Shah Rukh Khan: ಶಾರುಖ್ ನಿಮಗೆ ವಯಸ್ಸಾಯ್ತು: ಸಿನಿಮಾ ಬಿಡಿ ಎಂದ ಅಭಿಮಾನಿ, ಶಾರುಖ್ ಖಾನ್ ಮಾಸ್ ರಿಯಾಕ್ಷನ್!
Shah Rukh Khan: ನಟ ಶಾರುಖ್ ಖಾನ್ ಅವರಿಗೆ ಒಂದಿಲ್ಲೊಂದು ವಿವಾದಗಳು ಸುತ್ತಿಕೊಳ್ಳುತ್ತಿವೆ. ಈಚೆಗೆ ನಟ ಶಾರುಖ್ ಖಾನ್ ಅವರು ಹಿಂದಿಯ ಜವಾನ್ ಸಿನಿಮಾಗಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರ ಬೆನ್ನಲ್ಲೇ ಬಹುಭಾಷಾ ನಟಿ ಊರ್ವಶಿ ಅವರು ರಾಷ್ಟ್ರೀಯ ಪ್ರಶಸ್ತಿಗಳ ಮಾನದಂಡವನ್ನು ಪ್ರಶ್ನಿಸಿದ್ದಾರೆ. ಶಾರುಖ್ ಖಾನ್ ಅವರ ಜವಾನ್‌ನಂತಹ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಬರುವುದಕ್ಕೆ ಹೇಗೆ ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ವಿಚಾರವು ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗಲೇ ನಟ ಶಾರುಖ್ ಖಾನ್ ಅವರ ನಿವೃತ್ತಿ ಅಥವಾ ಸಿನಿಮಾರಂಗದಿಂದ ದೂರ ಉಳಿಯುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ನಟ ಶಾರುಖ್ ಖಾನ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
ನಟ ಶಾರುಖ್ ಖಾನ್ ಅವರು ಈಚೆಗೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಿನಿಮಾರಂಗದಲ್ಲಿ ಮೆರೆದ ಶಾರುಖ್ ಖಾನ್ ಅವರು ಮೊದಲ ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಂದುವರಿದು ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿಯು ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ನಟ ಶಾರುಖ್ ಖಾನ್ ಅವರು ಆಗ್ಗಾಗ್ಗೆ ಅವರ ಅಭಿಮಾನಿಗಳೊಂದಿಗೆ ಚರ್ಚೆ ಮಾಡುವುದು ಇದೆ. ಅಲ್ಲದೇ ಅಭಿಮಾನಿಗಳ ಮುಕ್ತ ಪ್ರಶ್ನೆಗೆ ಅವರು ಉತ್ತರಿಸುವುದು ಸಹ ಇದೆ. ಅದೇ ರೀತಿ ಈ ಬಾರಿ ಶಾರುಖ್ ಖಾನ್ ಅವರೇ ನಿಮಗೆ ವಯಸ್ಸಾಯ್ತು ನೀವ್ಯಾಕೆ ನಿವೃತ್ತಿ ತೆಗೆದುಕೊಳ್ಳಬಾರದು ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದ್ದು ಇದಕ್ಕೆ ಶಾರುಖ್ ಅವರು ವ್ಯಂಗ್ಯವಾಗಿಯೇ ರಿಪ್ಲೈ ಕೊಟ್ಟಿದ್ದಾರೆ.

ನಟ ಶಾರುಖ್ ಖಾನ್ ಅವರು ಖಡಕ್ ಮಾತು ಹಾಗೂ ಸಮಯ ಪ್ರಜ್ಞೆಯ ಉತ್ತರಗಳಿಂದ ಫೇಮಸ್. ಆ ಕ್ಷಣಕ್ಕೆ ಅವರು ಕೌಂಟರ್ ರಿಯಾಕ್ಷನ್ ಕೊಡುವುದು ಇದೆ. ಅದೇ ರೀತಿ ಅಭಿಮಾನಿಯ ಅತಿರೇಖದ ಪ್ರಶ್ನೆಗೆ ಶಾರುಖ್ ಅವರು ಕೂಲ್ ಆಗಿಯೇ ರಿಯಾಕ್ಟ್ ಮಾಡಿದ್ದಾರೆ. ಇಷ್ಟಕ್ಕೂ ಇದೆಲ್ಲಾವೂ ಪ್ರಾರಂನಭವಾಗಿದ್ದು ನಟ ಶಾರುಖ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆ ಟ್ವಿಟ್ಟರ್‌ನಲ್ಲಿ #AskSRK ಸೆಷನ್ ಪ್ರಾರಂಭಿಸಿದ್ದರು. ಅಭಿಮಾನಿಗಳೇ ಪ್ರಶ್ನೆ ಕೇಳಿ ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಿದ್ದೇನೆ ಎನ್ನುವುದು ಇದರ ಥೀಮ್ ಆಗಿತ್ತು. ಇದರಲ್ಲಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಸೆಷನ್‌ನಲ್ಲಿ ಅಭಿಮಾನಿಯೊಬ್ಬರು ಶಾರುಖ್ ನಿಮಗೆ ವಯಸ್ಸಾಗಿದೆ ನೀವ್ಯಾಕೆ ಸಿನಿಮಾರಂಗದಿಂದ ನಿವೃತ್ತಿ ತೆಗೆದುಕೊಳ್ಳಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಭಾಯ್ ನಿಮಗೆ ವಯಸ್ಸಾಗಿದೆ. ನಿವೃತ್ತಿ ತೆಗೆದುಕೊಳ್ಳಲಿ... ಬೇರೆಯವರೂ ಮುಂದೆ ಬರಲಿ ಎಂದು ನೆಟ್ಟಿಗರೊಬ್ಬರು ರಿಪ್ಲೈ ಮಾಡಿದ್ದಾರೆ. ಇದಕ್ಕೆ ಕೂಲ್ ಆಗಿಯೇ ರಿಯಾಕ್ಟ್ ಮಾಡಿರುವ ಶಾರುಖ್ ಅವರು, ಭಾಯ್.. ಒಳ್ಳೆಯ ಪ್ರಶ್ನೆಗಳನ್ನು ಕೇಳಿ. ಅಲ್ಲಿಯವರೆಗೆ, ದಯವಿಟ್ಟು ತಾತ್ಕಾಲಿಕ ನಿವೃತ್ತಿಯಲ್ಲಿರಿ ಎಂದಿದ್ದಾರೆ.
ಈ ಮೂಲಕ ಶಾರುಖ್ ಅವರು ಪರೋಕ್ಷವಾಗಿ ಸಿನಿಮಾರಂಗದಿಂದ ನಿವೃತ್ತಿ ತೆಗೆದುಕೊಳ್ಳುವ ಮಾತೇ ಇಲ್ಲ ಎಂದು ರಿಯಾಕ್ಟ್ ಮಾಡಿದ್ದಾರೆ.












Click it and Unblock the Notifications