'ಮುಂಗಾರು ಮಳೆ' ಬೆಡಗಿ ಪೂಜಾ ಗಾಂಧಿ ಹಿಟ್ ಸಿನಿಮಾಗಳು ಇವು!
ಕನ್ನಡ ಚಿತ್ರರಂಗದಲ್ಲಿ 'ಮಳೆ ಹುಡುಗಿ' ಎಂದೇ ಖ್ಯಾತಿ ಪಡೆದ ಪೂಜಾ ಗಾಂಧಿ ಅವರು ಈಗ ಹೊಸ ಬಾಳಿಗೆ ಸಿದ್ಧವಾಗಿದ್ದಾರೆ. ನವೆಂಬರ್ 29 ರಂದು ಬೆಂಗಳೂರಿನ ಯಲಹಂಕದಲ್ಲಿ ನಟಿ ಪೂಜಾ ಗಾಂಧಿ ಅವರ ವಿವಾಹ ನೆರವೇರಲಿದೆ. ಇದೇ ಸಮಯದಲ್ಲಿ ಪೂಜಾ ಗಾಂಧಿಯವರ ಹಿಟ್ ಸಿನಿಮಾಗಳ ಪಟ್ಟಿಯನ್ನ ಇಲ್ಲಿ ತಿಳಿಯೋಣ ಬನ್ನಿ.
ನಟಿ ಪೂಜಾ ಗಾಂಧಿ 'ಮುಂಗಾರು ಮಳೆ' ಸಿನಿಮಾದ ಮೂಲಕ, ಕನ್ನಡ ಸಿನಿಮಾ ಇಂಡಸ್ಟ್ರಿಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟರು. ಇದೀಗ ಮದುವೆ ಸಂಭ್ರಮದಲ್ಲಿರುವ ಮಳೆ ಹುಡುಗಿ, ಹಿಟ್ ಸಿನಿಮಾಗಳ ದೊಡ್ಡ ಪಟ್ಟಿಯನ್ನೇ ಕನ್ನಡಿಗರ ಎದುರು ಇಟ್ಟಿದ್ದಾರೆ. ಹೀಗೆ ಪೂಜಾ ಗಾಂಧಿ, ಒಂದೇ ವರ್ಷದಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಹಾಗಾದರೆ ಪೂಜಾ ಗಾಂಧಿ ಅವರ ಹಿಟ್ ಸಿನಿಮಾಗಳ ಪಟ್ಟಿ ಹೇಗಿದೆ ಗೊತ್ತಾ? ಮುಂದೆ ಓದಿ.

'ಮುಂಗಾರು ಮಳೆ' ಎಂಬ ಅದ್ಭುತ!
ಪೂಜಾ ಗಾಂಧಿ ಅಭಿನಯಿಸಿದ ಮೊದಲ ಸಿನಿಮಾ 'ಮುಂಗಾರು ಮಳೆ' ಎಲ್ಲಾ ದಾಖಲೆ ಧೂಳ್ ಧೂಳ್ ಮಾಡಿತ್ತು. ಆಗಿನ ಕಾಲಕ್ಕೆ ಈ ಸಿನಿಮಾ ದೊಡ್ಡ ಹಿಟ್ ಕಂಡು ಬಾಕ್ಸ್ ಆಫಿಸ್ ದಾಖಲೆ ಮುರಿದು ಹಾಕಿತ್ತು. 2006 ರ ಡಿಸೆಂಬರ್ 29 ರಂದು ಬಿಡುಗಡೆಯಾಗಿದ್ದ ಯೋಗರಾಜ್ ಭಟ್ ಅವರ ನಿರ್ದೇಶನದ ಮುಂಗಾರು ಮಳೆ ಸಿನಿಮಾ, ಇಡೀ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಗಲ್ಲಾ ಪೆಟ್ಟಿಗೆಯಲ್ಲೂ 75 ಕೋಟಿ ರೂ. ಬಾಚಿತ್ತು ಮುಂಗಾರು ಮಳೆ ಸಿನಿಮಾ.
ಸಾಲು ಸಾಲು ಹಿಟ್ ಸಿನಿಮಾ!
'ಮುಂಗಾರು ಮಳೆ' ಸಿನಿಮಾ ಗೆದ್ದ ನಂತರ ಸಾಲು ಸಾಲು ಸಿನಿಮಾಗಳು ನಟಿ ಪೂಜಾ ಗಾಂಧಿಗೆ ಸಿಕ್ಕವು. ಹೀಗೆ ಮುಂಗಾರು ಮಳೆ ಬಳಿಕ ನಟಿ ಪೂಜಾ ಗಾಂಧಿ 'ಮಿಲನ'ದಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಜೊತೆ ನಟಿಸಿದ್ದರು. ಈ ಸಿನ್ಮಾ ತೆರೆಕಂಡ ಬಳಿಕ ಮತ್ತೊಂದು ಬಿಗ್ ಸಕ್ಸಸ್ ಪಡೆದರು. 2007 ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಸುಮಾರು 500 ದಿನ ನಾನ್ ಸ್ಟಾಪ್ ಆಗಿ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡಿತ್ತು. ಕನ್ನಡ ಸಿನಿ ಇಂಡಸ್ಟ್ರಿಯಲ್ಲೇ ಇದು ಹೊಸ ಚರಿತ್ರೆ ಸೃಷ್ಟಿಸಿದ್ದ ಸಿನಿಮಾ ಆಗಿತ್ತು.
2007 ತುಂಬಾ ಲಕ್ಕಿ ವರ್ಷ!
ಪೂಜಾ ಗಾಂಧಿ ಅವರಿಗೆ 2007 ತುಂಬಾ ಲಕ್ಕಿ ವರ್ಷ ಎನ್ನಬಹುದು ಯಾಕಂದ್ರೆ ಕೇವಲ ಒಂದೇ ವರ್ಷದಲ್ಲಿ ಸಾಲು ಸಾಲು ಹಿಟ್ ಸಿನಿಮಾ ನೀಡಿದರು. ಹೀಗೆ 2007ರಲ್ಲಿ ಮತ್ತೆ ಗಣೇಶ್ ಜೊತೆಗೆ ಅಭಿನಯಿಸಿ 'ಕೃಷ್ಣ' ಸಿನಿಮಾ ಮೂಲಕ ಬಿಗ್ ಸಕ್ಸಸ್ ಪಡೆದರು. ಕೃಷ್ಣ ಸಿನಿಮಾ ಕೂಡ 100 ದಿನ ಪೂರೈಸಿತ್ತು. ಮುಂಗಾರು ಮಳೆ ಹಿಟ್ ಆಗಿದ್ದ ಹಿನ್ನೆಲೆಯಲ್ಲಿ ಗಣೇಶ್ & ಪೂಜಾ ಜೋಡಿ ಅಭಿಮಾನಿಗಳಿಗೆ ಇಷ್ಟವಾಗಿತ್ತು.

'ತಾಜ್ ಮಹಲ್' ಎಂಬ ಕಮಾಲ್
ನಟಿ ಪೂಜಾ ಗಾಂಧಿಗೆ 2007ರಲ್ಲಿ ಕೈಹಿಡಿದ ಮತ್ತೊಂದು ಬಿಗ್ ಹಿಟ್ ಸಿನಿಮಾ ಅಂದರೆ 'ತಾಜ್ ಮಹಲ್'. ಈ ಸಿನಿಮಾ ಕೂಡ 200 ದಿನಗಳನ್ನು ಯಶಸ್ವಿಯಾಗಿ ಪೂರೈಸಿತ್ತು. ಈ ಮೂಲಕ ಪೂಜಾ ಗಾಂಧಿ ದೊಡ್ಡ ಮಟ್ಟಿಗಿನ ಸಕ್ಸಸ್ ಪಡೆದರು. ಆರ್. ಚಂದ್ರು ಚೊಚ್ಚಲ ಸಿನಿಮಾ ಇದಾಗಿತ್ತು. ಹಿರಿಯ ನಟ ಅನಂತ್ ನಾಗ್, ಪದ್ಮಜಾ ರಾವ್, ರಂಗಾಯಣ ರಘು & ಪದ್ಮಿನಿ ಪ್ರಕಾಶ್, ಸುರೇಶ್ ಮಂಗಳೂರು, ಆಶೋಕ್, ಸುನಿಲ್ ರಾವ್ ಅಭಿನಯಿಸಿದ್ದರು.
ಉಪ್ಪಿ ಜೊತೆಗೂ ಬಿಗ್ ಸಕ್ಸಸ್
ಪೂಜಾ ಗಾಂಧಿ ಅವರು ತಮ್ಮ 2007ರ ದೊಡ್ಡ ಸಕ್ಸಸ್ ಜರ್ನಿಯನ್ನ 2008ರಲ್ಲಿ ಕೂಡ ಕಂಟಿನ್ಯು ಮಾಡಿದರು. ಉಪೇಂದ್ರ ನಾಯಕರಾಗಿ ನಟಿಸಿದ್ದ 'ಬುದ್ದಿವಂತ' ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸಿದರು ಪೂಜಾ. 2008ರಲ್ಲಿ ಬುದ್ದಿವಂತ ಸಿನಿಮಾದ ನಾನವನಲ್ಲ, ನಾನವನಲ್ಲ ಡೈಲಾಗ್ ಸಖತ್ ಫೇಮಸ್ ಆಗಿತ್ತು. ಹಾಗೆ 'ಬುದ್ದಿವಂತ' ಸಿನಿಮಾದಲ್ಲಿ ಪೂಜಾ ಗಾಂಧಿ ಅಭಿನಯಕ್ಕೆ ಕೂಡ ಪ್ರೇಕ್ಷಕರು ಫಿದಾ ಆಗಿದ್ದರು.












Click it and Unblock the Notifications