Drishyam 3: ದೃಶ್ಯಂ 3 ಚಿತ್ರದ ವಿಮರ್ಶೆ ಮತ್ತು ಬಿಡುಗಡೆ ಅಪ್ಡೇಟ್ಸ್: ದೃಶ್ಯಂ 3 ಸಿನಿಮಾದ ಕಥೆಯ ಬಗ್ಗೆ ಹೊಸ ವಿಷಯ ರಿವೀಲ್
Drishyam 3: ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ದೃಶ್ಯಂ ಸಿನಿಮಾವು ಹೊಸ ದಾಖಲೆಗಳನ್ನು ಬರೆದಿತ್ತು. ರೋಚಕ, ಕ್ರೈಂ ಆಧಾರಿತ ಈ ಸಿನಿಮಾದ ಮೂಲ ನಿರ್ಮಾಣವು ಮಲಯಾಳಂ ಭಾಷೆಯಲ್ಲಿ ಆಗಿತ್ತು. ಮಲಯಾಳಂ ಭಾಷೆಯಲ್ಲಿ ಸೂಪರ್ ಹಿಟ್ ಆದ ನಂತರ ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ ಈ ಸಿನಿಮಾ ಬಿಡುಗಡೆಯಾಗಿತ್ತು. ದೃಶ್ಯಂ, ದೃಶ್ಯಂ - 2 ರೋಚಕ ತಿರುವುಗಳಿಂದ ಕೂಡಿತ್ತು. ಇದೀಗ ದೃಶ್ಯಂ 3 ಬಿಡುಗಡೆಗೆ ಆಗಿದೆ. ದೃಶ್ಯಂ 3 ಸಿನಿಮಾ ವಿಮರ್ಶೆ, ರೇಟಿಂಗ್ ಮತ್ತು ಬಿಡುಗಡೆ, ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಮೊದಲದಿನದ ಕಲೆಕ್ಷನ್ ಸಂಪೂರ್ಣ ವಿವರ ಈ ಲೇಖನದಲ್ಲಿದೆ. ಮೋಹನ್ ಲಾಲ್ ಅವರ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ದೃಶ್ಯಂ 3 ಸಿನಿಮಾ ಗಿಫ್ಟ್ ಆಗಿ ಸಿಗುತ್ತಿದೆ. ಬಹುನಿರೀಕ್ಷಿತ ಮಲಯಾಳಂ ಚಿತ್ರವು ಮೇ 21 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸೂಪರ್ ಸ್ಟಾರ್ ಅಭಿನಯಿಸಿರುವ ಭಾರತದ ಅತಿದೊಡ್ಡ ಥ್ರಿಲ್ಲರ್ ಸಿನಿಮಾ ದೃಶ್ಯಂ 3 ಜಾರ್ಜ್ ಕುಟ್ಟಿ ಮತ್ತು ಅವರ ಕುಟುಂಬದ ಕಥೆಯ ಅಂತಿಮ ಅಧ್ಯಾಯವಾಗಿದೆ. ಮೊದಲ ಎರಡು ಚಿತ್ರಗಳ ಭಾರಿ ಯಶಸ್ಸಿನ ನಂತರ, ಮುಂಬರುವ ಸಿನಿಮಾ ಬಿಡುಗಡೆಗೂ ಮೊದಲೇ ಭಾರತ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಭಾರೀ ದೊಡ್ಡ ಮಟ್ಟದ ಆದಾಯವನ್ನು ಗಳಿಸಿದೆ.
ದೃಶ್ಯಂ ಸಿನಿಮಾದ ಮೊದಲ ಭಾಗವು 2013ರಲ್ಲಿ ಬಿಡುಗಡೆಯಾಗಿತ್ತು. ಎರಡನೇ ಭಾಗ 2021 ರಲ್ಲಿ ಬಿಡುಗಡೆಯಾಯಿತು. ದೃಶ್ಯಂ ಸಿನಿಮಾದ ರೀಮೇಕ್ ಅನ್ನು ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ರೀಮೇಕ್ ಮಾಡಲಾಗಿದೆ. ವರದಿಗಳ ಪ್ರಕಾರ, ದೃಶ್ಯಂ 3 ಸಿನಿಮಾವನ್ನು 100 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ನಟಿ ಮೀನಾ, ಎಸ್ತರ್ ಅನಿಲ್ ಮತ್ತು ಅನ್ಸಿಬಾ ಹಾಸನ್ ಅವರು ಸಹ ನಟಿಸಿದ್ದಾರೆ. ಈ ಸಿನಿಮಾವನ್ನು ಆಶೀರ್ವಾದ್ ಸಿನಿಮಾಸ್ ಮತ್ತು ಪನೋರಮಾ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿದೆ.

ದೃಶ್ಯಂ 3 ರ ಕಥಾವಸ್ತುವಿನ ವಿವರ
ಮಲಯಾಳಂ ಆವೃತ್ತಿಯ ದೃಶಂ 3 ಸಿನಿಮಾವನ್ನು ನಿರ್ದೇಶಕ ಜೀತು ಜೋಸೆಫ್ ನಿರ್ದೇಶಿಸಿದ್ದು, ನಟ ಮೋಹನ್ ಲಾಲ್ ಅವರು ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಮತ್ತೊಮ್ಮೆ ಮೋಹನ್ ಲಾಲ್ ಅವರು ಐಕಾನಿಕ್ ಜಾರ್ಜ್ ಕುಟ್ಟಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಸಿನಿಮಾದಲ್ಲಿ ಮಾಧ್ಯಮ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ದೃಶ್ಯಂ ಸಿನಿಮಾದ ಮೂರನೇ ಭಾಗವು ದೃಶ್ಯಂ 2 ರ ಘಟನೆಗಳ ನಂತರ ಕಥೆಯ ಮುಂದುವರಿದ ಭಾಗವಾಗಿದೆ. ಮೂಲ ಅಪರಾಧ ಮತ್ತು ಮುಚ್ಚಿಡುವಿಕೆಯ ದೀರ್ಘಕಾಲೀನ ಪರಿಣಾಮಗಳನ್ನು ಎದುರಿಸುವ ಸಂದರ್ಭದಲ್ಲಿ ಜಾರ್ಜ್ ಕುಟ್ಟಿ ತನ್ನ ಕುಟುಂಬದವರನ್ನು ರಕ್ಷಿಸಲು ಪ್ರಯತ್ನಿಸುತ್ತಿವ ಕಥೆಯೇ ದೃಶ್ಯಂ. ಚಿತ್ರವು ಸತ್ಯವನ್ನು ಬಹಿರಂಗಪಡಿಸಲು ಮತ್ತು ನ್ಯಾಯಕ್ಕಾಗಿ ಪೊಲೀಸರ ಅಂತಿಮ ಪ್ರಯತ್ನದ ಸುತ್ತ ಸುತ್ತುತ್ತದೆ. ಈ ಅಧ್ಯಾಯವು ಫ್ರಾಂಚೈಸಿಯ ನಿಗೂಢತೆಗೆ ನಿರ್ಣಾಯಕ ಅಂತ್ಯವನ್ನು ತರುತ್ತದೆ ಎಂದು ಹೇಳಲಾಗಿದೆ.
ದೃಶ್ಯಂ 3ಗಾಗಿ ಮೋಹನ್ ಲಾಲ್ ಪಡೆದ ಸಂಭಾವನೆ ಎಷ್ಟು
ಮಾಧ್ಯಮ ವರದಿಗಳ ಪ್ರಕಾರ, ದೃಶ್ಯಂ 3 ಸಿನಿಮಾಗಾಗಿ ಮೋಹನ್ ಲಾಲ್ ಅವರು 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದು ಹಿಂದಿನ ದೃಶ್ಯಂ ಸಿನಿಮಾದ ಭಾಗಗಳಿಗಿಂತಲೂ ಹೆಚ್ಚಾಗಿದೆ. ಮೋಹನ್ ಲಾನ್ ಅವರು ಮೊದಲ ಚಿತ್ರಕ್ಕೆ ಸುಮಾರು 5-6 ಕೋಟಿ ರೂಪಾಯಿಗಳನ್ನು ಮತ್ತು ದೃಶ್ಯಂ 2 ಚಿತ್ರಕ್ಕೆ ಸುಮಾರು 10-12 ಕೋಟಿ ರೂಪಾಯಿಗಳನ್ನು ಪಡೆದಿದ್ದರು.
'ಹೆಚ್ಚು ನಿರೀಕ್ಷಿಸಬೇಡಿ' ಎಂದ ನಿರ್ದೇಶಕರು
ಮೋಹನ್ ಲಾಲ್ ಅವರ ದೃಶ್ಯಂ ಸಿನಿಮಾ ಹಲವು ರೋಚಕ ತಿರುವುಗಳನ್ನು ಪಡೆದುಕೊಂಡಿದೆ. ದೃಶ್ಯಂ ಸಿನಿಮಾ 3ರಲ್ಲೂ ಹಲವು ರೋಚಕ ದೃಶ್ಯಗಳಿವೆ ಎಂದು ಸಿನಿಮಾದ ನಿರ್ದೇಶಕ ಜೀತು ಜೋಸೆಫ್ ಹೇಳಿದ್ದಾರೆ. ಈ ಹಿಂದಿನ ಭಾಗಗಳ ಮುಂದುವರಿದ ಭಾಗವಾಗಿ ಸಾಮಾನ್ಯ ತಿರುವುಗಳನ್ನು ಪ್ರೇಕ್ಷಕರು ನಿರೀಕ್ಷಿಸಬಾರದು ಎಂದು ಅವರು ಎಚ್ಚರಿಸಿದರು. ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದು ನಿರಾಶೆಗೆ ಕಾರಣವಾಗಬಹುದು ಎಂದೂ ಅವರು ಹೇಳಿದ್ದಾರೆ.
ಥ್ರಿಲ್ಲರ್ ಕಥಾಹಂದರದ ದೃಶ್ಯಂ 3 ಸಿನಿಮಾದ ಪ್ರದರ್ಶನ ಸಮಯ ಮತ್ತು ಬಿಡುಗಡೆ ವಿವರ
ದೃಶ್ಯಂ 3 ರ ಚಿತ್ರದ ಮೊದಲ ಪ್ರದರ್ಶನವು ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತದೆ. ವಿಶೇಷವೆಂದರೆ ಈ ಸಿನಿಮಾದ ಬಿಡುಗಡೆಯು ಮೋಹನ್ ಲಾಲ್ ಅವರ 66 ನೇ ಹುಟ್ಟುಹಬ್ಬದಂದೇ ಆಗುತ್ತಿದೆ. ಈ ಮೂಲಕ ಮಲಯಾಳಂ ಸೂಪರ್‌ಸ್ಟಾರ್ ಅವರ ಹುಟ್ಟು ಹಬ್ಬದಂದೇ ಅವರ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ಸಿಕ್ಕಂತಾಗಿದೆ.
ಥಿಯೇಟ್ರಿಕಲ್ ರನ್ ನಂತರ ದೃಶ್ಯಂ 3 ಚಿತ್ರ ಎಲ್ಲಿ ಸ್ಟ್ರೀಮ್ ಆಗುತ್ತದೆ?
ವರದಿಗಳ ಪ್ರಕಾರ, ಚಿತ್ರವು ಅದರ ಥಿಯೇಟ್ರಿಕಲ್ ರನ್ ನಂತರ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಆಗುವ ಸಾಧ್ಯತೆಯಿದೆ. ಅಧಿಕೃತ OTT ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ತಯಾರಕರು 30 ರಿಂದ 35 ದಿನಗಳ ಥಿಯೇಟ್ರಿಕಲ್ ವಿಂಡೋವನ್ನು ಆಯ್ಕೆ ಮಾಡಬಹುದು ಎಂದು ವರದಿಗಳು ಸೂಚಿಸುತ್ತವೆ. ಅದು ಸಂಭವಿಸಿದಲ್ಲಿ, ಚಿತ್ರವು ಜೂನ್ ಅಂತ್ಯ ಅಥವಾ ಜುಲೈ 2026 ರ ಆರಂಭದಲ್ಲಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಥಮ ಪ್ರದರ್ಶನಗೊಳ್ಳಬಹುದು.
ದೃಶ್ಯಂ 3 ಚಿತ್ರ ಭರ್ಜರಿ ಗಳಿಕೆ
ದೃಶ್ಯಂ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮುಂಚೆಯೇ ಕೋಟ್ಯಾಂತರ ರೂಪಾಯಿ ಗಳಿಸುತ್ತಿದೆ. ದೃಶ್ಯಂ 3 ಚಿತ್ರಕ್ಕಾಗಿ ವಿಶ್ವಾದ್ಯಂತ ಆರಂಭಿಕ ದಿನದ ಮುಂಗಡ ಬುಕಿಂಗ್‌ಗಳು 21 ಕೋಟಿ ರೂ.ಗಳನ್ನು ದಾಟಿದೆ. ಟಿಕೆಟ್ ಮಾರಾಟವು ಇನ್ನಷ್ಟು ವೇಗವಾಗಿ ನಡೆಯುತ್ತಿದೆ. ಚಲನಚಿತ್ರ ವಿಶ್ಲೇಷಕರು ಚಿತ್ರದ ಮೊದಲ ದಿನದ ಪೂರ್ವ ಮಾರಾಟವು ಈಗಾಗಲೇ 17 ಕೋಟಿ ರೂ.ಗಳನ್ನು ಮೀರಿದೆ ಮತ್ತು ಶೀಘ್ರದಲ್ಲೇ 20 ಕೋಟಿ ರೂ.ಗಳನ್ನು ದಾಟುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.














Click it and Unblock the Notifications