ಬರ್ತ್‌ಡೇ ಬಾಯ್ ‘ಡಂಕಿ’ ಡೈರೆಕ್ಟರ್‌ಗೆ ಶುಭಾಶಯಗಳ ಮಹಾಪೂರ!
ನಟ ಶಾರುಖ್ ಖಾನ್ ಅವರ ಅಬ್ಬರ ಬಾಲಿವುಡ್ ಅಂಗಳದಲ್ಲಿ ಮುಂದುವರಿದಿದೆ. ಈ ಮಧ್ಯೆ 'ಡಂಕಿ' ಚಿತ್ರದ ಮೂಲಕ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಕಮಾಲ್ ಮಾಡಲು ಈಗ ಶಾರುಖ್ ಸಿದ್ಧವಾಗಿದ್ದಾರೆ. ಈ ಸಮಯದಲ್ಲಿ 'ಡಂಕಿ' ಡೈರೆಕ್ಟರ್ ಹುಟ್ಟುಹಬ್ಬ ಬಂದಿದ್ದು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರದು ಬಂದಿದೆ.
ಹೌದು, ಬಾಲಿವುಡ್‌ನ ಸ್ಪೆಷಲ್ ಸಿನಿಮಾ ಮೇಕರ್ ಹಾಗೂ 4 ರಾಷ್ಟ್ರ ಪ್ರಶಸ್ತಿ ಗೆದ್ದ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ (Rajkumar Hirani) ಅವರಿಗೆ ಇಂದು ಬರ್ತ್ ಡೇ ಸಂಭ್ರಮ. ಈ ಹಿನ್ನೆಲೆಯಲ್ಲಿ ರಾಜ್ ಕುಮಾರ್ ಹಿರಾನಿ ಅವರಿಗೆ ಶುಭಾಶಯದ ಮಹಾಪೂರವೇ ಹರಿದು ಬಂದಿದೆ. ಮುನ್ನಾ ಬಾಯ್ ಎಂಬಿಬಿಎಸ್, ಥ್ರೀ ಇಡಿಯಟ್ಸ್, ಪಿಕೆ & ಸಂಜು ರೀತಿ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ರಾಜ್ ಕುಮಾರ್ ಹಿರಾನಿ. ಇದೇ ಸ್ಟಾರ್ ಡೈರೆಕ್ಟರ್ ಈಗ ಡಂಕಿ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದು, ಇಂದು 61 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಸಖತ್ ಪಾತ್ರದಲ್ಲಿ ಶಾರುಖ್ ಮಿಂಚಿಂಗ್!
ರಾಜ್ ಕುಮಾರ್ ಹಿರಾನಿ ಚಿತ್ರಗಳು ಮನರಂಜನೆ ಜೊತೆ ಸಖತ್ ಸಂದೇಶ ಒಳಗೊಂಡಿರುತ್ತವೆ. ಹಾಗೇ ಪಕ್ಕಾ ಫ್ಯಾಮಿಲಿ ಕುಳಿತು ನೋಡುವ ಸಿನಿಮಾಗಳನ್ನೇ ಅವರು ನೀಡುತ್ತಾರೆ. ಇಂತಹ ಸ್ಟಾರ್ ನಿರ್ದೇಶಕ ಈಗ ಶಾರುಖ್ ಖಾನ್ ಅವರ ಡಂಕಿ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್ ಬರ್ತ್ ಡೇ ದಿನ ಡಂಕಿ ಝಲಕ್ ರಿಲೀಸ್ ಆಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ರಾಜ್ ಕುಮಾರ್ ಹಿರಾನಿ, ಅಭಿಜತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು ಹಾರ್ಡಿ ಪಾತ್ರದಲ್ಲಿ ಶಾರುಖ್ ಮಿಂಚಲಿದ್ದಾರೆ.
ಯಾರೆಲ್ಲಾ ಚಿತ್ರದಲ್ಲಿ ಇದ್ದಾರೆ?
ಇನ್ನು ಶಾರುಖ್ ಖಾನ್ ಅವರ ಜೊತೆಗೆ ದೊಡ್ಡ ಸ್ಟಾರ್‌ಗಳ ದಂಡೇ ಈ ಸಿನಿಮಾಗೆ ಸಾಥ್ ನೀಡುತ್ತಿದೆ. ರಾಜಕುಮಾರ್ ಹಿರಾನಿ ಅವರು, ಕಾನೂನು ಬಾಹಿರವಾಗಿ ಕೆನಡಾ & ಅಮೆರಿಕಗೆ ಹೋಗುವ ಜನರ ಕಥೆ ಆಧರಿಸಿ ಡಂಕಿ ಸಿನಿಮಾ ಮಾಡಿದ್ದಾರೆ ಎನ್ನಲಾಗಿದೆ. ಡಂಕಿ ಸಿನಿಮಾ ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿ ಗೌರಿ ಖಾನ್ & ರಾಜ್‌ಕುಮಾರ್ ಹಿರಾನಿ ಅವರಿಂದ ನಿರ್ಮಾಣ ಆಗ್ತಿದೆ. ಇನ್ನು ಈ ಸಿನಿಮಾದಲ್ಲಿ ನಾಯಕನಾಗಿ ಶಾರುಖ್ ನಟಿಸಿದ್ದು, ತಾಪ್ಸೀ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ. ಡಿಸೆಂಬರ್ 22 ರಂದು ಸಿನಿಮಾ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ.












Click it and Unblock the Notifications