತಹ ವಿಚಾರಗಳು ಎಲ್ಲಿಂದ ಬರುತ್ತಿದೆ ಗೊತ್ತಿಲ್ಲ. ಆದರೆ ನನ್ನ ಜೀವನದಲ್ಲಿ ಎಲ್ಲವೂ ಚೆನ್ನಾಗಿದೆ' ಎನ್ನುವ ಮಾತನ್ನು ನಟಿ ಗೌತಮಿ ಜಾದವ್‌ ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಉಗ್ರಂ ಮಂಜು, 'ಅದು ಅವರ ವಾಕ್ ಸ್ವಾತಂತ್ಯ. ನಾವು ಅಲ್ಲಿ ಒಂದು ದಿನ ಇರುವುದನ್ನು ಇಲ್ಲಿ ಒಂದೂವರೆ ಗಂಟೆ ತೋರಿಸಲಾಗುತ್ತದೆ. ನನ್ನ ತಂಗಿಯಂದಿರು, ನನ್ನ ತಂದೆ-ತಾಯಿ ಖುಷಿಯಾಗಿದ್ದಾರೆ. ಗೌತಮಿ ಅವರ ಕುಟುಂಬದವರು ಕೂಡ ಖುಷಿಯಾಗಿದ್ದಾರೆ. ಇವಾಗ ಒಬ್ಬ ಹುಡುಗಿ-ಒಬ್ಬ ಹುಡುಗ ಸ್ನೇಹ ಬೆಳೆಸಬಾರದಾ?. ಅದೇ ಹುಡುಗ ಹುಡುಗ ಸ್ನೇಹಿತರಾಗಿದ್ದರೆ ಅದೇನೂ ಅಷ್ಟು ವಿಚಾರ ಆಗುತ್ತಿರಲಿಲ್ಲ'.

Gautami Jadhav clarify their relationship status amidst social media speculation and family rumours

'ಕೆಲವೊಂದು ಕಮೆಂಟ್‌, ಟ್ರೋಲ್‌ಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ. ಆದರೆ ಅವರಿಗೆ ಕಿವಿಮಾತು ಕೂಡ ಏನೂ ಹೇಳಲು ಆಗುವುದಿಲ್ಲ. ನಮ್ಮನ್ನು ಇಷ್ಟಪಡುವವರಿಗೆ, ನಮಗೆ, ನಾವೇನು ಅಂತಾ ಗೊತ್ತಿದ್ದರೆ, ನಾವೇನು ತಪ್ಪು ಮಾಡಿಲ್ಲ ಅಂತಾ ಗೊತ್ತಿದ್ದರೆ ಸಾಕು. ಉಳಿದ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ' ಎಂದು ಉಗ್ರಂ ಮಂಜು ನ್ಯೂಸ್‌ 18 ಕನ್ನಡದ ಸಂದರ್ಶನದಲ್ಲಿ ಹೇಳಿದ್ದಾರೆ.

Image Credit- Facebook

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+