ಶುಕ್ರ ಸಂಕ್ರಮಣದಿಂದ ಇಂದಿನಿಂದ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ: ಹೆಜ್ಜೆ ಹೆಜ್ಜೆಗೂ ಸಿಗುವುದು ಗೆಲುವು
ಪುರುಷೋತ್ತಮ ಮಾಸ ಅಥವಾ ವಿಷ್ಣುವಿಗೆ ಪ್ರಿಯವಾದ ಅಧಿಕ ಮಾಸದ ಪ್ರತಿ ದಿನವೂ ಬಹಳ ವಿಶೇಷವಾಗಿರುತ್ತದೆ. ಅದರಲ್ಲಿಯೂ ಈ ಮಾಸದ ಕೆಲವು ದಿನಾಂಕಗಳು ವಿಶೇಷ ಮಹತ್ವ ಪಡೆದಿರುತ್ತವೆ. ಅಧಿಕ ಮಾಸದ ಮೊದಲ ಚತುರ್ಥಿಯನ್ನು ವರದ ಚತುರ್ಥಿ ಎಂದು ಕರೆಯಲಾಗುತ್ತದೆ. ಇಂದು ಅಂದರೆ ಮೇ 20 ರಂದು ವರದ ಚತುರ್ಥಿ ಬರುತ್ತದೆ. ಇಂದಿನಿಂದಲೇ ಶುಕ್ರನು ತನ್ನ ಪಥವನ್ನು ಬದಲಾಯಿಸುತ್ತಿದ್ದಾನೆ.
ರಾಹು ನಕ್ಷತ್ರದಲ್ಲಿ ಶುಕ್ರನ ಸಂಕ್ರಮಣ:
ಇಂದಿನ ದಿನ ಆರಂಭವಾಗುತ್ತಿದ್ದ ಹಾಗೆ ಅಂದರೆ ಮಧ್ಯ ರಾತ್ರಿ 12:37 ಕ್ಕೆ ಶುಕ್ರನು ಆರ್ದ್ರ ನಕ್ಷತ್ರಕ್ಕೆ ಸಂಕ್ರಮಿಸಿದ್ದಾನೆ. ಮೇ 31, ರವರೆಗೆ ಇದೇ ನಕ್ಷತ್ರದಲ್ಲಿ ಇರುತ್ತಾನೆ. ಪ್ರೀತಿ, ಸೌಂದರ್ಯ, ಸಂಪತ್ತು ಮತ್ತು ಸಮೃದ್ಧಿಯ ಗ್ರಹವಾದ ಶುಕ್ರನು ಈ ಸಮಯದಲ್ಲಿ, ಐದು ರಾಶಿಯವರಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತಾನೆ. ಇವರು ತಮ್ಮ ವೈಯಕ್ತಿಕ ಮತ್ತು ವೃತ್ತಿಜೀವನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯಶಸ್ಸು ಪಡೆಯಲಿದ್ದಾರೆ.

ಹೊಳೆಯುವುದು 5 ರಾಶಿಯವರ ಅದೃಷ್ಟ:
1. ವೃಷಭ ರಾಶಿ: ರಹಸ್ಯ ಮೂಲಗಳಿಂದ ಹಣ ಬರುತ್ತದೆ. ವೃಷಭ ರಾಶಿಯವರಿಗೆ ಈ ಸಮಯ ಹಲವು ವಿಧಗಳಲ್ಲಿ ಸಕಾರಾತ್ಮಕವಾಗಿರುತ್ತದೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಸಂಭವಿಸುತ್ತವೆ. ನಿಮಗೆ ಸೇರಬೇಕಾಗಿದ್ದ ದೊಡ್ಡ ಮೊತ್ತ ಈ ಸಮಯದಲ್ಲಿ ಸಿಗುವುದು. ಒತ್ತಡ ಮತ್ತು ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೀವನದಲ್ಲಿ ಸೌಕರ್ಯಗಳು ಮತ್ತು ಐಷಾರಾಮ ಹೆಚ್ಚಾಗುತ್ತವೆ.
2. ಮಿಥುನ ರಾಶಿ: ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಮಿಥುನ ರಾಶಿಯವರ ಜೀವನದಲ್ಲಿ ಪ್ರೀತಿ ಅರಳುತ್ತದೆ. ವೈವಾಹಿಕ ಜೀವನವು ಸುಖಕರವಾಗಿರುವುದು.ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವುದು. ವ್ಯಾಪಾರ ವ್ಯವಹಾರಗಳಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಯಾಗುವುದು. ಲಾಭ ಹೆಚ್ಚಾಗುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧ ಕೂಡಿ ಬರುವುದು.
3. ಸಿಂಹ ರಾಶಿ: ಈ ಶುಕ್ರ ಸಂಚಾರವು ಸಿಂಹ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ತರುತ್ತದೆ. ಆದಾಯ ಹೆಚ್ಚಾಗುತ್ತದೆ ಮತ್ತು ನಿಮ್ಮ ಸಾಮಾಜಿಕ ಗೌರವವು ಬೆಳೆಯುತ್ತದೆ. ಈ ಸಮಸಯದಲ್ಲಿ ವೃತ್ತಿಜೀವನದಲ್ಲಿ ಅಭಿವೃದ್ಧಿಯಾಗುವುದು. ವಿಶೇಷವಾಗಿ ರಾಜಕೀಯದಲ್ಲಿ ತೊಡಗಿರುವವರಿಗೆ ಇದು ಒಳ್ಳೆಯ ಸಮಯ. ಪ್ರೇಮ ಜೀವನ ಸುಧಾರಿಸುತ್ತದೆ. ಸಂಬಂಧವು ಮುಂದುವರಿಯುತ್ತದೆ.
4. ತುಲಾ ರಾಶಿ: ಸೌಂದರ್ಯ ಮತ್ತು ವ್ಯಕ್ತಿತ್ವವು ಹೊಳೆಯುತ್ತದೆ. ವರದ ಚತುರ್ಥಿಯಂದು ಶುಕ್ರನು ಆರ್ದ್ರ ನಕ್ಷತ್ರಕ್ಕೆ ಪ್ರವೇಶಿಸುವುದರಿಂದ ತುಲಾ ರಾಶಿಯವರ ಎಲ್ಲಾ ತೊಂದರೆಗಳು ನಿವಾರಣೆಯಾಗುವುದು. ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ. ವಿವಾಹಿತರ ಜೀವನದಲ್ಲಿಯೂ ಪ್ರೀತಿ ಹೆಚ್ಚಾಗುತ್ತದೆ.
5. ಮೀನ ರಾಶಿ: ಸಂಗಾತಿಯಿಂದ ನಿಮ್ಮ ಸಂತೋಷ ಹೆಚ್ಚುವುದು. ಈ ಸಮಯವು ಮೀನ ರಾಶಿಯವರಿಗೆ ಲಾಭವನ್ನು ತರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ನಿಮ್ಮ ಪ್ರೇಮ ಸಂಬಂಧವು ಆಳವಾಗಿರುವುದು. ಪತಿ ಮತ್ತು ಪತ್ನಿಯ ನಡುವಿನ ಭಿನ್ನಾಭಿಪ್ರಾಯಗಳು ಬಗೆಹರಿಯುವುದು.ನಿಮ್ಮ ಖರ್ಚುಗಳು ಕಡಿಮೆಯಾಗುತ್ತವೆ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications