ಕೆಜಿಎಫ್ ವಿತರಕ + ಡಾಲಿ ಧನಂಜಯ್ ಸಿನಿಮಾ = ಬಿಗ್ ಸಕ್ಸಸ್?
ನಟ ಡಾಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಪಾಲಿಗೆ ನಟರಾಕ್ಷಸ ಆಗಿದ್ರೂ ಸಿನಿಮಾ ರಂಗದಲ್ಲಿ ಬೆಳೆಯುತ್ತಿರುವ ಪ್ರತಿಭೆಗಳ ಚಿತ್ರಗಳಿಗೆ ಹಣ ಹಾಕಿ ಹೊಸ ನಿರೀಕ್ಷೆ ಮೂಡಿಸಿದ್ದಾರೆ. ಡಾಲಿ ಸ್ವಂತ ಪ್ರೊಡಕ್ಷನ್ ಮೂಲಕ ಈಗಾಗಲೇ 2 ಸಿನಿಮಾಗೆ ದುಡ್ಡು ಹಾಕಿ ಸಕ್ಸಸ್ ಕಂಡಿದ್ದಾರೆ. ಹೀಗಾಗಿ ಈಗ 3ನೇ ಬಾರಿ ಗೆಲುವು ಸಾಧಿಸಿ, ನಿರ್ಮಾಣದಲ್ಲಿ ಹ್ಯಾಟ್ರಿಕ್ ಹಿಟ್ ಪಡೆಯಲು ಸಜ್ಜಾಗಿದ್ದಾರೆ. ಮತ್ತೊಂದು ಕಡೆ ಕೆಜಿಎಫ್ ಸಿನಿಮಾ ಜೊತೆಗೂ ಡಾಲಿ ಸಿನಿಮಾಗೆ ನಂಟು ಬೆಸೆದಿದೆ ಗೊತ್ತಾ?
ಹೌದು, ನಟ ಧನಂಜಯ್ ಪ್ರೊಡ್ಯೂಸರ್ ಡಾಲಿ ಆಗಿ ಮಿಂಚುತ್ತಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನಿರ್ಮಾಪಕನಾಗಿಯೂ ಡಾಲಿ ಕೊಡ್ತಿದ್ದಾರೆ. ಇದೀಗ ಧನಂಜಯ್‌ರ 'ಟಗರು ಪಲ್ಯ' ಸಿನಿಮಾ ಅದೇ ಸಾಲಿಗೆ ಸೇರುವ ನಿರೀಕ್ಷೆ ಇದ್ದು, ಈಗಾಗಲೇ ತನ್ನ ಟ್ರೇಲರ್ ಮೂಲಕ ನಿರೀಕ್ಷೆ ಭಾರ ಹೆಚ್ಚಿಸಿದ್ದ 'ಟಗರು ಪಲ್ಯ' ನಾಳೆ ರಾಜ್ಯದ ಮೂಲೆ ಮೂಲೆಯಲ್ಲೂ ರಿಲೀಸ್ ಆಗಲಿದೆ. ಒಟ್ಟು 175 ಥಿಯೇಟರ್‌ಗಳಲ್ಲಿ 'ಟಗರು ಪಲ್ಯ' ಸಿನಿಮಾ ನಾಳೆಯಿಂದ ಅಬ್ಬರ ತೋರಲು ಸಜ್ಜಾಗಿದೆ. ಇಷ್ಟೆಲ್ಲಾ ಸರ್ಪ್ರೈಸ್‌ಗಳ ನಡುವೆಯೇ 'ಕೆಜಿಎಫ್ ವಿತರಕ + ಡಾಲಿ ಧನಂಜಯ್ ಸಿನಿಮಾ = ಬಿಗ್ ಸಕ್ಸಸ್' ಅಂತಿದ್ದಾರೆ ಅಭಿಮಾನಿಗಳು.

45 ದಿನ ಮೊದಲೇ ಸಿನಿಮಾ ತೋರಿಸಿದ್ದರು!
ನಿಮಗೆಲ್ಲಾ ವಿತರಕ ಕಾರ್ತಿಕ್ ಗೌಡ ಚಿರಪರಿಚಿತ, ಅದರಲ್ಲೂ ಕೆಜಿಎಫ್ ಸಿನಿಮಾ ಮೂಲಕ ಕಾರ್ತಿಕ್ ಗೌಡ ಹೆಸರು ದೇಶಕ್ಕೆ ಪರಿಚಿತವಾಗಿದೆ. ಹೀಗೆ ವಿತರಕ ಕಾರ್ತಿಕ್ ಗೌಡ ಮತ್ತು ನಟ ಡಾಲಿ ಧನಂಜಯ್ ನಡುವೆ ಉತ್ತಮ ಸ್ನೇಹವೂ ಇದೆ. ಡಾಲಿ ಸಿನಿಮಾಗಳ ಬೆನ್ನಿಗೆ ನಿಂತು ಸಪೋರ್ಟ್ ಮಾಡುತ್ತಿರುವ ವಿತರಕ ಕಾರ್ತಿಕ್ ಗೌಡ ಈಗಲೂ 'ಟಗರು ಪಲ್ಯ'ಗೆ ಸಪೋರ್ಟ್ ಕೊಟ್ಟಿದ್ದಾರೆ. ಹಾಗೇ ಇತ್ತೀಚೆಗೆ ಈ ಬಗ್ಗೆ ಮಾತನಾಡುತ್ತಾ 45 ದಿನ ಮೊದಲೇ ಈ ಸಿನಿಮಾ ತೋರಿಸಿದ್ದರು ಎಂಬುದನ್ನ ಕಾರ್ತಿಕ್ ಗೌಡ ರಿವೀಲ್ ಮಾಡಿದ್ದರು.
ಅಲ್ಲದೆ, ಬಡವ ರಾಸ್ಕಲ್ ಕೂಡ ರಿಲೀಸ್ ಮುನ್ನ 2ರಿಂದ 3 ತಿಂಗಳು ಮೊದಲೇ ತೋರಿಸಿದ್ದರು ಎಂದು ವಿತರಕ ಕಾರ್ತಿಕ್ ಗೌಡ ಹಳೆಯ ನೆನಪನ್ನು ಮೆಲುಕು ಹಾಕಿದ್ದರು. ಜೊತೆಗೆ ಟಗರು ಪಲ್ಯ ಅದ್ಧೂರಿಯಾಗಿ ಕನ್ನಡಿಗರ ಮನಸ್ಸು ಗೆಲ್ಲುತ್ತೆ ಎಂಬ ಹಿಂಟ್ ಕೂಡ ಕೊಟ್ಟಿದ್ರು. ಈ ನಿರೀಕ್ಷೆಗಳ ನಡುವೆ ನಾಳೆಯೇ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲಿದ್ದು, ದೊಡ್ಡ ಯಶಸ್ಸನ್ನೂ ಕಾಣುವ ನಿರೀಕ್ಷೆ ಮೊಳಕೆಯೊಡೆದಿದೆ.
ಇಲ್ಲಿದೆ 'ಟಗರು' ತಂಡ!
'ಟಗರು ಪಲ್ಯ' ಸಿನಿಮಾಗೆ ಯುವ ನಿರ್ದೇಶಕ ಉಮೇಶ್ ಕೃಪಾ ಡೈರೆಕ್ಷನ್ ಇದೆ. ಉಮೇಶ್‌ಗೆ ಇದು ಮೊದಲನೇ ಚಿತ್ರ. ಹಾಗೇ ಟಗರು ಪಲ್ಯ ಚಿತ್ರದ ಮೂಲಕ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಈ ಚಿತ್ರದಲ್ಲಿ ನಾಗಭೂಷಣ್ ನಾಯಕನಾಗಿ ನಟಿಸಿದ್ದಾರೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆ ಸುತ್ತಮುತ್ತ ಗ್ರಾಮೀಣ ಭಾಗದಲ್ಲಿ ನಡೆಯುವ ಆಚರಣೆ ಸುತ್ತಾ ಈ ಸಿನಿಮಾ ಕಥೆ ಕೆತ್ತಿದ್ದಾರೆ ನಿರ್ದೇಶಕ ಉಮೇಶ್ ಕೃಪಾ. ಹೀಗಾಗಿ 'ಟಗರು ಪಲ್ಯ' ಸಿನಿಮಾ ತನ್ನ ಫಸ್ಟ್ ಲುಕ್‌ನಿಂದ ಕನ್ನಡಿಗರ ಗಮನ ಸೆಳೆದಿತ್ತು. ಅಕ್ಟೋಬರ್ 27ಕ್ಕೆ ಅಂದರೆ ನಾಳೆಯೇ ಸಿನಿಮಾ ಬಿಡುಗಡೆ ಆಗಲಿದೆ.

ಒಟ್ನಲ್ಲಿ ಮತ್ತೊಂದು ಸಕ್ಸಸ್ ಸಿನಿಮಾ ಕೊಡುವ ನಿರೀಕ್ಷೆಯಲ್ಲಿ ಡಾಲಿ ಧನಂಜಯ್ ಇದ್ದು ಅದಕ್ಕಾಗಿ ಬೇಕಾದ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಈಗಾಗಲೇ 'ಟಗರು ಪಲ್ಯ' ಚಿತ್ರ ತನ್ನ ಟ್ರೇಲರ್, ಟೀಸರ್ ಮತ್ತು ಸಾಂಗ್ಸ್ ಮೂಲಕವೇ ಕಮಾಲ್ ಮಾಡಿದೆ. ಇನ್ನುಮುಂದೆ ಏನಿದ್ದರೂ ಬೆಳ್ಳಿತೆರೆ ಮೇಲೆ ಕಮಾಲ್ ಮಾಡಿ, ಕನ್ನಡಿಗರ ಮನಸ್ಸು ಗೆಲ್ಲಬೇಕಿದೆ. ಹೀಗಾಗಿ ನಾಳೆ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಹಾಗೇ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಉತ್ತಮ ಸಿನಿಮಾ ಉಡುಗೊರೆಯಾಗಿ ಸಿಗುವ ನಿರೀಕ್ಷೆ ಕೂಡ ಇದೆ.












Click it and Unblock the Notifications