ಕನ್ನಡಕ್ಕೆ ಒಬ್ಬರೇ ಡಾ. ರಾಜ್‌ಕುಮಾರ್: ರೆಬೆಲ್ ಸ್ಟಾರ್ ಅಂಬರೀಶ್!
ಕನ್ನಡ ಚಿತ್ರರಂಗದಲ್ಲಿ ಜಿಮ್ ಮಾಡದೆ ಇದ್ರೂ ಅಚ್ಚುಕಟ್ಟಾಗಿ ಮೈಕಟ್ಟು ಬೆಳೆಸಿದ್ದ ನಟರೆಂದರೆ ಡಾ.ರಾಜ್‌ಕುಮಾರ್. ತಮ್ಮ ಅಂತ್ಯಕಾಲ ತನಕ ದೇಹವನ್ನ ಒಂದೇ ರೀತಿಯಾಗಿ ಇಟ್ಟುಕೊಂಡು ಜೀವನದಲ್ಲಿ ಶಿಸ್ತು ಪಾಲಿಸಿದ್ದರು ಕನ್ನಡಿಗರ ಪಾಲಿನ ವರನಟ ಡಾ.ರಾಜ್‌ಕುಮಾರ್ ಅವರು. ಆದರೆ ಇಂತಹ ನಟನ ಬಗ್ಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಮಾತನಾಡಿದ್ದ ಸ್ಫೋಟಕ ನೇರನುಡಿ ಈಗ ಫುಲ್ ವೈರಲ್ ಆಗಿದೆ.
ಅಂದಹಾಗೆ ಇದೀಗ ಅಣ್ಣಾವ್ರು ಅಂದ್ರೆ ಡಾ.ರಾಜ್‌ಕುಮಾರ್ ಅವರು ನಮ್ಮ ಜೊತೆಗೆ ಇಲ್ಲ. ಆದ್ರೆ ಅವರು ಹಾಕಿಕೊಟ್ಟ ಹಾದಿಯಲ್ಲೇ ಕನ್ನಡ ಸಿನಿಮಾ ರಂಗ ಸಾಗುತ್ತಿದೆ. ನಮ್ಮ ರಾಜ್ಯ ಅಂದ್ರೆ ಕರ್ನಾಟಕ ಸಿನಿಮಾ ರಂಗ ಇಷ್ಟು ಎತ್ತರಕ್ಕೆ ಬೆಳೆದು ನಿಲ್ಲಲು, ಡಾ.ರಾಜ್‌ಕುಮಾರ್ ಅವರು ಹಾಕಿಕೊಟ್ಟ ಭದ್ರ ಬುನಾದಿಯೆ ಪ್ರಮುಖ ಕಾರಣ. ರಾಜಣ್ಣ ಅಂದು ಕನ್ನಡಿಗರಿಗೆ ಸಿನಿಮಾ ರಂಗದ ಹಾದಿಯನ್ನು ಸೂಕ್ತವಾಗಿ ತೋರಿಸಿದ್ದರು. ಈ ಕುರಿತು ಸ್ವತಃ ಅಂಬರೀಶ್ ಅವರೇ ಮಾತನಾಡಿದ್ದ ಹಳೆಯ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದೆ. ಈ ನಡುವೆ, ತಮ್ಮ ಭಾಷಣದಲ್ಲಿ ಅಂಬರೀಶ್ ಅವರು ಡಾ.ರಾಜ್ ಬಗ್ಗೆ ಮತ್ತೊಂದು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಕೈಯಲ್ಲಿ ಹಣವನ್ನೇ ನೋಡದ ಡಾ.ರಾಜ್!
ಹೌದು ಡಾ.ರಾಜ್‌ಕುಮಾರ್ ಅವರು ನಮ್ಮನ್ನು ಅಗಲಿದ ನಂತರ ಕಾರ್ಯಕ್ರಮ ಒಂದರಲ್ಲಿ ಮುಕ್ತವಾಗಿ ಮಾತನಾಡಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಅವರು, ಡಾ.ರಾಜ್‌ಕುಮಾರ್ ಅವರ ಗುಣವನ್ನು ಹೊಗಳಿದ್ದರು. ಹಾಗೇ ವರನಟ ಡಾ.ರಾಜ್‌ಕುಮಾರ್ ಅವರ ಬದುಕು ಸಿನಿಮಾ ರಂಗಕ್ಕೆ ಮಾತ್ರವಲ್ಲ, ಪ್ರತಿಯೊಬ್ಬ ಕಲಾವಿದನಿಗೂ ಮಾದರಿ ಎಂದು ತಿಳಿಸಿದ್ದರು. ರೆಬೆಲ್ ಸ್ಟಾರ್ ಅಂಬರೀಶ್ ಅವರು ಹಲವು ವರ್ಷಗಳ ಹಿಂದೆ ಮಾತನಾಡಿದ್ದ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ. ಹಾಗೇ ಡಾ.ರಾಜ್‌ಕುಮಾರ್ ಅವರು ಎಂದಿಗೂ ಹಣ ನೋಡದೆ, ಕಲೆಗಾಗಿ ಬದುಕು ಮುಡಿಪಾಗಿ ಇಟ್ಟಿದ್ದರು ಎಂಬ ಅಂಶವನ್ನೂ ಅಂಬರೀಶ್ ಅವರು ಅಂದೇ ತಿಳಿಸಿದ್ದರು.
ಅವರ ಆದರ್ಶ ನಾವು ಪಾಲಿಸಬೇಕು
ಹಾಗೇ ಇದೇ ಭಾಷಣದ ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ಅವರು, ಡಾ.ರಾಜ್‌ಕುಮಾರ್‌ರ ಆದರ್ಶಗಳ ಬಗ್ಗೆಯೂ ಮಾತನಾಡಿದ್ದರು. ಸಿನಿಮಾ ರಂಗ ಡಾ.ರಾಜ್ ಅವರ ಆದರ್ಶವನ್ನ ಪಾಲಿಸಬೇಕು. ಹೀಗೆ ಅವರ ಆದರ್ಶ ಪಾಲನೆಯಿಂದ ಮಾತ್ರ, ನಮ್ಮ ಸಿನಿಮಾ ರಂಗವನ್ನು ಉಳಿಸಿ ಕೊಳ್ಳಬಹುದು & ಬೆಳೆಸಬಹುದು. ಸಿನಿಮಾ ಕ್ಷೇತ್ರಕ್ಕೆ ರಾಜಣ್ಣ ಮಾದರಿ ಆಗಿದ್ದರು. ಅವರು ಇಲ್ಲ ಎಂದು ನಾನು ಎಂದಿಗೂ ಹೇಳುವುದಿಲ್ಲ, ಯಾಕಂದ್ರೆ ಅವರು ನಮ್ಮೊಂದಿಗೆ ಇದ್ದೇ ಇರುತ್ತಾರೆ ಎಂದು ರೆಬೆಲ್ ಸ್ಟಾರ್ ಅಂಬರೀಶ್ ಹೇಳಿದ್ದ ಮಾತುಗಳು ಮತ್ತೆ ವೈರಲ್ ಆಗುತ್ತಿವೆ. ಹಳೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಭಾರತವೇ ಗೌರವಿಸುವ ಮೇರು ನಟ
ವರನಟ ರಾಜ್‌ಕುಮಾರ್‌ರ ಹೆಸರು ಕೇಳುತ್ತಿದ್ದಂತೆ, ಇಡೀ ಭಾರತೀಯ ಚಿತ್ರರಂಗ ಎದ್ದು ನಿಂತು ಗೌರವಿಸುತ್ತದೆ. ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಿಂದ ವಂಚಿರಾದರೂ ಡಾ.ರಾಜ್‌ಕುಮಾರ್ ಎಲ್ಲರಿಗೂ ಮಾದರಿಯಾದರು. ಇಂಗ್ಲಿಷ್‌ಗೂ ಸೈ, ಕನ್ನಡಕ್ಕೆ ಜೈ ಎಂದು ಕನ್ನಡ ಸಿನಿಮಾರಂಗ & ಕನ್ನಡ ಭಾಷೆ ಉಳಿವಿಗಾಗಿ ಹೋರಾಡಿದವರು. ಅಲ್ಲದೆ ಕನ್ನಡ ಸಿನಿಮಾ ರಂಗ ಇಷ್ಟೊಂದು ಗಟ್ಟಿಯಾಗಿ ಬೆಳೆದು ನಿಲ್ಲಲು ಅವರೇ ಕಾರಣರಾದರು. ಇಂದಿಗೂ ಅವರು ಕನ್ನಡಿಗರ ಮನ ಹಾಗೂ ಹೃದಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.
ಒಟ್ನಲ್ಲಿ ಕನ್ನಡ ಸಿನಿಮಾ ರಂಗದ ಮಿನುಗು ತಾರೆ ಡಾ.ರಾಜ್‌ಕುಮಾರ್. ಅವರ ಆದರ್ಶದ ಹಾದಿಯಲ್ಲೇ ಇಂದಿಗೂ ಸಿನಿಮಾ ಜಗತ್ತು ಸಾಗಬೇಕಿದೆ. ಎಂದಿಗೂ ತಮ್ಮ ಸಿನಿಮಾಗಳಲ್ಲಿ, ಅಭಿಮಾನಿಗಳಿಗೆ ಕೆಟ್ಟ ಸಂದೇಶ ನೀಡದೆ. ಪ್ರತಿಯೊಂದು ತಲೆಮಾರನ್ನೂ ಉತ್ತಮ ಹಾದಿಗೆ ಸಾಗುವಂತೆ ನಡೆಸಿಕೊಂಡು ಬಂದ ಕೀರ್ತಿ ನಟ ಡಾ.ರಾಜ್‌ಕುಮಾರ್ ಅವರದ್ದು. ಅವರನ್ನ ಕಂಡರೆ ಇದೇ ಕಾರಣಕ್ಕೆ ಇಡೀ ಸಿನಿಮಾ ರಂಗ ಗೌರವಿಸುತ್ತದೆ. ಹಾಗೇ, ಸ್ಯಾಂಡಲ್‌ವುಡ್‌ನ ಪ್ರತಿ ಹಂತದ ಬೆಳವಣಿಗೆಯಲ್ಲೂ ವರನಟ ಡಾ.ರಾಜ್ ಅವರ ಶ್ರಮ ಇದೆ.












Click it and Unblock the Notifications