Daali Dhananjaya: ಧನಂಜಯ್ ಮದುವೆಗೆ ದರ್ಶನ್‌ನ ಕರೆದಿಲ್ವಾ, ಡಾಲಿ ಹೇಳಿದ್ದೇನು ?
Daali Dhananjaya: ಡಾಲಿ ಧನಂಜಯ್ ಅವರ ಮದುವೆ ಸಿದ್ಧತೆ ಜೋರಾಗಿದೆ. ರಾಜಕೀಯ ನಾಯಕರು, ಸಿನಿಮಾ ರಂಗದ ನಟ - ನಟಿಯರು ಸೇರಿದಂತೆ ಹಲವು ಗಣ್ಯರಿಗೆ ನಟ ಡಾಲಿ ಅವರು ಮದುವೆಗೆ ಆಹ್ವಾನಿಸುತ್ತಿದ್ದಾರೆ. ಡಾಲಿ ಅವರು ಡಾ. ಧನ್ಯತಾ ಅವರನ್ನು ಫೆಬ್ರವರಿ 16ರಂದು ಮದುವೆ ಆಗಲಿದ್ದಾರೆ. ಈಗಾಗಲೇ ಚಿತ್ರರಂಗದ ಹಲವರನ್ನು ಧನಂಜಯ್ ಅವರ ಮದುವೆಗೆ ಕರೆದಿದ್ದಾರೆ. ಆದರೆ, ನಟ ದರ್ಶನ್ ಅವರನ್ನು ಮದುವೆಗೆ ಕರೆದಿಲ್ಲ ಎನ್ನುವ ವಿಚಾರ ಚರ್ಚೆಗೆ ಗ್ರಾಸವಾಗಿದ್ದು. ಈ ಬಗ್ಗೆ ಡಿ - ಬಾಸ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ದರ್ಶನ್ ಅವರನ್ನು ಮದುವೆಗೆ ಕರೆಯುವ ಬಗ್ಗೆ ಧನಂಜಯ್ ಅವರೇ ರಿಯಾಕ್ಟ್ ಮಾಡಿದ್ದಾರೆ.
ಕಳೆದ ಎರಡು ತಿಂಗಳಿನಿಂದಲೂ ಹಲವು ಗಣ್ಯರು ಹಾಗೂ ಸಿನಿಮಾ ರಂಗದವರು ಮತ್ತು ಆಪ್ತರಿಗೆ ಆಮಂತ್ರಣ ಪತ್ರ ಕೊಡುತ್ತಿದ್ದಾರೆ. ನಟ ಡಾಲಿ ಧನಂಜಯ್ ಅವರ ಮದುವೆ ಆಮಂತ್ರಣ ಪತ್ರದ ಡಿಸೈನ್ ಹಾಗೂ ಸರಳತೆಯಿಂದಲೇ ಸಾಕಷ್ಟು ಸುದ್ದಿಯಾಗಿದೆ. ಧನಂಜಯ್ ಅವರು ತಮ್ಮ ಮದುವೆಗೆ ಆಹ್ವಾನಿಸಿದ ಸೆಲೆಬ್ರೆಟಿಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದರೆ, ನಟ ದರ್ಶನ್ ಅವರಿಗೆ ಆಹ್ವಾನ ಯಾಕೆ ನೀಡಿಲ್ಲ. ಆ ಫೋಟೋಗಳು ಕಾಣಿಸುತ್ತಿಲ್ಲ ಎಂದು ಬುಧವಾರ ಅವರನ್ನು ಪ್ರಶ್ನೆ ಮಾಡಲಾಗಿದ್ದು. ಅದಕ್ಕೆ ಅವರು ರಿಯಾಕ್ಟ್ ಮಾಡಿದ್ದಾರೆ.

ದರ್ಶನ್ ಅವರನ್ನು ಆಹ್ವಾನಿಸಲಿಲ್ಲವೇ ಧನಂಜಯ್ ?
ನಟ ದರ್ಶನ್ ಅವರು ಆರೋಗ್ಯ ಚಿಕಿತ್ಸೆ ಪಡೆದುಕೊಂಡು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಈಚೆಗೆ ಸಂಕ್ರಾಂತಿ ವಿಶ್ ಮಾಡುವ ಮೂಲಕ ಅವರು ಮತ್ತೆ ಸೋಷಿಯಲ್ ಲೈಫ್‌ಗೆ ಹಿಂದಿರುಗುತ್ತಿದ್ದಾರೆ. ಹೊಸ ಬದುಕು ಕಟ್ಟಿಕೊಳ್ಳಲಿ ಅಂತ ಅವರ ಫ್ಯಾನ್ಸ್ ಆಸೆ ಪಡುತ್ತಿದ್ದಾರೆ. ಈ ರೀತಿ ಇರುವಾಗಲೇ ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದೇ ವಿಷಯವನ್ನು ಡಾಲಿ ಧನಂಜಯ್ ಅವರಿಗೆ ಕೇಳಲಾಗಿದ್ದು, ಇದಕ್ಕೆ ಅವರು ರಿಯಾಕ್ಟ್ ಮಾಡಿದ್ದಾರೆ.
ನಾನು ಮದುವೆಗೆ ಎಲ್ಲರನ್ನೂ ಕರೆಯುತ್ತಿದ್ದೇನೆ ಎಂದಾದ ಮೇಲೆ ಅವರನ್ನು (ದರ್ಶನ್) ಕರೆಯುವ ಪ್ರಯತ್ನ ಮಾಡಿರುತ್ತೀನಿ ಅಲ್ವಾ. ಆದರೆ, ಅವರನ್ನ ರೀಚ್ ಮಾಡಲಿಕ್ಕೆ ಆಗುತ್ತಿಲ್ಲ. ನಾನು ತುಂಬಾನೇ ಪ್ರೀತಿಯಿಂದ ಎಲ್ಲರನ್ನೂ ಕರೆಯುತ್ತಿದ್ದೇನೆ. ಅವರನ್ನೂ ತುಂಬಾ ಪ್ರೀತಿಯಿಂದ ಇಲ್ಲಿಂದಲೇ ಕರೆಯುತ್ತೇನೆ ಎಂದು ಧನಂಜಯ್ ಅವರು ಹೇಳಿದ್ದಾರೆ.
ದರ್ಶನ್ ಅಭಿಮಾನಿಗಳ ಬೇಸರ: ಧನಂಜಯ್ ಅವರ ಉತ್ತರಕ್ಕೆ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಉಳಿದ ನಟರಿಗೆ ಧನಂಜಯ್ ಅವರು ಕರೆ ಮಾಡಿ ಅವರು ಇರುವಲ್ಲಿಯೇ ಹೋಗಿ ಮದುವೆ ಆಮಂತ್ರಣ ಪತ್ರವನ್ನು ಕೊಟ್ಟಿದ್ದಾರೆ. ಆದರೆ, ದರ್ಶನ್ ಅವರಿಗೆ ಯಾಕೆ ಕೊಡಲಿಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಕೆಲವರು ಧನಂಜಯ್ ಅವರು ದರ್ಶನ್ ಅವರನ್ನು ಭೇಟಿ ಮಾಡುವುದಕ್ಕೆ ಪ್ರಯತ್ನ ಮಾಡಿರುವುದಾಗಿ ಪ್ರಮಾಣಿಕವಾಗಿ ಹೇಳಿದ್ದಾರೆ. ಈ ವಿಷಯದಲ್ಲಿ ವಿವಾದ ಮಾಡುವುದು ಒಳ್ಳೆಯದಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ವಾದ - ವಿವಾದ ನಡೆಯುತ್ತಿದೆ.












Click it and Unblock the Notifications