Darshan Thoogudeepa: ದರ್ಶನ್ ಜೈಲಿಗೆ ಹೋಗದಂತೆ ತಡೆಯಲು ಪ್ರಯತ್ನಿಸಿದ್ದ ದುನಿಯಾ ವಿಜಯ್!
ದರ್ಶನ್ ತೂಗುದೀಪ್ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ ಈಗ ಕಂಬಿ ಎಣಿಸುತ್ತಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಪಡೆದಿದ್ದ ನಟ ದರ್ಶನ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಊಟ ಒಗ್ಗದೆ ಪರದಾಡುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಎದುರಾಗಿದ್ದು, ಇದೇ ಸಮಯದಲ್ಲಿ ಸ್ಫೋಟಕ ಆರೋಪ ಒಂದು ಕೇಳಿಬಂದಿದೆ. ಏನೆಂದರೆ ದರ್ಶನ್ ತೂಗುದೀಪ್ ಜೈಲಿಗೆ ಹೋಗದ ರೀತಿ ರಕ್ಷಣೆ ಮಾಡಲು ನಟ ದುನಿಯಾ ವಿಜಯ್ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರಂತೆ!
ದರ್ಶನ್ ತೂಗುದೀಪ್ ಬದುಕಿನಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು, ಅಚ್ಚುಕಟ್ಟಾದ ಸಂಸಾರ & ಒಬ್ಬ ಮುದ್ದಾದ ಮಗ ಕೂಡ ಜೊತೆಗೆ ಇದ್ದ. ಆದರೆ ದರ್ಶನ್ ತೂಗುದೀಪ್ ತಮ್ಮ ಕೋಪದ ಕೈಗೆ ಬುದ್ಧಿ ಕೊಟ್ಟು ಏನೇನೋ ಅನಾಹುತ ಮಾಡಿಕೊಂಡರು ಅನ್ನೋದು ದರ್ಶನ್ ಫ್ಯಾನ್ಸ್ ಕಣ್ಣೀರು. ಅದರಲ್ಲೂ ನಟ ದರ್ಶನ್ ಅವರು ಜೈಲಿಗೆ ಹೋಗದ ರೀತಿ ರೇಣುಕಾ ಸ್ವಾಮಿಯ ಕೊಲೆ ಕೇಸ್‌ನಲ್ಲಿ, ದರ್ಶನ್ ತೂಗುದೀಪ್‌ರ ರಕ್ಷಣೆ ಮಾಡಲು ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳೇ ಪ್ರಯತ್ನ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೆ ಇದಕ್ಕೂ ಮೊದಲೇ ನಟ ದುನಿಯಾ ವಿಜಯ್ ಅವರು ನಟ ದರ್ಶನ್ ಜೈಲಿಗೆ ಹೋಗುವುದನ್ನ ತಪ್ಪಿಸಲು ಪ್ರಯತ್ನ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ! ಹಾಗಾದ್ರೆ ಈ ಘಟನೆ ನಡೆದಿದ್ದು ಯಾವಾಗ?

ದರ್ಶನ್ ರಕ್ಷಿಸಲು ದುನಿಯಾ ವಿಜಯ್ ಯತ್ನ?
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ಅಂತಾ ಹವಾ ಎಬ್ಬಿಸಿದ್ದ ದರ್ಶನ್ ತೂಗುದೀಪ್ ಏನೇನೋ ಎಡವಟ್ಟು ಮಾಡಿಕೊಂಡು, ಜೀವನದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 15 ವರ್ಷಗಳಿಂದ ಕೂಡ ನಟ ದರ್ಶನ್ ತೂಗುದೀಪ್ ಒಂದಲ್ಲ ಒಂದು ಸಮಸ್ಯೆ ಎದುರಿಸಿದ್ದು, ತನ್ನದೇ ಕೋಪಕ್ಕೆ ಹಿಂಗೆಲ್ಲಾ ನರಳಾಡುವ ಸ್ಥಿತಿ ಬಂದಿದೆ ಎಂಬುದು ಅವರ ವಿರೋಧಿಗಳ ಮಾತು.
ಹೀಗಿದ್ದಾಗ 2011 ರಲ್ಲಿ ತಮ್ಮ ಹೆಂಡತಿ ಮೇಲೆ ದರ್ಶನ್ ತೂಗುದೀಪ್ ಘೋರ ಹಲ್ಲೆ ನಡೆಸಿ, ಮಾರಣಾಂತಿಕ ದಾಳಿ ಮಾಡಿದ್ದರಂತೆ. ಆ ಸಮಯದಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ ಹೋಗುವುದನ್ನ ತಪ್ಪಿಸಲು ನಟ ದುನಿಯಾ ವಿಜಯ್ ಎಲ್ಲಾ ರೀತಿ ಪ್ರಯತ್ನ ಮಾಡಿದ್ದರಂತೆ! ಹಾಗಾದರೆ, ಇಂತಹ ಸ್ಫೋಟಕ ಆರೋಪ ಮಾಡಿದ್ದು ಯಾರು? 2011 ರಲ್ಲಿ ನಡೆದ ಘಟನೆ ಬಗ್ಗೆ ಈಗ ಮಾತನಾಡಿರುವುದು ಯಾರು? ದುನಿಯಾ ವಿಜಯ್ ಪೊಲೀಸರ ಎದುರು ದರ್ಶನ್ ತೂಗುದೀಪ್ ಬಗ್ಗೆ ಹೇಳಿದ್ದು ಏನು? ಮಾಹಿತಿಗಾಗಿ ಮುಂದೆ ಓದಿ.
ದರ್ಶನ್ ಪರವಾಗಿ ದುನಿಯಾ ವಿಜಯ್..
ದುನಿಯಾ ವಿಜಯ್ & ದರ್ಶನ್ ತೂಗುದೀಪ್ ಅತ್ಯುತ್ತಮ ಸ್ನೇಹಿತರು. ಇದೇ ಕಾರಣಕ್ಕಾಗಿ 2011 ರಲ್ಲಿ ದುನಿಯಾ ವಿಜಯ್ ಅವರು, ನಟ ದರ್ಶನ್ ತೂಗುದೀಪ್ ತಮ್ಮ ಹೆಂಡತಿಯ ಮೇಲೆ ಹಲ್ಲೆ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗುವುದನ್ನ ತಪ್ಪಿಸಲು ಯತ್ನಿಸಿದ್ದರು ಎಂಬ ಗಂಭೀರ ಆರೋಪ ನಿವೃತ್ತ ಎಸ್‌ಪಿ ಲೋಕೇಶ್ವರ್ ಮಾಡಿದ್ದಾರೆ. ಸಂದರ್ಶನ ಒಂದರಲ್ಲಿ, ಈ ರೀತಿ ನಿವೃತ್ತ ಎಸ್‌ಪಿ ಲೋಕೇಶ್ವರ್ ಸ್ಫೋಟಕ ಮಾಹಿತಿ ನೀಡಿದ್ದಾರೆ. ಈ ವಿಚಾರ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿದ್ದು ವೈರಲ್ ಆಗುತ್ತಿದೆ.
ದರ್ಶನ್ ಕೂಡ ಮದುವೆಗೆ ಬರ್ತಾರಾ?
ಸೋನಾಲ್ ಅವರಿಗೆ ದರ್ಶನ್ ತೂಗುದೀಪ್ ಅಣ್ಣನ ಸಮಾನ. ಅಲ್ಲದೆ ಖುದ್ದು ಸೋನಾಲ್ ಕೂಡ ದರ್ಶನ್ ಅವರನ್ನ ಅಣ್ಣಾ ಅಂತಾ ಕರೆಯುತ್ತಿದ್ದರು. ಹೀಗಾಗಿ ಇದೀಗ ಜೈಲಿನಲ್ಲಿ ಇರುವ ನಟಿ ಸೋನಾಲ್ ಅವರ ಅಣ್ಣ ದರ್ಶನ್ ತೂಗುದೀಪ್ ಮದುವೆಗೆ ಬರ್ತಾರಾ? ಎಂಬ ಪ್ರಶ್ನೆ ದರ್ಶನ್ ಅಭಿಮಾನಿಗಳನ್ನ ಕಾಡುತ್ತಿದೆ. ಈಗಾಗಲೇ ದರ್ಶನ್ ತೂಗುದೀಪ್ ಅವರಿಗೆ ಮದುವೆ ಆಮಂತ್ರಣ ಪತ್ರ ತಲುಪಿದೆ. ಖುದ್ದಾಗಿ ಜೈಲಿಗೆ ತೆರಳಿದ್ದ ನಿರ್ದೇಶಕ ತರುಣ್ ಸುಧೀರ್, ಈ ಮದುವೆ ಆಮಂತ್ರಣ ಪತ್ರ ತಲುಪಿಸಿದ್ದಾರೆ. ಹೀಗಾಗಿ ತೀವ್ರ ಕುತೂಹಲ ಕೆರಳಿದ್ದು, ಮುಂದೆ ಏನಾಗಲಿದೆ? ಅನ್ನೋದನ್ನ ಕಾದು ನೋಡಬೇಕಿದೆ. ಮುಂದಿನ ತಿಂಗಳು ಮದುವೆ ದಿನಾಂಕ ಫಿಕ್ಸ್ ಆಗಿದ್ದು, ಅಭಿಮಾನಿಗಳು ದರ್ಶನ್ ಬರ್ತಾರೆ ಅಂತಾ ಕಾಯುತ್ತಿದ್ದಾರೆ.
ದರ್ಶನ್ & ಜೊತೆಗಾರರಿಗೆ ಬಿರಿಯಾನಿ?
ಪರಪ್ಪನ ಅಗ್ರಹಾರ ಜೈಲಿನ ಅವ್ಯವಸ್ಥೆ ಬಗ್ಗೆ ಬಿಡಿಸಿ ಹೇಳಬೇಕಿಲ್ಲ, ಯಾಕಂದ್ರೆ ಈ ಹಿಂದೆ ಕೂಡ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆದಾಗ ಗಾಂಜಾ, ಸಿಗರೇಟ್, ಲಿಕ್ಕರ್ ಹೀಗೆ ಏನೇನು ವಸ್ತು ಸಿಗಬಾರದೋ ಅದೆಲ್ಲಾ ಸಿಕ್ಕಿತ್ತು. ಈಗಲೂ, ಪರಪ್ಪನ ಅಗ್ರಹಾರ ಜೈಲಲ್ಲಿ ಖೈದಿಗಳಿಗೆಲ್ಲಾ ಅಧಿಕಾರಿಗಳೇ ಸಹಾಯ ಮಾಡುತ್ತಾರೆ. ಅದರಲ್ಲೂ ಜೈಲಿನ ಒಳಗಡೆ ದುಡ್ಡು ಕೊಟ್ಟರೆ ಏನೇನು ವ್ಯವಸ್ಥೆ ಬೇಕೋ ಅದನ್ನೆಲ್ಲಾ ಜೈಲಿನ ಒಳಗೆ ಮಾಡ್ತಾರೆ ಎಂಬ ಆರೋಪದ ನಡುವೆ, ದರ್ಶನ್ & ಗ್ಯಾಂಗ್‌ಗೆ ಬಿರಿಯಾನಿ ಸಪ್ಲೈ ಮಾಡುತ್ತಿರುವ ಆರೋಪ ಕೂಡ ಕೇಳಿಬಂದಿತ್ತು. ಆದರೆ ಇದಕ್ಕೆಲ್ಲ ಸೂಕ್ತ ಸಾಕ್ಷ್ಯಗಳು ಲಭ್ಯವಾಗಿಲ್ಲ, ಹೀಗಾಗಿ ಇದು ಗಾಳಿ ಸುದ್ದಿ ಎನ್ನಲಾಗುತ್ತಿದೆ.











Click it and Unblock the Notifications