ʼಕರಿಯʼ Rerelease ಪೋಸ್ಟ್‌ ಹಾಕಿದ ಪ್ರೇಮ್‌; ಕಾಮೆಂಟ್ಸ್‌ನಲ್ಲಿ ʼಪುಡಾಂಗ್‌ʼನದ್ದೇ ಸದ್ದು

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲುವಾಸದಲ್ಲಿದ್ದರೆ, ಇತ್ತ ಹೊರಗೆ ದರ್ಶನ್‌ ಅಭಿನಯಿಸಿರುವ ಕರಿಯ ಸಿನಿಮಾ ರೀರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದ ನಿರ್ದೇಶಕ ಪ್ರೇಮ್‌ ಈ ಸಿನಿಮಾದ ಪೋಸ್ಟರ್‌ ಹಂಚಿಕೊಂಡು ಫ್ಯಾನ್ಸ್‌ಗೆ ಕೆಲ ಕಿವಿಮಾತುಗಳನ್ನು ಹೇಳಿದ್ದರು.

ಆದರೆ, ಈ ಪೋಸ್ಟ್‌ನಿಂದ ಕೆಲವರು ಖುಷ್‌ ಆಗಿದ್ದರೆ, ಹಲವರು ಗರಂ ಕೂಡ ಆಗಿದ್ದಾರೆ. ಈ ಪೋಸ್ಟ್‌ ನೋಡಿದ ಅನೇಕರು ಪ್ರೇಮ್‌ ಹಾಗೂ ದರ್ಶನ್‌ ನಡುವಿನ ʼಪುಡಾಂಗ್‌ʼ ಜಗಳದ ಘಟನೆಯನ್ನು ಮೆಲುಕು ಹಾಕಿ, ಮನಬಂದಂತೆ ಕಾಮೆಂಟ್‌ ಮಾಡಿದ್ದಾರೆ. ಇಷ್ಟಕ್ಕೂ ಪ್ರೇಮ್‌ ಹಾಕಿದ ಪೋಸ್ಟ್‌ನಲ್ಲಿ ಏನಿತ್ತು ಅಂದ್ರೆ...

Director Prem Shared The Re-Release Poster Of Actor Darshan Starrer Kariya

ಭಾರತೀಯ ಚಿತ್ರರಂಗದಲ್ಲಿ ಕರಿಯಾ ಸಿನಿಮಾ ಒಂದು ಮೈಲಿಗಲ್ಲು. ಇದೆಲ್ಲ ನಿಮ್ಮಿಂದ. ಸೆಲೆಬ್ರಿಟಿಗಳು ಶಾಂತಿ ತಾಳ್ಮೆ ಹಾಗು ಪ್ರೀತಿ ಇಂದ ಕರಿಯನನ್ನು ಹರಸಿ ಹಾರೈಸಿ ಎಂದು ಪ್ರೇಮ್‌ ಮನವಿ ಮಾಡಿದ್ದರು.

ʼಅಭಿಮಾನಿಗಳು ಯಾವುದೇ ಅತಿರೇಕಗಳನ್ನು ಮಾಡಬೇಡಿ. ನಿಮ್ಮ ಆನ್‌ಲೈನ್‌ ಬರವಣಿಗೆಗಳು ಬೇರೆಯವರಿಗೆ ನೋವು ತರದಿರಲಿ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಮನಬಂದಂತೆ ವರ್ತಿಸುತ್ತಿರುವ ಕೆಲ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿದ್ದಾರೆ. ನಟ ದರ್ಶನ್‌ ತೂಗುದೀಪ ಅವರು ಕಾನೂನು ಮುಕ್ತರಾಗಿ ಆದಷ್ಟು ಬೇಗ ಹೊರಗೆ ಬಂದು ನಿಮ್ಮ ನಮ್ಮ ಜೊತೆ ಬೆರೆಯಲಿ, ಬೆಳಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ, ಎಲ್ಲರಿಗೂ ಒಳ್ಳೆಯದಾಗಲಿ...ನಿಮ್ಮ ಪ್ರೀತಿಯ ಪ್ರೇಮ್‌ ಎಂದು ವಿಶೇಷವಾಗಿ ತಮ್ಮ ಟ್ವಿಟರ್‌ ಮೂಲಕ ಸಂದೇಶ ರವಾನಿಸಿದ್ದರು. ಈ ಒಂದು ಪೋಸ್ಟ್‌ಗೆ ಕಾಮೆಂಟ್‌ಗಳ ಸುರಿಮಳೆ ಹರಿದಿದ್ದು, ಈ ಹಿಂದೆ ದರ್ಶನ್‌ ಮತ್ತು ಪ್ರೇಮ್‌ ನಡುವೆ ಎದ್ದಿದ್ದ ʼಪುಡಾಂಗ್‌ʼ ಗಲಾಟೆಯನ್ನು ಉಲ್ಲೇಖಿಸಿ ಹಲವರು ಮನಸೋ ಇಚ್ಛೆ ಕಾಮೆಂಟ್ಸ್‌ ಮಾಡಿದ್ದಾರೆ.

Director Prem Shared The Re-Release Poster Of Actor Darshan Starrer Kariya

ಕಾಮೆಂಟ್ಸ್‌ ಏನು?: ಕೆಲವರು ʼನಿಮಗಂತೂ ಮಾನ ಮರ್ಯಾದೆ ಇಲ್ಲ, ನಿಂಗೆ ಮಾನ ಮರ್ಯಾದೆ ಇಲ್ವಾ ನಿಂಗೆ ಬೈದ್ರು ಸಪೋರ್ಟ್ ಮಾಡ್ತಿʼ, ʼಪ್ರೇಮ್ ಏನು ದೊಡ್ಡ ಪುಡಂಗ್ ಹ್ಹಾ? ಅಂದ ಕೊಲೆ ಆರೋಪಿ. ದರ್ಶನ್ ಜೊತೆ ಸಿನಿಮಾ ಮಾಡಲ್ಲ ಅಂದ ನೀವು. ಇವಾಗ ನಾಲಿಗೆ ಚಪ್ಪಲಿ ಆಯ್ತಾ?ʼ ನಿನ್ನಂತ ಪುಡಾಂಗ್ ಗಳಿಂದ ಅವ್ನು ಇವತ್ತು ಕಂಬಿ ಎಣಿಸ್ತಾ ಇದಾನೆ.., Thank you pudang sirʼ ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ನಿಮ್ಮಿಬ್ಬರ ಸ್ನೇಹ ಹೀಗೆಯೇ ಮುಂದುವರಿಯಲಿ..ಜೈ ಡಿ ಬಾಸ್‌ ಎಂದು ಕಾಮೆಂಟ್‌ ಹಾಕಿದ್ದಾರೆ.

ʼಪುಡಾಂಗ್‌ʼ ಹಿಂದಿನ ಕಥೆಯೇನು?: ದರ್ಶನ್ ತೂಗುದೀಪ್ 'ರಾಬರ್ಟ್' ಸಿನಿಮಾ ಮುಗಿದ ನಂತರ ನಿರ್ಮಾಪಕ ಉಮಾಪತಿ ಅವರೊಂದಿಗೆ ಕಿರಿಕ್ ಮಾಡಿಕೊಂಡರು. ಈ ಸಮಯದಲ್ಲಿ ಎಲ್ಲರ ಬಗ್ಗೆಯೂ ಆಕ್ರೋಶ ಹೊರ ಹಾಕಿ ವಾರ್ನಿಂಗ್ ಕೂಡ ಕೊಟ್ಟಿದ್ದರು. ಅಲ್ಲದೆ ಇದೇ ಸಮಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗ 'ಪ್ರೇಮ್ ಏನು ದೊಡ್ ಪುಡಾಂಗಾ?' ಅಂತಾ ಪ್ರಶ್ನೆ ಕೂಡ ಮಾಡಿದ್ದರು. ಇಷ್ಟು ಮಾತ್ರವಲ್ಲ ಉಮಾಪತಿ ಜೊತೆಗೆ ಕಿರಿಕ್ ಮಾಡಿಕೊಂಡು 'ಐಯೋ ತಗಡೇ' ಎಂಬ ಪದವನ್ನೂ ಫೇಮಸ್ ಮಾಡಿದ್ದರು ನಟ ದರ್ಶನ್. ಅಂದಿನಿಂದಲೂ ಪ್ರೇಮ್‌ ಹಾಗೂ ದರ್ಶನ್‌ ನಡುವೆ ಈ ಪುಡಾಂಗ್‌ ಪದ ಮುನ್ನೆಲೆಗೆ ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+