ರಚಿತಾ ರಾಮ್ ಈ ಹುಡುಗನ ಕೆನ್ನೆ ಕಚ್ಚಿದ್ದಾರಂತೆ!
ರಚಿತಾ ರಾಮ್ ಅಂದ್ರೆ ಕನ್ನಡ ಸಿನಿ ಅಭಿಮಾನಿಗಳ ಪಾಲಿನ ಡಿಂಪಲ್ ಕ್ವೀನ್. ಈ ನಟಿಗೆ ಈ ನಟಿಯೇ ಸಾಟಿ ಎನ್ನುವಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟನೆ ಮಾಡುತ್ತಾರೆ. ಹೀಗೆ ರಚಿತಾ ರಾಮ್ ಕೋಟ್ಯಂತರ ಅಭಿಮಾನಿಗಳನ್ನ ಕೂಡ ಸಂಪಾದನೆ ಮಾಡಿದ್ದಾರೆ. ಹೀಗಿದ್ದಾಗ ಇಲ್ಲೊಬ್ಬ ಹುಡುಗನ ಕೆನ್ನೆ ಕಚ್ಚಿದ್ದಾರಂತೆ ರಚಿತಾ ರಾಮ್! ಇಂತಹ ಮುದ್ದು, ಮುದ್ದಾದ ಆರೋಪ ಕೇಳಿಬಂದಿದ್ದು ಹೇಗೆ ಗೊತ್ತೆ?
ರಚಿತಾ ರಾಮ್ ಕಳೆದ 10 ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದಾರೆ. ಈ ನಟಿಯ ಸಾಲು ಸಾಲು ಸಿನಿಮಾಗಳು ಸಿಲ್ವರ್ ಸ್ಕ್ರೀನ್ ಮೇಲೆ ಭರ್ಜರಿ ಸದ್ದು ಮಾಡುತ್ತಿವೆ. ರಚಿತಾ ರಾಮ್ ಅವರ ಸಿನಿಮಾ ನೋಡಲು ಅಭಿಮಾನಿಗಳು ಕೂಡ, ಉಸಿರು ಬಿಗಿಹಿಡಿದು ಕಾಯುತ್ತಾರೆ. ಹಾಗೇ ನಟಿ ರಚಿತಾ ರಾಮ್ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಕೂಡ ಸಖತ್ ಸೌಂಡ್ ಮಾಡುತ್ತಾರೆ. ಇದೇ ಕಾರ್ಯಕ್ರಮದಲ್ಲಿ ರಚಿತಾ ಅವರು ನನ್ನ ಕೆನ್ನೆ ಕಚ್ಚಿದ್ದಾರೆ ಅಂತಾ ಹುಡುಗನೊಬ್ಬ ಆರೋಪ ಮಾಡಿದ್ದಾನೆ!

ಕೆನ್ನೆ ಕಚ್ಚಿದ್ದಾರಾ ರಚಿತಾ ರಾಮ್?
ರಚಿತಾ ರಾಮ್ ಮದುವೆ ಬಗ್ಗೆ ಚರ್ಚೆಗಳು ಜೋರಾಗಿವೆ. ಅದ್ರಲ್ಲೂ ಇನ್ನೇನು 32ನೇ ವಯಸ್ಸಿಗೆ ಕಾಲಿಡುತ್ತಿರುವ ರಚಿತಾ ರಾಮ್‌ಗೆ ಮದುವೆ ಯಾವಾಗ? ಅಂತಾ ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ. ಹೀಗಿದ್ದಾಗ ಇದ್ಯಾರಪ್ಪಾ ಆ ಹುಡುಗ? ನಟಿ ರಚಿತಾ ರಾಮ್ ಕೆನ್ನೆ ಕಚ್ಚಿರುವ ಹುಡುಗ ಯಾರು? ಅಂತಾ ಚರ್ಚೆ ಜೋರಾಗಿದೆ. ಆ ಹುಡುಗ ಬೇರೆ ಯಾರೂ ಅಲ್ಲ, ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಮಿಂಚು ಹರಿಸುತ್ತಿರುವ ಪುಟಾಣಿ! ಖುದ್ದಾಗಿ ಅದೇ ಹುಡುಗ ಮಾಡಿರುವ ಆರೋಪ ಏನೆಂದರೆ, ತನ್ನ ಕೆನ್ನೆಯನ್ನು ರಚಿತಾ ರಾಮ್ ಕಚ್ಚಿದ್ದಾರೆ ಅಂತಾ. ಹೀಗೆ ನಟಿ ರಚಿತಾ ರಾಮ್ ಕೆನ್ನೆ ಕಚ್ಚಿರುವ ಬಗ್ಗೆ ಹೇಳಿರುವ ವಿಡಿಯೋ ನೋಡಲು ಮುಂದೆ ಓದಿ.
'ಡ್ರಾಮಾ ಜೂನಿಯರ್ಸ್' ಶನಿವಾರ & ಭಾನುವಾರ ಕನ್ನಡಿಗರನ್ನು ಸೆಳೆಯುತ್ತದೆ. ಕುಟುಂಬ ಸಮೇತ ನೋಡಬಹುದು & ಡಬಲ್ ಮೀನಿಂಗ್ ಮುಜುಗರ ಇರಲ್ಲ ಅನ್ನೋ ಶೋ ಅಂದರೆ, ಈ ಶೋ. ಹೀಗಾಗಿ 'ಡ್ರಾಮಾ ಜೂನಿಯರ್ಸ್' ಕೋಟ್ಯಂತರ ವೀಕ್ಷಕರನ್ನೂ ಹೊಂದಿದೆ. ಹೀಗೆಯೆ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ವೇಳೆ ರಚಿತಾ ರಾಮ್ ಅವರ ವಿರುದ್ಧ, ಪುಟಾಣಿ ಆರ್ಯ ಗಂಭೀರ ಆರೋಪ ಮಾಡಿದ್ದಾನೆ. ಅದು ಏನೆಂದರೆ ರಚಿತಾ ರಾಮ್ ಅವರು ತನ್ನ ಕೆನ್ನೆ ಕಚ್ಚಿದ್ದಾರೆ ಎಂದಿದ್ದಾನೆ.

ಕೆನ್ನೆ ಕಚ್ಚಿ ಗಾಯ ಮಾಡಿದ್ರಾ?
'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಬೆಂಗಳೂರು ಹುಡುಗ, ಆರ್ಯ ಸದ್ದು ಮಾಡ್ತಾ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾನೆ. ಈ ಪುಟಾಣಿಯ ಮಾತುಗಳಿಗೆ ಸ್ವತಃ ನಟಿ ರಚಿತಾ ರಾಮ್ ಕೂಡ ಫಿದಾ ಆಗಿಬಿಟ್ಟಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ 'ಡ್ರಾಮಾ ಜೂನಿಯರ್ಸ್' ಈಗ ಸಿಕ್ಕಾಪಟ್ಟೆ ಹವಾ ಎಬ್ಬಿಸಿದೆ. ಇದೇ ಸಮಯದಲ್ಲಿ ಆರ್ಯ ಇದೀಗ ನಟಿ ರಚಿತಾ ರಾಮ್ ತನ್ನ ಕೆನ್ನೆ ಕಚ್ಚಿದ್ದು, ಗಾಯವಾಗಿದೆ ಎಂದು ಮುದ್ದಾಗಿ ಆರೋಪ ಮಾಡಿದ್ದಾನೆ. ಹೀಗಾಗಿ ಆರ್ಯ ಆರೋಪ ಮಾಡಿರುವ ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಮೊದಲ ಪ್ರಯತ್ನದಲ್ಲೇ 'ಡ್ರಾಮಾ ಜೂನಿಯರ್ಸ್' ಜಡ್ಜ್ ಮನಸ್ಸು ಕದ್ದಿದ್ದ ಈ ಪೋರ ಇದೀಗ ಕಾರ್ಯಕ್ರಮವನ್ನ ಆವರಿಸಿಕೊಂಡಿದ್ದಾನೆ. ಹೀಗೆ ವಯಸ್ಸು ಇನ್ನೂ ಚಿಕ್ಕದಾಗಿದ್ದರೂ, ಈತನ ಕಾಮಿಡಿ ಪಂಚ್ ಸಖತ್ ಆಗಿದೆ. ಈ ಕಾರಣಕ್ಕೆ ರಚಿತಾರ ಹೊಗಳಿಕೆ ಕೂಡ ಗಿಟ್ಟಿಸಿಕೊಂಡಿದ್ದಾನೆ ಆರ್ಯ. ಹಾಗೇ ಇತರ ಮಕ್ಕಳಿಗಿಂತ ನೇರವಾಗಿ ಮಾತನಾಡುವ ಮತ್ತು ಕೊಟ್ಟಿರುವ ಪಾತ್ರವನ್ನ ಅಚ್ಚುಕಟ್ಟಾಗಿ ಮುಗಿಸುವ ಶಕ್ತಿ ಕೂಡ ಈ ಪುಟಾಣಿಗೆ ಇದೆ. ಹೀಗಾಗಿ ಈ ಹುಡುಗನನ್ನ ಡಿಂಪಲ್ ಕ್ವೀನ್ ರಚಿತಾ ಹೆಚ್ಚು ಇಷ್ಟಪಡುತ್ತಾರೆ. ಆದರೆ ಇದೇ ಪುಟಾಣಿ ಆರ್ಯ ಈಗ ತನ್ನ ಕೆನ್ನೆಯನ್ನು ರಚಿತಾ ರಾಮ್ ಕಚ್ಚಿದ್ದಾರೆ ಎಂದಿದ್ದಾನೆ.
ಕನ್ನಡ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಚ್ಯೂಸಿ ಹಾಗೂ ಬ್ಯುಸಿ ಆಗಿರುವ ನಟಿ ಅಂದ್ರೆ ಅದು ಡಿಂಪಲ್ ಕ್ವೀನ್ ರಚಿತಾ ಅವರು. ಹೀಗೆ ರಚಿತಾ ರಾಮ್ ಕೋಟಿ ಕೋಟಿ ಅಭಿಮಾನಿಗಳನ್ನ ಸಂಪಾದಿಸಿ, ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಹವಾ ಇಟ್ಟಿದ್ದಾರೆ. ಹಾಗೇ ನಟಿ ರಚಿತಾ ರಾಮ್ ಜೊತೆ ಒಂದೇ ಒಂದು ಫೋಟೋ ಬೇಕು ಅಂತಾ ಫ್ಯಾನ್ಸ್ ಕೂಡ ಕಾಯುತ್ತಾ ಕೂರುತ್ತಾರೆ. ಆದರೆ ಈ ನಟಿಗೆ ಒಬ್ಬ ಹುಡುಗನ ಮೇಲೆ ಸಿಕ್ಕಾಪಟ್ಟೆ ಕ್ರಶ್ ಆಗಿದೆಯಂತೆ!












Click it and Unblock the Notifications