ರಶ್ಮಿಕಾ ಮಂದಣ್ಣ ಜೀವಕ್ಕೆ ಅಪಾಯ? ಅಭಿಮಾನಿಗಳಿಗೆ ಭಾರಿ ಆತಂಕ!

ಕರುನಾಡ ಕ್ರಷ್ ಎಂಬ ಖ್ಯಾತಿ ಪಡೆದು, ಈಗ ನ್ಯಾಷನಲ್ ಕ್ರಷ್ ಆಗಿರುವ ನಟಿ ರಶ್ಮಿಕಾಗೆ ಇಂದು ದೊಡ್ಡ ಅಪಾಯ ಎದುರಾಗಿತ್ತು. ರಶ್ಮಿಕಾ ಅವರು ಪ್ರಯಾಣ ಮಾಡುತ್ತಿದ್ದ ವಿಮಾನ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದೆ. ಹೀಗಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಈಗ ನಟಿ ರಶ್ಮಿಕಾ ಮಂದಣ್ಣ ಅವರ ವಿಚಾರವೇ ದೊಡ್ಡ ಮಟ್ಟಿಗೆ ಟ್ರೆಂಡ್ ಮಾಡುತ್ತಿದೆ. ಹಾಗೇ ರಶ್ಮಿಕಾ ಅಭಿಮಾನಿಗಳು ಭಯದಲ್ಲಿ ಏನೇನ್ ವಿಷಯ ಹಂಚಿಕೊಂಡಿದ್ದಾರೆ ಗೊತ್ತಾ?

ನಟಿ ರಶ್ಮಿಕಾ ಮಂದಣ್ಣ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಸಾಕಷ್ಟು ಸಿನಿಮಾ ಮಾಡಿ, ದೊಡ್ಡ ದೊಡ್ಡ ಸಕ್ಸಸ್ ಪಡೆದಿರುವ ಅವರು ಅಭಿಮಾನಿಗಳ ಪಾಲಿಗೆ ತುಂಬಾನೆ ಫೇವರಿಟ್. ಹೀಗೆ ಕೋಟ್ಯಂತರ ಅಭಿಮಾನಿಗಳನ್ನ ಅವರು ಸಂಪಾದನೆ ಮಾಡಿದ್ದಾರೆ. ಇಂತಿಪ್ಪ ನಟಿಗೆ ಮತ್ತು ರಶ್ಮಿಕಾ ಅವರ ಜೀವಕ್ಕೆ ಅಪಾಯ ಎದುರಾಗಿತ್ತು ಅನ್ನೋ ಸುದ್ದಿ ಇದೀಗ ಹಲ್‌ಚಲ್ ಎಬ್ಬಿಸಿದೆ. ಅದರಲ್ಲೂ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಈ ಸುದ್ದಿಯನ್ನ ಕೇಳಿ ಭಾರಿ, ಸಂಕಟದಲ್ಲಿ ಒದ್ದಾಡಿದ್ದಾರೆ. ಹಾಗಾದರೆ ರಶ್ಮಿಕಾ ಫ್ಯಾನ್ಸ್ ಘಟನೆ ಬಗ್ಗೆ ಹೇಳಿದ್ದು ಏನು?

Discover Why Rashmika Mandanna Fans Are In Tension After Flight Did Emergency Landing

ದೇವರಿಗೆ ಧನ್ಯವಾದ ಹೇಳಿದ ರಶ್ಮಿಕಾ ಫ್ಯಾನ್ಸ್!

ಎಲ್ಲರಿಗೆ ಗೊತ್ತಿರುವಂತೆ ನಟಿ ರಶ್ಮಿಕಾ ಮಂದಣ್ಣ ಅವರು ಈಗ ಹೈದರಾಬಾದ್‌ನಲ್ಲಿ ವಾಸವಿದ್ದು ಪರಭಾಷೆ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಅದೇ ರೀತಿ ಅವರು ಶೂಟಿಂಗ್ ಮುಗಿಸಿ ಮುಂಬೈನಿಂದ ಹೈದರಾಬಾದ್‌ಗೆ ಹೋಗುವಾಗ, ವಿಮಾನದಲ್ಲಿ ದಿಢೀರ್ ತಾಂತ್ರಿಕ ದೋಷ ಕಂಡುಬಂದಿತ್ತು. ತಕ್ಷಣವೇ ಅಲರ್ಟ್ ಆದ ಪೈಲಟ್ ತುರ್ತು ಭೂಸ್ಪರ್ಷ ಮಾಡಿದ್ದಾರೆ ಈ ಮೂಲಕ ನೂರಾರು ಪ್ರಯಾಣಿಕರ ಜೀವ ಉಳಿದಿದೆ.

ಈ ಆಘಾತಕಾರಿ ವಿಚಾರವನ್ನು ನಟಿ ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದರು. ನಂತರ ಸೋಷಿಯಲ್ ಮೀಡಿಯಾ ತುಂಬಾ ಇದೇ ಸುದ್ದಿ ಓಡಾಡುತ್ತಿದೆ. ರಶ್ಮಿಕಾ ಅಭಿಮಾನಿಗಳು ದೇವರಿಗೆ ಧನ್ಯವಾದ ಹೇಳಿ, ತಮ್ಮ ನಟಿಯ ಬೆನ್ನಿಗೆ ನಿಂತಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಅವರ ವಿಚಾರ ಭಾರಿ ಟ್ರೆಂಡ್ ಮಾಡಿತ್ತು.

Discover Why Rashmika Mandanna Fans Are In Tension After Flight Did Emergency Landing

ಅನಿಮಲ್ ಸಕ್ಸಸ್ ವೇಳೆ ಶಾಕ್!

ನಟಿ ರಶ್ಮಿಕಾ ಮಂದಣ್ಣ ಪ್ರಯಾಣ ಮಾಡುವ ವಿಮಾನದಲ್ಲಿ ನಟಿ ಶ್ರದ್ಧಾ ದಾಸ್ ಇದ್ದರಂತೆ. ಈ ಕಾರಣಕ್ಕೆ ಇಬ್ಬರೂ ಒಂದೇ ಫೋಟೋದಲ್ಲಿ ತಾವು ಹೇಗೆ ಬಚಾವ್ ಆಗಿದ್ದು ಅಂತಾನು ತಿಳಿಸಿದ್ದಾರೆ. ಇತ್ತೀಚೆಗೆ ನಟಿ ರಶ್ಮಿಕಾ ಅವರು ಅನಿಮಲ್ ಸಿನಿಮಾದ ಸಕ್ಸಸ್ ಪಡೆದಿದ್ದರು. ಆ ಮೂಲಕ ನಟಿ ರಶ್ಮಿಕಾ ಮಂದಣ್ಣ ಮಿಂಚಿದ್ದರು. ಈಗ ನೋಡಿದ್ರೆ ವಿಮಾನ ಅಪಘಾತ ಎದುರಾಗುವ ಸಮಯದಲ್ಲಿ ಅವರು ಬಚಾವ್ ಆಗಿದ್ದಾರೆ. ಅದರಲ್ಲೂ ಈ ಸುದ್ದಿ ಕೇಳಿದ, ರಶ್ಮಿಕಾ ಅವರ ಅಭಿಮಾನಿಗಳು ತುಂಬಾನೆ ಆಘಾತಕ್ಕೆ ಒಳಗಾಗಿದ್ದರು.

'ಪುಷ್ಪ-2' ಎಂಟ್ರಿಗೆ ಮುಹೂರ್ತ ಫಿಕ್ಸ್!

ನಟಿ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಜೋಡಿಯ ಬಹು ನಿರೀಕ್ಷಿತ ಸಿನಿಮಾಗೋಸ್ಕರ ಫ್ಯಾನ್ಸ್ ಕಾಯುತ್ತಿದ್ದಾರೆ. 'ಪುಷ್ಪ-1' ಚಿತ್ರ ಮೂಲಕ ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆದು ಹತ್ತಾರು ದಾಖಲೆ ಬರೆದಿದ್ದ ರಶ್ಮಿಕಾ & ಅಲ್ಲು ಅರ್ಜುನ್ ಮತ್ತೆ ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದು, 'ಪುಷ್ಪ-2' ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಅದ್ಧೂರಿಯಾಗಿ ಶೂಟಿಂಗ್ ನಡೆಯುತ್ತಿದೆ. ಹೀಗೆ ಎಲ್ಲವೂ ಚೆನ್ನಾಗಿಯೇ ಇದ್ದಾಗ ರಶ್ಮಿಕಾ ಅವರ ವಿಮಾನ ತುರ್ತು ಭೂಸ್ಪರ್ಶವನ್ನು, ಮಾಡಿರುವುದು ಆತಂಕ ಹುಟ್ಟುಹಾಕಿತ್ತು.

ಒಟ್ನಲ್ಲಿ ನಟಿ ರಶ್ಮಿಕಾ ಅವರು ಯಾವುದೇ ಅಪಾಯ ಇಲ್ಲದೆ, ವಿಮಾನ ತುರ್ತು ಭೂಸ್ಪರ್ಶ ವೇಳೆ ಬಚಾವ್ ಆಗಿದ್ದಾರೆ. ಹಾಗೇ ತಮ್ಮ ನಟಿ ಸೇಫ್ ಆಗಿ ಇದ್ದಾರಾ..? ಅಂತಾ ಫ್ಯಾನ್ಸ್‌ಗೆ ಕೂಡ ಅನುಮಾನ ಕಾಡುತ್ತಿತ್ತು. ಆದರೆ ಈಗ ಅದೆಲ್ಲಾ ಸರಿಹೋಗಿದ್ದು, ರಶ್ಮಿಕಾರ ಫ್ಯಾನ್ಸ್ ಈಗ ಒಂದಷ್ಟು ನಿರಾಳವಾಗಿದ್ದಾರೆ. ಹಾಗೇ ಅವರ ಸಿನಿಮಾ ಜೀವನ ಮತ್ತಷ್ಟು ಪ್ರಜ್ವಲಿಸಲಿ ಅಂತಲೂ ಅಭಿಮಾನಿಗಳು ಆಶಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+