'ನಾವಿಬ್ಬರೇ ಮದುವೆ ಆಗುವ ಯೋಚನೆ ಈಗಲೂ ಇದೆ': ಗಟ್ಟಿಮೇಳ ನಟಿಯರ ಶಾಕಿಂಗ್ ಹೇಳಿಕೆ
ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಮೂಲ್ಯ ಪಾತ್ರಧಾರಿ ನಿಶಾ ರವಿಕೃಷ್ಣನ್ ಹಾಗೂ ಆದ್ಯ ಪಾತ್ರಧಾರಿ ಅನ್ವಿತಾ ಸಾಗರ್ ಗೆಳೆತನದ ಬಗ್ಗೆ ಗೊತ್ತೇ ಇದೆ. ಧಾರಾವಾಹಿಯಲ್ಲೂ ಅತೀ ಆತ್ಮೀಯ ಸಂಬಂಧದ ಪಾತ್ರದಲ್ಲಿ ನಟಿಸಿದ್ದ ಇವರಿಬ್ಬರು ನಿಜ ಜೀವನದಲ್ಲಿಯೂ ತುಂಬಾ ಆತ್ಮೀಯ ಸ್ನೇಹಿತರು.
ಗಟ್ಟಿಮೇಳ ಧಾರಾವಾಹಿ ಮುಗಿದ ಬಳಿಕವೂ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯೂಟ್ಯೂಬ್ ವಿಡಿಯೋ ಹಾಗೂ ಇನ್ಸ್ಟಾಗ್ರಾಮ್ ರೀಲ್ಸ್‌ಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ನಿಶಾ ಹಾಗೂ ಅನ್ವಿತಾ ಇತ್ತೀಚಿಗೆ ವಿಡಿಯೋವೊಂದರಲ್ಲಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. 'ನಾವಿಬ್ಬರು ಮದುವೆಯಾಗಲು ಯೋಚಿಸಿದ್ದೆವು' ಎನ್ನುವುದರ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಅನ್ವಿತಾ ಸಾಗರ್ ಯೂಟ್ಯೂಬ್ ಚಾನೆಲ್‌ನಲ್ಲಿ ಚಾಯ್ ವಿಥ್ ಅನ್ವಿಶಾ ಎನ್ನುವ ವಿಡಿಯೋದಲ್ಲಿ ಮಾತನಾಡಿರುವ ನಿಶಾ ರವಿಕೃಷ್ಣನ್, ಅನ್ವಿಶಾ ಗೆಳೆತನದ ಬಗ್ಗೆ ವಿವರಿಸುತ್ತಾ ತಮಾಷೆಯಾಗಿ ಈ ಹೇಳಿಕೆಯನ್ನು ನೀಡಿದ್ದಾರೆ. 'ಅನ್ವಿಶಾ ಬಗ್ಗೆ ಹೇಳಬೇಕು ಎಂದರೆ ಅನ್ವಿಶಾ ಎನ್ನುವ ಹ್ಯಾಶ್‌ಟ್ಯಾಗ್ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ನಾನು ಮೊದಲೇ ಹೇಳಿದ ಹಾಗೆ ಅಕ್ಕ..ಅಕ್ಕಯಿಂದ ಶುರುವಾಗಿದ್ದು, ಈಗ ಬೀಪ್..ಬೀಪ್ ತನಕ ಬಂದಿದೆ. ನಾವು ಏನೇನೋ ಯೋಚನೆ ಮಾಡಿದ್ದೆವು. ನಾವೇ ಮದುವೆ ಆಗೋಣ ಅಂತೆಲ್ಲಾ ಯೋಚನೆ ಮಾಡಿದ್ದೆವು' ಎಂದು ನಿಶಾ ಜೋರಾಗಿ ನಕ್ಕಿದ್ದಾರೆ.

ಈ ವೇಳೆ ಅನ್ವಿತಾ ಕೂಡ ಈ ಬಗ್ಗೆ ಮಾತನಾಡಿದ್ದು, ಆ ಆಲೋಚನೆ ಈಗಲೂ ಇದೆ..ಇಲ್ಲಾ ಅಂತೆನಿಲ್ಲಾ.. ಆದರೆ ನಾವು ಆ ತರ ಅಲ್ಲಾ. ನಾವಿಬ್ಬರು ನಿಜಾ ಆ ತರ ಅಲ್ಲಾ..ಈಗಾಗಲೇ ನಮ್ಮ ಫ್ಯಾಮಿಲಿಯಲ್ಲಿ ನಮ್ಮನ್ನು ಮಕ್ಕಳು ಅಂತಾ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮದುವೆ ಆಗಿ ಬಿಡೋಣ, ಖುಷಿಯಾಗಿರುತ್ತೇವೆ. ನಿನ್ನನ್ನು ನಾನು ಫ್ರೀ ಆಗಿ ಬಿಡುತ್ತೇನೆ, ನನ್ನ ನೀನು ಫ್ರೀಯಾಗಿ ಬಿಡು, ಜಾಲಿ ಆಗಿ ಇದ್ದು ಬಿಡೋಣ ಅಂತೆಲ್ಲಾ ಯೋಚನೆ ಮಾಡಿದ್ದೇವು' ಎಂದು ಜೋರಾಗಿ ನಕ್ಕಿದ್ದಾರೆ. ನಟಿಯರು ತಮಾಷೆಯಾಗಿ ಈ ಹೇಳಿಕೆಯನ್ನು ನೀಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.












Click it and Unblock the Notifications