ನಟಿ ರುಕ್ಮಿಣಿ ವಸಂತ್‌ಗಾಗಿ ಟೌನ್‌ಹಾಲ್ ಮುಂದೆ ಫ್ಯಾನ್ಸ್ ಪ್ರತಿಭಟನೆ, ಕಾರಣವೇನು?
ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡುತ್ತಿರುವ ನಟಿ ರುಕ್ಮಿಣಿ ವಸಂತ್. ಸಪ್ತಸಾಗರದಾಚೆ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಅವರಿಗೆ ಕನ್ನಡ ಅತ್ಯುತ್ತಮ ನಟಿ ಪ್ರಶಸ್ತಿಗಳು ಇತ್ತೀಚೆಗೆ ಮುಡಿಗೇರಿವೆ. ಅಭಿಮಾನಿಗಳ ನಿದ್ದೆಕದ್ದಿರುವ ಈ ಬ್ಯೂಟಿಗೆ ಮುದ್ದಾಗಿ ರುಕ್ಕು..ಪುಟ್ಟಿ ಎಂಬ ಹೆಸರುಗಳನ್ನೂ ಇಡಲಾಗಿದ್ದು, ಇದೀಗ ರುಕ್ಕುಗಾಗಿ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆಯೂ ನಡೆಸಿದ್ದಾರೆ.
ಸಾಮಾನ್ಯವಾಗಿ ಏನೇ ಸಮಸ್ಯೆಯಾದರೂ ಬೆಂಗಳೂರಿನ ಟೌನ್‌ಹಾನ್ ಬಳಿ ಪ್ರತಿಭಟನೆ ಮಾಡುವುದು ಒಂದು ಪದ್ಧತಿ ಅಂತಾನೇ ಹೇಳಬಹುದು. ಇದೇ ಹಾದಿಯಲ್ಲಿ ನಟಿ ರುಕ್ಮಿಣಿ ಅಭಿಮಾನಿಗಳು ಕೂಡ ಟೌನ್‌ಹಾಲ್ ಮುಂದೆ ದೊಡ್ಡ ಪ್ರತಿಭಟನೆಯನ್ನೇ ಮಾಡಿದ್ದಾರೆ. ಶಾಕ್ ಆಗಬೇಡಿ, ಇದು ನಡೆದಿರುವುದು ನಿಜವಾಗಿ ಅಲ್ಲ. ಬದಲಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಹವಾ ಕ್ರಿಯೇಟ್ ಮಾಡಿದ್ದಾರೆ ರುಕ್ಕು ಫ್ಯಾನ್ಸ್.

ನಿಜವಾಗಿ ಟೌನ್‌ಹಾನ್ ಬಳಿಯೇ ಪ್ರತಿಭಟನೆ ಮಾಡುತ್ತಿರುವಂತೆ ಮೀಮ್ ಮಾಡಿರುವ ನಟಿಯ ಅಭಿಮಾನಿಗಳು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದಾರೆ. ಇಷ್ಟಕ್ಕೂ ಇದಕ್ಕೆ ಕಾರಣ ಏನು ಗೊತ್ತಾ...ಆ ಒಂದು ಸೀನ್ ಅಂತಿದ್ದಾರೆ ರುಕ್ಕು ಫ್ಯಾನ್ಸ್.
ರೋರಿಂಗ್ ಸ್ಟಾರ್ ಶ್ರೀಮುರುಳಿ ಜೊತೆ ಬಘೀರ ಸಿನಿಮಾದಲ್ಲಿ ನಟಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಈ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಕೂಡ ಆಗುತ್ತಿದೆ. ಈ ಹೊತ್ತಿನಲ್ಲೇ ರುಕ್ಮಿಣಿ ಪರ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಾರಂಭಿಸಿದ್ದಾರೆ. ಬಘೀರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಇದರಲ್ಲಿ ಶ್ರೀಮುರುಳಿ ಅವರು ರುಕ್ಮಿಣಿ ಅವರ ಕೆನ್ನೆಗೆ ಬಾರಿಸುವ ದೃಶ್ಯವೊಂದು ಇದೆ. ಇದು ರುಕ್ಮಿಣಿ ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ.

ಈ ದೃಶ್ಯವನ್ನು ಹಂಚಿಕೊಂಡಿರುವ ರುಕ್ಕು ಫ್ಯಾನ್ಸ್....ಶ್ರೀಮುರುಳಿ ಸರ್ ರುಕ್ಕು ಏನ್ ಮಾಡಿದ್ರು ಅಂತ ಹೊಡೆದ್ರಿ ಅಂತೆಲ್ಲ ಸಂಕಟ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ #JusticeForRukkuFans ಎನ್ನುವ ಹೊಸ ಅಭಿಯಾನವನ್ನೂ ಆರಂಭಿಸಿದ್ದಾರೆ. ಇನ್ನು ಟೌನ್‌ಹಾಲ್ ಮುಂದೆ ಪ್ರತಿಭಟನೆ ಮಾಡುತ್ತಿರುವಂತೆ ಎಡಿಟ್ ಮಾಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕರುನಾಡು ಹುಡುಗರ ಪ್ರೀತಿಯ ರುಕ್ಮಿಣಿ ವಸಂತ್‌ಗೆ ಪೊಲೀಸ್ ಅಧಿಕಾರಿ ಬಘೀರ (ಶ್ರೀಮುರುಳಿ ಪಾತ್ರ) ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ರುಕ್ಕು ಅಭಿಮಾನಿಗಳು ಹಾರ್ಟ್‌ಬ್ರೇಕ್ ಆಗಿದೆ. ಈ ಕೃತ್ಯವನ್ನು ಪ್ರತಿಭಟಿಸಲು ಟೌನ್‌ಹಾಲ್ ಮುಂದೆ ಫ್ಯಾನ್ಸ್ ಜಮಾಯಿಸಿದ್ದಾರೆ. ನಾವು ರುಕ್ಕು ಮೇಲೆ ಸ್ಕ್ರಾಚ್ ಆದರೂ ಸಹಿಸಿಕೊಳ್ಳುವ ಮಾತೇ ಇಲ್ಲ ಎಂದು ಫ್ಯಾನ್ಸ್ ಅಭಿಮಾನ ಮೆರೆದಿದ್ದಾರೆ.

ಬೀರ್‌ಬಲ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ರುಕ್ಮಿಣಿ ವಸಂತ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೂ ನಟಿಸಿದರು. ಆದರೆ, ರಕ್ಷಿತ್ ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಸರಣಿ ಸಿನಿಮಾಗಳ ಮೂಲಕ ರುಕ್ಮಿಣಿ ಹೆಚ್ಚು ಕ್ರೇಜ್ ಹುಟ್ಟಿಸಿದ್ದಾರೆ. ಸದ್ಯ ಟಾಲಿವುಡ್, ತಮಿಳು ಸಿನಿಮಾಗಳಲ್ಲೂ ಅವರು ಬ್ಯುಸಿಯಾಗಿದ್ದಾರೆ.
ಪ್ರಶಾಂತ್ ನೀಲ್ ಅವರು ಜ್ಯೂನಿಯರ್ ಎನ್‌ಟಿಆರ್‌ಗೆ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾಗೂ ರುಕ್ಮಿಣಿ ಅವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ರುಕ್ಮಿಣಿ ಅವರ ನಟನೆಯ ಬಘೀರ ಸಿನಿಮಾ ಅಕ್ಟೋಬರ್ 31ಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ಈ ಸಿನಿಮಾ ಕ್ರೇಜ್ ಹುಟ್ಟಿಸಿದೆ.












Click it and Unblock the Notifications