‘ಶಾಂತಿ ಕ್ರಾಂತಿ’ಯಲ್ಲಿ ರವಿಚಂದ್ರನ್ ಕಳೆದುಕೊಂಡಿದ್ದು ಎಷ್ಟು ಕೋಟಿ ರೂಪಾಯಿ?
ನಟ ರವಿಚಂದ್ರನ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಷ್ಟೆಲ್ಲಾ ದುಡಿದಿದ್ದಾರೆ, ಹಾಗೇ ಸೇವೆಯ ಸಲ್ಲಿಸಿದ್ದಾರೆ ಅನ್ನೋದು ಇಡೀ ದೇಶಕ್ಕೆ ಗೊತ್ತು. ಆದರೆ ಈ ನಟ ಒಂದೇ ಒಂದು ಸಿನಿಮಾ ಮೂಲಕ ತನ್ನ ಬಳಿ ಇದ್ದ ಎಲ್ಲಾ ಆಸ್ತಿ & ಹಣವನ್ನ ಕಳೆದುಕೊಂಡರು. ಅದ್ರಲ್ಲೂ 1990ರ ದಶಕದಲ್ಲೇ ಹೊಸ 'ಕ್ರಾಂತಿ' ಮಾಡಲು ಹೋಗಿ ಕೈಸುಟ್ಟುಕೊಂಡರು. ಹಾಗಾದರೆ ಇದೀಗ ರವಿಚಂದ್ರನ್ ಅವರೇ ಹೇಳಿದಂತೆ 'ಶಾಂತಿ ಕ್ರಾಂತಿ' ಸಿನಿಮಾದಲ್ಲಿ ಕ್ರೇಜಿಸ್ಟಾರ್ ಕಳೆದುಕೊಂಡ ಹಣ ಎಷ್ಟು ಕೋಟಿ ರೂಪಾಯಿ ಗೊತ್ತೆ?
ರವಿಚಂದ್ರನ್ ಅವರ ಇಡೀ ಕುಟುಂಬ ಕನ್ನಡ ಸಿನಿಮಾ ಜಗತ್ತಿಗೆ ಸಾಕಷ್ಟು ದೊಡ್ಡ ಗಿಫ್ಟ್ & ಸೇವೆ ನೀಡಿದೆ. ಅದರಲ್ಲೂ ಕನ್ನಡ ಸಿನಿಮಾ ಉದ್ಯಮ ಬೆಳೆಯುತ್ತಿದ್ದ ಕಾಲಘಟ್ಟದಲ್ಲಿ, ಈ ಕುಟುಂಬ ಮಾಡಿದ್ದ ಸಹಾಯ ಯಾರೂ ಮರೆಯಲು ಆಗಲ್ಲ. ಈಶ್ವರಿ ಸಂಸ್ಥೆ ಮೂಲಕವೇ ಕನ್ನಡ ಸಿನಿಮಾ ಉದ್ಯಮಕ್ಕೆ ದೊಡ್ಡ ದೊಡ್ಡ ಸಿನಿಮಾಗಳನ್ನು ಕೊಡುಗೆ ನೀಡಿದ್ದರು ನಟ ರವಿಚಂದ್ರನ್ & ಅವರ ಕುಟುಂಬದವರು. ರವಿಚಂದ್ರನ್ ಅವರು 1991ರ ಸಮಯದಲ್ಲಿಯೇ 'ಶಾಂತಿ ಕ್ರಾಂತಿ' ಸಿನಿಮಾಗೆ ಹಣ ಹಾಕಿ ಎಷ್ಟು ಕೋಟಿ ರೂಪಾಯಿ ಕಳೆದುಕೊಂಡರು ಗೊತ್ತೆ? ಈಗ ಇಡೀ ಜಗತ್ತಿನ ಎದುರು ಆ ಸತ್ಯ ಬಿಚ್ಚಿಟ್ಟಿದ್ದಾರೆ ಕ್ರೇಜಿ ಸ್ಟಾರ್. ಆ ಮಾಹಿತಿಗೆ ಮುಂದೆ ಓದಿ.

'ಶಾಂತಿ ಕ್ರಾಂತಿ'ಯಿಂದ ಇಷ್ಟು ಕೋಟಿ ಲಾಸ್!
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೊಪ್ಪಳದ ಕನಕಗಿರಿ ಉತ್ಸವದಲ್ಲಿ ಭಾಗಿಯಾಗಿದ್ರು. ಆಗ, ಉತ್ಸವದಲ್ಲಿ ಅವರು ಮಾತನಾಡಿದರು. ಕ್ರೇಜಿಸ್ಟಾರ್ ಸಿನಿಮಾ ಜರ್ನಿಯನ್ನು ಮತ್ತೆ ನೆನಪನ್ನ ಮಾಡಿಕೊಂಡು, ತಮ್ಮ ಜೀವನ ಹೇಗಿತ್ತು. ಮುಂದೆ ಹೇಗೆಲ್ಲಾ ಆಯಿತು. 'ಶಾಂತಿ ಕ್ರಾಂತಿ' ಸಿನಿಮಾದಲ್ಲಿ ಎಷ್ಟು ಕೋಟಿ ರೂಪಾಯಿ ಕಳೆದುಕೊಂಡೆ? ಅನ್ನೋದನ್ನ ವಿವರಿಸಿದರು. ಆ ಸಮಯದಲ್ಲಿ ಕಾರ್ಯಕ್ರಮದಲ್ಲಿ ಇದ್ದ ಅಭಿಮಾನಿಗಳು ಒಂದು ಕ್ಷಣ ಭಾವುಕರಾದರು. ಈ ಮೂಲಕ ರವಿಚಂದ್ರನ್ ತಮ್ಮ ಜೀವನದ ಕಷ್ಟದ ಸಮಯವನ್ನು ಬಹಿರಂಗವಾಗಿ ಹೇಳಿದ್ದು, ಬರೋಬ್ಬರಿ 10 ಕೋಟಿ ರೂಪಾಯಿ ಹಣವನ್ನು 'ಶಾಂತಿ ಕ್ರಾಂತಿ' ಸಿನಿಮಾಗಾಗಿ ಹಾಕಿ ನಟ ರವಿಚಂದ್ರನ್ ಕಳೆದುಕೊಂಡಿದ್ದರಂತೆ. ಅಲ್ಲದೆ ಡಾ. ರಾಜ್‌ಕುಮಾರ್ & ಡಾ. ವಿಷ್ಣುವರ್ಧನ್‌ರ ಬಗ್ಗೆ ಕೂಡ ಮಾತನಾಡಿದ್ದಾರೆ ರವಿಚಂದ್ರನ್.
ಡಾ.ವಿಷ್ಣುವರ್ಧನ್ ನನಗೆ ಅಣ್ಣನಂತೆ!
ಇದೇ ವೇಳೆ ನಟ ರವಿಚಂದ್ರನ್ ಅವರು ಡಾ.ರಾಜ್‌ಕುಮಾರ್ & ಡಾ.ವಿಷ್ಣುವರ್ಧನ್ ಅವರ ಬಗ್ಗೆ ಕೂಡ ಮಾತನಾಡಿದರು. ಕನ್ನಡ ಚಿತ್ರರಂಗಕ್ಕೆ ಡಾ.ರಾಜ್‌ಕುಮಾರ್ & ವಿಷ್ಣುವರ್ಧನ್ ಅವರ ಕೊಡುಗೆ ದೊಡ್ಡದು ಎಂದರು. ಇದರ ಜೊತೆಗೆ 'ಈಶ್ವರಿ ಪ್ರೊಡಕ್ಷನ್ಸ್‌ನಿಂದ ಬಂದಿದ್ದೇ ವಿಷ್ಣುವರ್ಧನ್ ಅವ್ರು. ನಮ್ಮ ಅಪ್ಪ ಯಾವಾಗ್ಲೂ ವಿಷ್ಣುವರ್ಧನ್ ಅವರನ್ನು, ದೊಡ್ಡ ಮಗ ಅಂತಾನೇ ಕರೆಯೋರು. ಅಂದ್ರೆ ನನ್ನ ಅಣ್ಣ ಅವರು. ಚಿತ್ರರಂಗಕ್ಕೆ ನಾನು ಬಂದಿದ್ದು, ಫಸ್ಟ್ ಸೀನ್ ನಾನು ನಟನೆ ಮಾಡಿದ್ದು, ಡಾ.ರಾಜ್‌ಕುಮಾರ್ ಅವರನ್ನ ಅಪ್ಪ ಅಂತ ಕರೆದೆ ಇಂಡಸ್ಟ್ರಿ ಒಳಗೆ ಬಂದೆ. ನಾನು ಏನಾದರೂ ಇಷ್ಟು ದೂರ ಬಂದಿದ್ದರೆ, ನಾನೇನಾದರೂ ಇದೀಗ ಹೆಸರು ಮಾಡಿದ್ದೀನಿ ಸಾಧನೆ ಮಾಡಿದ್ದೀನಿ ಅಂತ ನೀವೇನಾದರೂ ಅಂದುಕೊಂಡರೆ, ಅದು ಇವರುಗಳ ಮಧ್ಯೆ ಬೆಳೆದುಕೊಂಡೇ ಬಂದಿದ್ದೀನಿ ನಾನು.' ಎಂದಿದ್ದಾರೆ ನಟ ರವಿಚಂದ್ರನ್.

ಒಟ್ನಲ್ಲಿ ನಟ ರವಿಚಂದ್ರನ್ ಇಷ್ಟೆಲ್ಲಾ ಸಾಧನೆ ಮಾಡಿದರೂ ಅವರಿಗೆ ನಾನಾ ಸಮಸ್ಯೆಗಳು ಎದುರಾದವು. ಆದ್ರೂ ನಟ ರವಿಚಂದ್ರನ್ ಅವರಿಗೆ ಸಿನಿಮಾ ಮೇಲೆ ಇರುವ ಪ್ರೀತಿಗೆ ಇಡೀ ಸಿನಿಮಾ ರಂಗ ಫಿದಾ ಆಗಿದೆ. ಅದರಲ್ಲೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಗ್ಗೆ ಕೋಟಿ ಕೋಟಿ ಅಭಿಮಾನಿಗಳು ಅಪಾರ ಪ್ರೀತಿ & ಅಭಿಮಾನ ಹೊಂದಿದ್ದಾರೆ. ಹೀಗಾಗಿ ಅವರು ಮತ್ತೆ ದೊಡ್ಡ ಗೆಲುವು ಸಾಧಿಸಲಿ ಅಂತಾ ಅಭಿಮಾನಿಗಳು ಹಾರೈಸುತ್ತಿದ್ದಾರೆ. ರವಿಚಂದ್ರನ್ ಅವರು ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.












Click it and Unblock the Notifications