Petrol-Diesel: ಇಂಧನ ದಾಸ್ತಾನಿಗೆ ಬ್ರೇಕ್, ಕರ್ನಾಟಕದ ಬಂಕ್‌ಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ
ಬೆಂಗಳೂರು: ಉತ್ತರ ಕರ್ನಾಟಕದ ಕೆಲವು ಭಾಗಗಳ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ವಿತರಣೆಯಲ್ಲಿ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳ ಇಂಧನ ವಿತರಣಾ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಈ ಹೊಸ ಕ್ರಮಗಳು ಮೇ 8 ರಿಂದ ಜಾರಿಗೆ ಬಂದಿದ್ದು, ಇಂಧನ ವಿತರಣೆಯಲ್ಲಿ ಸ್ಪಷ್ಟತೆ ಮತ್ತು ಕಟ್ಟುನಿಟ್ಟನ್ನು ತರುವ ಗುರಿ ಹೊಂದಿವೆ. ಇದು ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲಿ ಒಂದಷ್ಟು ಎಚ್ಚರಿಕೆ ವಹಿಸಲಾಗಿದೆ.
ಪೆಟ್ರೋಲ್ ಬಂಕ್ ಮಾಲೀಕರು ಇಂಧನ ಅಥವಾ ಸಾಮಾನ್ಯ ವಾಹನಗಳಿಗೆ ಇಂಧನ ತುಂಬುವುದರ ಮೇಲೆ ಯಾವುದೇ ಅಧಿಕೃತ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಂದೇ ಬಾರಿಗೆ ದೊಡ್ಡ ಪ್ರಮಾಣದ ಇಂಧನ ಖರೀದಿ ಮತ್ತು ಇಂಧನ ಸಂಗ್ರಹಣೆಗೆ ಸರ್ಕಾರದ ಮಾರಾಟ ನಿಯಮ ಬ್ರೇಕ್ ಹಾಕಲಿದೆ. ಹೀಗಗಿ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಎಲ್ಲಾ ಪೆಟ್ರೋಲ್ ಬಂಕ್‌ಗಳಿಗೆ ನಿರ್ದೇಶಿಸಿದೆ ಎಂದು ಹೇಳಿದ್ದಾರೆ.

ಸರ್ಕಾರ ಈ ಬಗ್ಗೆ ಮೇ 8 ರಂದು ಪರಿಷ್ಕೃತ ಸೂಚನೆಗಳನ್ನು ಹೊರಡಿಸಿದೆ. ಬಾಟಲಿಗಳು ಅಥವಾ ಅನಧಿಕೃತ ಪಾತ್ರೆಗಳಲ್ಲಿ ಇಂಧನ ದಾಸ್ತಾನು ಮಾಡಿಕೊಳ್ಳುವುದು, ಬೃಹತ್ ಪ್ರಮಾಣದ ಮಾರಾಟದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಈ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳು ಪೆಟ್ರೋಲ್ ಬಂಕ್‌ಗಳ ಪರವಾನಗಿ ರದ್ದುಗೊಳಿಸುವುದಾಗಿ ಸಹ ಎಚ್ಚರಿಕೆ ನೀಡಲಾಗಿದೆ.
ಸರ್ಕಾರದ ನಿಯಮಗಳು ಹೇಳುವುದೇನು?
ಇಲಾಖೆಯ ನಿರ್ದೇಶನಗಳು ಮತ್ತು 2002ರ ಇಂಧನ ವಿತರಣಾ ಮಾರ್ಗಸೂಚಿಗಳ ಪ್ರಕಾರ, ಪೆಟ್ರೋಲ್ ಬಂಕ್‌ಗಳು ನೇರವಾಗಿ ವಾಹನಗಳ ಇಂಧನ ಟ್ಯಾಂಕ್‌ಗಳಿಗೆ ಇಂಧನ ತುಂಬಲು ಅನುಮತಿ ಇದೆ. ಅಧಿಕೃತ ಚಿಲ್ಲರೆ ಕಾರ್ಯಾಚರಣೆಗಳ ಮೂಲಕ ಅನುಮೋದಿತ ಪ್ರಮಾಣದಲ್ಲಿ ಇಂಧನ ಪೂರೈಕೆ ಮಾಡಬಹುದು. ಬೆಂಗಳೂರು ಮತ್ತು ಮೈಸೂರಿನಂತಹ ನಗರಗಳಲ್ಲಿ ವಾಹನ ಚಾಲಕರಿಗೆ ನಿತ್ಯ ನಿಯಮಿತ ಇಂಧನ ಮಾರಾಟವನ್ನು ಮುಂದುವರಿಸಲು ಅವಕಾಶವಿದೆ.
ದೊಡ್ಡ ಪ್ರಮಾಣದ ವಾಣಿಜ್ಯ ಅಗತ್ಯಗಳಿಗಾಗಿ, ಪೆಟ್ರೋಲ್ ಬಂಕ್‌ಗಳು ಅಧಿಕೃತ ನೇರ ಮಾರಾಟ ಅಥವಾ ಡಿಪೋ ವ್ಯವಸ್ಥೆಗಳ ಮೂಲಕ ಇಂಧನ ವಿತರಿಸಬಹುದು. ಬೆಂಗಳೂರು ಮತ್ತು ಮೈಸೂರಿನ ಅಧಿಕಾರಿಗಳು ಹಾಗೂ ಇಂಧನ ವಿತರಕರು, ವೈಯಕ್ತಿಕ ಉಪಯೋಗಕ್ಕೆ ಇಂಧನ ಖರೀದಿಗೆ ಯಾವುದೇ ಅಧಿಕೃತ ನಿರ್ಬಂಧ ಇಲ್ಲದ್ದರಿಂದ, ಗ್ರಾಹಕರು ಎಂದಿನಂತೆ ಇಂಧನ ತುಂಬಿಸಬಹುದು ಎಂದು ತಿಳಿಸಿದ್ದಾರೆ.
ಒಂದೇ ಬಾರಿಗೆ 200 ಲೀಟರ್ ಮಾರಾಟಕ್ಕೆ ಬ್ರೇಕ್
ಬಾಟಲಿಗಳು, ಪ್ಲಾಸ್ಟಿಕ್ ಕ್ಯಾನ್‌ಗಳು, ಅನಧಿಕೃತ ಪಾತ್ರೆಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ತುಂಬುವುದನ್ನು ನಿಷೇಧಿಸಿದೆ. ಅನುಮೋದಿತ ವ್ಯವಸ್ಥೆಗಳ ಹೊರಗೆ ಅನೌಪಚಾರಿಕವಾಗಿ ಇಂಧನ ಪೂರೈಕೆ ಮಾಡುವುದನ್ನು, ಮತ್ತು ನಿಯಮಿತ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಒಂದೇ ಬಾರಿ 200 ಲೀಟರ್‌ಗಿಂತ ಹೆಚ್ಚು ಇಂಧನ ಮಾರಾಟ ಮಾಡುವಂತಿಲ್ಲ ಎಂದು ಇಲಾಖೆ ತಿಳಿಸಿದೆ.
ದೊಡ್ಡ ಪ್ರಮಾಣದ ಇಂಧನ ವಹಿವಾಟುಗಳು ಕೇವಲ ಅಧಿಕೃತ ಡಿಪೋಗಳು ಅಥವಾ ಅನುಮೋದಿತ ನೇರ ಮಾರಾಟ ಮಾರ್ಗಗಳ ಮೂಲಕವೇ ನಡೆಯಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಉತ್ತರ ಕರ್ನಾಟಕದ, ಅದರಲ್ಲೂ ವಿಶೇಷವಾಗಿ ಹುಬ್ಬಳ್ಳಿಯ ಕೆಲವು ಕಡೆಗಳಿಂದ ಬಂದ ವರದಿಗಳು, ಇಂಧನ ಪಡಿತರ ಕುರಿತು ವಾಹನ ಚಾಲಕರಲ್ಲಿ ಗೊಂದಲ ಮೂಡಿಸಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.
ವಾಣಿಜ್ಯ ಮಳಿಗೆಗಳಿಗೆ ಇಂಧನ ಮಾರಾಟ ಹೇಗೆ?
ಪೆಟ್ರೋಲ್ ಬಂಕ್ ನಿರ್ವಾಹಕರು, ಕಾರುಗಳಿಗೆ ಸುಮಾರು 25 ಲೀಟರ್ ಮತ್ತು ಟ್ರಕ್‌ಗಳು ಅಥವಾ ವಾಣಿಜ್ಯ ವಾಹನಗಳಿಗೆ 150 ಲೀಟರ್‌ಗೆ ಇಂಧನ ಮಾರಾಟ ಮಿತಿಗೊಳಿಸುವಂತೆ ಮೌಖಿಕವಾಗಿ ಸಲಹೆ ನೀಡಲಾಗಿದೆ. ಆದರೆ, ಅನೇಕ ಇತರ ಬಂಕ್ ಮಾಲೀಕರು, ಇಂಧನ ಪಡಿತರಕ್ಕೆ ಸಂಬಂಧಿಸಿದಂತೆ ಯಾವುದೇ ಲಿಖಿತ ಸೂಚನೆಗಳು ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಷ್ಟೆಲ್ಲ ಆದರೂ ಸಹಿತ ವಾಹನ ಬಳಕೆಗೆ ಗ್ರಾಹಕರು ಯಾವುದೇ ಪ್ರಮಾಣದ ಪರಿಶೀಲನೆ ಇಲ್ಲದೆ ಇಂಧನ ಪಡೆಯುತ್ತಿದ್ದಾರೆ. ಇತ್ತೀಚಿನ ಸುರಕ್ಷತಾ-ಕೇಂದ್ರಿತ ನಿರ್ಬಂಧಗಳ ಕಾರಣದಿಂದ ಬಾಟಲಿಗಳು, ಕ್ಯಾನ್‌ಗಳು ಮತ್ತು ಸಡಿಲ ಪಾತ್ರೆಗಳನ್ನು ಹೊತ್ತು ತಂದವರಿಗೆ ಇಂಧನ ಹಾಕದೇ ಮರಳಿ ಕಳುಹಿಸಲಾಗುತ್ತಿದೆ. ಈ ಮೂಲಕ ಅನೇಕ ಕಡೆಗಳಲ್ಲಿ ಸರ್ಕಾರದ ನಿಯಮ ಪಾಲಿಸಲಾಗುತ್ತಿದ್ದು, ಜನರು ಇದಕ್ಕೆ ಸಹಕರಿಸಬೇಕಿದೆ.














Click it and Unblock the Notifications