Dhruva Sarja: ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್; ಆಕ್ಷನ್ ಪ್ರಿನ್ಸ್ ಮಾಡಿದ್ದಾದ್ರೂ ಏನು?
ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್, ನಟ ಧ್ರುವ ಸರ್ಜಾ (Dhruva Sarja) ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಎಫ್‌ಐಆರ್ ದಾಖಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಧ್ರುವ ಅಭಿನಯದ ಕೆಡಿ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಹೊತ್ತಿನಲ್ಲಿ ಧ್ರುವ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಧ್ರುವ ಮೇಲೆ ಬರೋಬ್ಬರಿ 3 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿಬಂದಿದ್ದು, ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಧ್ರುವ ಸರ್ಜಾ ಮೇಲೆ ದೂರು ನೀಡಿದ್ದು ಯಾರು? ಏನಿದು ಆರೋಪ ಎನ್ನುವ ಸಂಪೂರ್ಣ ವಿವರ ಮುಂದೆ ತಿಳಿಯಿರಿ..
ಧ್ರುವ ಸರ್ಜಾ ಅವರ ವಿರುದ್ಧ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ "ಜಗ್ಗುದಾದ" ಸಿನಿಮಾದ ನಿರ್ದೇಶಕ ಹಾಗೂ ರಾಘವೇಂದ್ರ ಹೆಗಡೆ ಅವರು ಧ್ರುವ ವಿರುದ್ಧ ದೂರು ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ದರ್ಶನ್ ಅವರ ಜಗ್ಗುದಾದ ಸಿನಿಮಾ ಮೂಲಕ ರಾಘವೇಂದ್ರ ಅವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಆಗ ಧ್ರುವ ಸರ್ಜಾ ಅವರಿಗೂ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈಗ ಇದ್ದಕ್ಕಿದ್ದಂತೆ ಧ್ರುವ ವಿರುದ್ಧ ಬಹುಕೋಟಿ ವಂಚನೆ ಆರೋಪ ಮಾಡಿದ್ದಾರೆ.

ಏನಿದು ಆರೋಪ?
ಜಗ್ಗುದಾದ ಸಿನಿಮಾ ಹಿಟ್ ಆದ ನಂತರ ಧ್ರುವ ನನ್ನ ಕಚೇರಿಗೆ ಬಂದು ಸಿನಿಮಾ ಮಾಡುವುದಾಗಿ ಕೇಳಿದ್ದರು. ದಿ ಸೋಲ್ಜರ್ ಟೈಟಲ್‌ನ ಕಥೆ ಕೂಡ ನೀಡಿದರು. ಈ ಸಿನಿಮಾ ಕಾಂಟ್ರ್ಯಾಕ್ಟ್ ಸಹಿ ಮಾಡುವುದಕ್ಕೂ ಮೊದಲೇ ಧ್ರುವಾ 3 ಕೋಟಿ ರೂಪಾಯಿ ಕೊಡುವಂತೆ ನನಗೆ ಕೇಳಿದ್ದರು. ಈ ಹಣದಲ್ಲಿ ಫ್ಲ್ಯಾಟ್ ಖರೀದಿಸುತ್ತೇನೆ ಎಂದಿದ್ದರು. ನಂತರ ಆ ಸಿನಿಮಾ ಕೆಲಸ ಶುರುಮಾಡೋಣ ಎಂದಿದ್ದರು. ಆಗ ಧ್ರುವ ಮಾತನ್ನ ನಂಬಿ, ರಾಘವೇಂದ್ರ ಹೆಗ್ಡೆ ಹೆಚ್ಚಿನ ಬಡ್ಡಿಗೆ ಹಣ ಪಡೆದು ಧ್ರುವಗೆ 3.15 ಕೋಟಿ ರೂಪಾಯಿ ನೀಡಿದ್ದರು. 2019ರಲ್ಲಿ ಸಿನಿಮಾ ಒಪ್ಪಂದಕ್ಕೆ ಸಹಿ ಕೂಡ ಹಾಕಲಾಯಿತು. ಈ ಸಿನಿಮಾದ ಶೂಟ್ ಜನವರಿ 2020ರಲ್ಲೇ ಮುಗಿಯಬೇಕಿತ್ತು. ಬಳಿಕ ಧ್ರುವ ಈ ಸಿನಿಮಾದಿಂದ ಹಿಂದೆ ಸರಿದು, ನನ್ನ ಕರೆಗಳನ್ನು ಸ್ವೀಕರಿಸಿಲ್ಲ ಎಂದು ರಾಘವೇಂದ್ರ ದೂರಿನಲ್ಲಿ ತಿಳಿಸಿದ್ದಾರೆ.

ಧ್ರುವ ಹಣ ಪಡೆದ ನಂತರ ಸಿನಿಮಾದ ಅವಧಿ ವಿಸ್ತರಣೆ ಮಾಡುವಂತೆ ಕೇಳಿದ್ದರು. ಅದೇ ಸಮಯಕ್ಕೆ ಕೋವಿಡ್ ಕೂಡ ಬಂತು. ಲಾಕ್‌ಡೌನ್ ಮುಗಿದ ನಂತರ ಅವರು ಈ ಬಗ್ಗೆ ಸಂಪರ್ಕಕ್ಕೆ ಬರಲಿಲ್ಲ. ಆ ಸಮಯದಲ್ಲಿ ಧ್ರುವ ಅವರು ಸ್ಕ್ರಿಪ್ಟ್ ರೈಟರ್‌ಗಳಿಗೂ ಹಣ ಕೊಡಿಸಿದ್ದರು. ಒಟ್ಟಾರೆ 3.43 ಕೋಟಿ ರೂಪಾಯಿ ಧ್ರುವಗೆ ನೀಡಿದ್ದು, ಈಗ ಬಡ್ಡಿ ಸೇರಿ ಈ ಹಣ 9 ಕೋಟಿ ರೂಪಾಯಿಗೂ ಹೆಚ್ಚು ದಾಟಿದೆ ಎಂದು ರಾಘವೇಂದ್ರ ಅವರು ಪೊಲೀಸರಿಗೆ ದಾಖಲೆಯೂ ನೀಡಿದ್ದಾರೆ ಎನ್ನಲಾಗಿದೆ. ಮುಂಬೈ ಪೊಲೀಸರು ಧ್ರುವ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ












Click it and Unblock the Notifications